ಸಾಂಸ್ಕೃತಿಕ ಸಂಗೀತೋತ್ಸವ 

Get real time updates directly on you device, subscribe now.

ಕೊಪ್ಪಳ : ಶ್ರೀ ಅಭಿನವ ಸಂಗೀತ ಕಲಾ ಹಾಗೂ ಸಾಂಸ್ಕೃತಿಕ ಶಿಕ್ಷಣ ಸಂಸ್ಥೆಯ ಆರನೇ ವಾರ್ಷಿಕೋತ್ಸವ ನಿಮಿತ್ತ ನಗರದ ಸಾಹಿತ್ಯ ಭವನದಲ್ಲಿ ಇಂದು ದಿ.17ರಂದು ಶನಿವಾರ ಸಂಜೆ 5ಗಂಟೆಗೆ ಸಾಂಸ್ಕೃತಿಕ ಸಂಗೀತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ ಸಂಸದ ಸಂಗಣ್ಣ ಕರಡಿ ,ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ರಾಜ್ಯ ಜೆಡಿಎಸ್ ಕೋರ್  ಕಮಿಟಿ  ಸದಸ್ಯ ಸಿ.ವಿ. ಚಂದ್ರಶೇಖರ್,ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ರಾಜಶೇಖರ್  ಹಿಟ್ನಾಳ್ ,ಕೊಪ್ಪಳ ನಗರ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಮೈನಹಳ್ಳಿ,ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಸುರೇಶ್ ಬೂಮರೆಡ್ಡಿ ,ಶ್ರೀ ಗವಿಸಿದ್ದೇಶ್ವರ ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜಶೇಖರಗೌಡ ಆಡೂರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೂಳಪ್ಪ ಹಲಿಗೇರಿ, ಗಂಗಾವತಿ ವಿಧಾನಸಭಾ ಕ್ಷೇತ್ರದ  ಪಕ್ಷದ ಮುಖಂಡ  ಹನುಮಂತಪ್ಪ ಅರಸನಕೇರಿ,ನಗರ ಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್  ಸೇರಿದಂತೆ ಅನೇಕರು ಪಾಲ್ಗೊಳ್ಳುವರು.
ಸಂಗೀತೋತ್ಸವದಲ್ಲಿ  ಸರಿಗಮಪ ಗಾಯಕ ಮಹೆಬೂಬ್ ಸಾಬ್, ಕಲರ್ಸ್ ಕನ್ನಡ ಗಾಯಕಿ ಕುಮಾರಿ ಪ್ರಭಾ ಕಂಬಾರ್ , ಕೊಪ್ಪಳದ ಖ್ಯಾತ ಗಾಯಕ ಹೇಮಂತ್ ಕುಮಾರ್ ದೊಡ್ಡಮನಿ ,ಶರಾವತಿ ಭದ್ರಾವತಿ ಸೇರಿದಂತೆ ಅನೇಕ ಗಾಯಕರು ಭಾಗವಹಿಸುವರು ಎಂದು ಸಂಸ್ಥೆಯ ಮುಖ್ಯಸ್ಥರಾದ ಭಾಷಾಸಾಬ್ ಹಿರೇಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!