ಕೃಷಿ ಉತ್ತೇಜನಕ್ಕೆ ಉತ್ಪನ್ನಗಳ ಮೌಲ್ಯವರ್ಧನೆ ಆಗಲಿ -ಕೃಷ್ಣ ಉಕ್ಕುಂದ

Get real time updates directly on you device, subscribe now.

ಡೊಂಬರಳ್ಳಿಯಲ್ಲಿ ಧಾರ್ಮಿಕ ಚಿಂತನೆ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ

 ಕೊಪ್ಪಳ

ಕೊಪ್ಪಳ ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ಕರಿಯಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಗ್ರಾಮ ದೇವತೆ ಶ್ರೀ ದ್ಯಾಮಮ್ಮ ದೇವಿಯ ಜಾತ್ರೆಯ ನಿಮಿತ್ಯ ಹಮ್ಮಿಕೊಂಡಿದ್ದ ಧಾರ್ಮಿಕ ಚಿಂತನೆ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಗಣ್ಯರು ಉದ್ಘಾಟಿಸಿದರು.

ತೋಟಗಾರಿಕಾ ಬೆಳಗಳು ಸೇರಿದಂತೆ ಕೃಷಿ ಉತ್ಪನ್ನಗಳ ಮೌಲ್ಯವರ್ದನೆಯಿಂದ ಕೃಷಿ ಹೆಚ್ಚು ಲಾಭದಾಯಕ ಮತ್ತು ಆರ್ಥಿಕ ಅಭಿವೃದ್ಧಿ ಗೆ ಸಹಕಾರಿ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಹೇಳಿದ್ದಾರೆ.

ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ಕರಿಯಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಗ್ರಾಮ ದೇವತೆ ಶ್ರೀ ದ್ಯಾಮಮ್ಮ ದೇವಿಯ ಜಾತ್ರೆಯ ನಿಮಿತ್ಯ ಹಮ್ಮಿಕೊಂಡಿದ್ದ ಧಾರ್ಮಿಕ ಚಿಂತನೆ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು,ರೈತರು ತಂತ್ರಜ್ಞಾನ ವನ್ನೂ ಬಳಸಿಕೊಂಡು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದೇ ಆದಲ್ಲಿ ಹೆಚ್ಚು ಲಾಭದಾಯಕವಾಗುತ್ತದೆ ಎಂದರು.

 

ತೋಟಗಾರಿಕಾ ಬೆಳೆಯಲ್ಲಿ ಡೊಂಬರಳ್ಳಿ ಗ್ರಾಮದ ರೈತರು ಮಾದರಿಯಾಗಿದ್ದಾರೆ. ಸರ್ಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಪ್ರಗತಿ ಸಾಧಿಸಿದ್ದಾರೆ‌ . ಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಅತೀ ಹೆಚ್ಚು ಬಾಳೆ ಬೆಳೆಯುತ್ತಾರೆ. ಆದರೆ ಮಧ್ಯವರ್ತಿಗಳ ಮೂಲಕ‌ ಮಾರಾಟ ಮಾಡುವುದರಿಂದ ನಿರೀಕ್ಷಿತ ಲಾಭವಾಗುವುದಿಲ್ಲ. ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಗುಣಮಟ್ಟದ ಉತ್ಪಾದನೆ ಮಾಡಿದರೆ ವಿದೇಶಕ್ಕೆ ರಫ್ತು ಮಾಡಿದರೆ ಈಗಿರುವ ಲಾಭಕ್ಕಿಂತ ದುಪ್ಪಟ್ಟು ಲಾಭ ಪಡೆಯಬಹುದಾಗಿದೆ ಎಂದರು.

 

ಬಾಳೆಯ ಹಣ್ಣಿನ ಮಾರಾಟದ ಜೊತೆಗೆ ಅದರ ದಿಂಡು, ಹೂ ಎಲೆಯನ್ನು ಬಳಕೆ ಮಾಡಿಕೊಂಡು ಅನೇಕ ಉತ್ಪಾದನೆ ಮಾಡಬಹುದಾಗಿದೆ. ಬಾಳೆ ಕಾಯಿಯಿಂದ ಮೈದಾ ಮಾದರಿ ಅತ್ಯುಪಯುಕ್ತ ಹಿಟ್ಟುಸಹ ಸಿದ್ದ ಮಾಡಬಹುದಾಗಿದೆ. ಪೇಪರ್ ಸಹ ಸಿದ್ದ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆ ಉಪಕೃಷಿ ನಿರ್ದೇಶಕ ಸಹದೇವ ಯರಗುಪ್ಪ ಸಿರಿಧಾನ್ಯಗಳ ಕುರಿತು ಮಾತನಾಡಿದರು. ಆಧುನಿಕ ಜೀವನ ಪದ್ಧತಿ ಮತ್ತು ಅಹಾರ ಪದ್ಧತಿಯಿಂದ ಜನರ ಆರೋಗ್ಯ ಹಾಳಾಗುತ್ತಿದೆ. ಇದಕ್ಕೆ ಪರಿಹಾರ ಎಂದರೆ ಸಿರಿಧಾನ್ಯಗಳ ಬಳಕೆ ಎಂದರು.

 

ನಮ್ಮ ಅಹಾರ ಸಂಸ್ಕೃತಿ ಮರೆತಿರುವ ನಾವು ಆಧುನಿಕ ಬದುಕಿನ ಭರಾಟೆಯಲ್ಲಿ ಕರಗಿ ಹೋಗುತ್ತಿದ್ದೇವೆ.‌ಇದಕ್ಕೆ ಕಡಿವಾಣ ಹಾಕುವ ಮೂಲಕ ಹಳ್ಳಿಯ ಬದುಕು ಸಾಗಿಸಬೇಕು ಎಂದರು.

 

ದದೆಗಲ್ ಸಿದ್ಧಾರೂಢ ಮಠದ ಶ್ರೀ ಸದ್ಗುರು ಆತ್ಮಾನಂದ ಮಹಾಸ್ವಾಮಿಗಳು ಹಾಗೂ ಕೊಂಬಳಿ ಚೌಕಿ‌ಮಠದ ಭಾವೈಕ್ಯತೆಯ ಸದ್ಗುರು ಶ್ರೀ ಗಾಡಿತಾತ ಮಹಾಸ್ವಾಮೀಜಿಗಳು ಆರ್ಶಿವಚನ ನೀಡಿದರು.

 

ಮೂರ್ತಿ ಮೆರವಣಿಗೆ : – ಗ್ರಾಮದಲ್ಲಿ ಶ್ರದ್ಧಾ, ಭಕ್ತಿಯಿಂದ ಗ್ರಾಮದಲ್ಲಿ ಶ್ರೀ ದ್ಯಾಮಮ್ಮ ದೇವಿಯ ಮೂರ್ತಿ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

 

ಪ್ರಕಾಶ ಹೆಮ್ಮಾಡಿ ಹಾಗೂ ನೇತ್ರಾವತಿ ಹೆಮ್ಮಾಡಿ ಜಾದು ಪ್ರದರ್ಶನ, ಮಾರುತಿ ಚಿತ್ರಗಾರ ತಂಡದ ಯೋಗ ಹಾಗೂ ಕೂಗಳಿ ಕೊಟ್ರೇಶ ಅವರ ಹಾಸ್ಯ ಜನಮನಸೂರೆಗೊಂಡವು.ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ತಡರಾತ್ರಿ ೧೨.೩೦ ವರೆಗೆ ನಡೆದರೂ ಕಿಕ್ಕಿರಿದ ಜನ ಸೇರಿದ್ದರು‌.

 

ಪ್ರಾರಂಭದಲ್ಲಿ ಶ್ರೀ ಗವಿಸಿದ್ದೇಶ್ವರ ಸ್ವರ ಸಂಚಾರ ತಂಡ ಪ್ರಾರ್ಥನೆ ಹಾಗೂ ಸುಗಮ ಸಂಗೀತ ನೀಡಿದರು.

 

ಭೀಮನಗೌಡ ಪೊಲೀಸ್ ಪಾಟೀಲ್ ಸ್ವಾಗತಿಸಿದರೆ, ಕೃಷ್ಣಾರಡ್ಡಿ ಗಲಬಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಕಾವಲಿ ಹಾಗೂ ಪ್ರತಾಪಗೌಡ ಅತಿಥಿಗಳ ಪರಿಚಯ ಮಾಡಿದರು. ಪತ್ರಕರ್ತ ಸೋಮರಡ್ಡಿ ಅಳವಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

 

 

 

 

 

 

 

 

  

Get real time updates directly on you device, subscribe now.

Comments are closed.

error: Content is protected !!
%d bloggers like this: