ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಿರಿ: ಹನಮಂತಪ್ಪ
ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಡಿ.ದೇವರಾಜ್ ಅರಸ್ ವಸತಿ ನಿಲಯದಲ್ಲಿ EVM, VVPAT ಮೂಲಕ ಮತದಾನ ಜಾಗೃತಿ
ಕೊಪ್ಪಳ:- ಶೀಘ್ರದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ ಜರುಗಲಿರುವ ಪ್ರಯುಕ್ತ ಎಲ್ಲಾ ವಿದ್ಯಾರ್ಥಿನಿಯರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕೊಪ್ಪಳ ತಾಲೂಕ ಪಂಚಾಯತಿಯ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನಮಂತಪ್ಪ ಕರೆ ನೀಡಿದರು.
ದಿನಾಂಕ:13-02-2024ರಂದು ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಡಿ ದೇವರಾಜು ಅರಸ್ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ತಾಲೂಕ ಸ್ವೀಪ್ ಸಮಿತಿಯಿಂದ ಏರ್ಪಡಿಸಿದ್ದ EVM, VV PATನಲ್ಲಿ ಮತದಾನ ಮಾಡುವ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. EVM, VV PAT ನಲ್ಲಿ ಮೊದಲ ಬಾರಿಗೆ ಮತದಾನ ಮಾಡುವವರು ಇದರ ಬಗ್ಗೆ ಮಾಹಿತಿ ಕಡ್ಡಾಯವಾಗಿ ಪಡೆಯತಕ್ಕದ್ದು. ಮತದಾನ ಎನ್ನುವದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹು ದೊಡ್ಡ ಗೌರವವಿದೆ. ಸಂವಿಧಾನ ಕೂಡಾ 18 ವರ್ಷ ಮೇಲ್ಪಟ್ಟವರಿಗೆ ಮತದಾನ ಮಾಡಲು ಅವಕಾಶ ನೀಡಿರುವದರಿಂದ ಯಾರು ಕೂಡಾ ಮತದಾನದಿಂದ ಹೊರಗುಳಿಯಬಾರದು. ಮತದಾನ ಸಂದರ್ಭದಲ್ಲಿ ಮತದಾರರು ಯಾವುದೇ ಆಸೆ, ಆಮೀಷಗಳಿಗೆ ಒಳಗಾಗದೇ ಸುಭದ್ರ ದೇಶ ನಿರ್ಮಿಸಲು ಪ್ರತಿಯೊಬ್ಬರು ಸೂಕ್ತ ಎನಿಸಿದ ವ್ಯಕ್ತಿಯನ್ನು ಆಯ್ಕೆ ಮಾಡಲು ಮತ ಚಲಾಯಿಸಬೇಕು. ಲೋಕಸಭಾ ಚುನಾವಣೆ ಜರುಗಲಿದ್ದು ಪ್ರಯುಕ್ತ ಮತದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ EVM, VVPAT ಬಳಕೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದರು. ಪ್ರತಿಯೊಬ್ಬರು ತಮ್ಮ ಮನೆಯಲ್ಲಿರುವ 18 ವರ್ಷ ಮೇಲ್ಪಟ್ಟ ಸದಸ್ಯರಿಗೆ ಮತದಾನ ಕುರಿತು ತಿಳಿ ಹೇಳಿ ಕಡ್ಡಾಯವಾಗಿ ಮತದಾನ ಮಾಡಲು ಮನವೋಲಿಸಬೇಕು. ಇದರಿಂದ ಗ್ರಾಮದಲ್ಲಿ ಮತದಾನ ಶೇಕಡಾವಾರು ಹೆಚ್ಚಳಕ್ಕೆ ಕಾರಣವಾಗುತ್ತದೆಂದರು.
ತಾಲೂಕ ಸ್ವೀಪ್ ಸಮಿತಿಯ ಬಸವರಾಜ ಬಳಿಗಾರ ಮಾತನಾಡಿ EVM ನಲ್ಲಿ ನಾವು ಮತ ಚಲಾಯಿಸಿದ ನಂತರ VVPAT ನಲ್ಲಿ ನಾವು ಮತ ಚಲಾಯಿಸಿದ ಚಿಹ್ನೆ 07 ಸೆಕೆಂಡ್ ಗಳ ನಮಗೆ ಯಂತ್ರದಲ್ಲಿ ಪ್ರದರ್ಶಿಸುತ್ತದೆ. ಆದ್ದರಿಂದ ಯುವ ಮತದಾರರು ಗೊಂದಕ್ಕೆ ಒಳಗಾಗದೇ ನಿರ್ಭಯವಾಗಿ ಮತ ಚಲಾಯಿಸಿರಿ. ಮತದಾರರಲ್ಲಿ EVM, VVPAT ಕುರಿತು ಯಾವುದೇ ಗೊಂದಲಗಳು ಉಂಟಾಗದಂತೆ ಪ್ರಾತ್ಯಕ್ಷಿಕೆ ಮೂಲಕ ಮನವರಿಕೆ ಮಾಡಿದರು. ಯುವ ಮತದಾರರು EVM, VV PAT ನಲ್ಲಿ ಮತದಾನ ಮಾಡಿ ಖುಷಿಪಟ್ಟರು.
ತಾಲೂಕ ಬಿಸಿಎಂ ಅಧಿಕಾರಿ ನಾಗರತ್ನ, ತಾಲೂಕ ಸ್ವೀಪ್ ಸಮಿತಿಯ ಸದಸ್ಯ ಬಸವರಾಜ ಬಳಿಗಾರ, ಹಾಸ್ಟೇಲ್ ವಾರ್ಡನ್ ಗಿರಿಜಾ ದೇಸಾಯಿ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಹಾಜರಿದ್ದರು.
Comments are closed.