ಫೆ. 13 ರಿಂದ ಡೊಂಬರಳ್ಳಿಯಲ್ಲಿ ಕರಿಯಮ್ಮ, ದ್ಯಾಮಮ್ಮ ಜಾತ್ರೆ
– ಪ್ರಾಣಿ ಬಲಿ ಇಲ್ಲದ ಗ್ರಾಮ ದೇವತೆ ಜಾತ್ರೆ
– ಡೊಂಬರಳ್ಳಿ ಗ್ರಾಮಸ್ಥರ ಮಾದರಿ ನಡೆ
ಕೊಪ್ಪಳ : ಗ್ರಾಮದ ದೇವತೆಯಾಗಿರುವ ಶ್ರೀ ದ್ಯಾಮಮ್ಮ ಜಾತ್ರೆ ಎಂದರೇ ಸಾಕು ಎಷ್ಟು ಕೋಣ, ಎಷ್ಟು ಕುರಿ ಬಲಿ ನೀಡಲಾಗುತ್ತದೆ ಎನ್ನುವ ಪ್ರಶ್ನೆ ಸರ್ವೆ ಸಾಮಾನ್ಯ. ಆದರೆ, ಕೊಪ್ಪಳ ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ದ್ಯಾಮವ್ವ ಜಾತ್ರೆಯನ್ನು ಸುಮಾರು ವರ್ಷಗಳಿಂದ ಯಾವುದೇ ಪ್ರಾಣಿ ಬಲಿ ಇಲ್ಲದೆ ಮಾಡಿಕೊಂಡು ಬರಲಾಗುತ್ತಿದ್ದು, ಈ ವರ್ಷವೂ ಅದೇ ರೀತಿ ಆಚರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಫೆ. 13 ರಿಂದ ಫೆ. 16 ವರೆಗೂ ಶ್ರೀ ಕರಿಯಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗ್ರಾಮ ದೇವತೆ ಶ್ರೀ ದ್ಯಾಮವ್ವ ಜಾತ್ರಾಮಹೋತ್ಸವ ನಡೆಯಲಿದೆ.
ಫೆ. 13 ರಂದು ಮಂಗಳವಾರ ಕರಿಯಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ನಿಮಿತ್ಯ ಬೆಳಗ್ಗೆಯಿಂದ ಸಂಜೆಯವರೆಗೂ ಹೋಮ, ಹವನ, ಶುದ್ಧೀಕರಣ ನಡೆಯಲಿದೆ.
ಫೆ. 14 ರಂದು ಮೈನಳ್ಳಿ-ಬಿಕನಳ್ಳಿಯ ಉಜ್ಜಯನಿ ಶಾಖಾಮಠದ ಶ್ರೀ ಸಿದ್ಧೇಶ್ವರ ಶಿವಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಕರಿಯಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ಜರುಗುವುದು ಮತ್ತು ನಂತರ ಮಹಾಪ್ರಸಾದ ಜರುಗುವುದು.
ಫೆ. 15 ರಂದು ಶ್ರೀ ದ್ಯಾಮಮ್ಮ ಜಾತ್ರೆಯ ಪ್ರಾರಂಭವಾಗಲಿದ್ದು, ಬೆಳಗ್ಗೆಯೇ 5 ಗಂಟೆಗೆ ಕುಂಭ ದೊಂದಿಗೆ ಮೆರವಣಿಗೆ ಮತ್ತು ಶ್ರೀ ದ್ಯಾಮಮ್ಮ ಮೂರ್ತಿಯನ್ನು ಚೌಕಿಕಟ್ಟೆಯಲ್ಲಿ ಕೂಡ್ರಿಸಿ, ಉಡಿತುಂಬಹಲಾಗುವುದು.
ಫೆ. 16 ರಂದು ಶ್ರೀ ವಿರುಪಾಕ್ಷ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀ ದ್ಯಾಮವ್ವ ದೇವಿಯನ್ನು ಚೌಕಿಕಟ್ಟೆಯಿಂದ ಗುಡಿಗೆ ಕರೆತಂದು ಪ್ರತಿಷ್ಠಾಪಿಸಿ ಪೂರ್ಣಾಹುತಿ ಮಹಾಪೂಜೆ ನಡೆಯುವುದು.
ಧಾರ್ಮಿಕ ಚಿಂತನೆ ಮತ್ತು ಸಾಂಸ್ಕೃತಿಕ ಸಂಭ್ರಮ
ಜಾತ್ರಾಮಹೋತ್ಸವ ನಿಮಿತ್ಯ ಫೆ. 15 ರಂದು ಸಂಜೆ 5.30 ರಿಂದ ಧಾರ್ಮಿಕ ಚಿಂತನೆ ಮತ್ತು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಗಳು ನಡೆಯಲಿವೆ.
ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಶ್ರೀ ಸಿದ್ಧೇಶ್ವರ ಶಿವಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.
ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಕೃಷ್ಣಾ ಉಕ್ಕುಂದ ಹಾಗೂ ಕೃಷಿ ಇಲಾಖೆಯ ಉಪಕೃಷಿ ನಿರ್ದೇಶಕ ಡಾ. ಸಹದೇವ ಯರಗುಪ್ಪ ಅವರು ವಿಶೇಷ ಉಪನ್ಯಾಸ ನೀಡುವರು. ಅಂತರಾಷ್ಟ್ರೀಯ ಕಲಾವಿದ ಕೋಗಳಿ ಕೊಟ್ರೇಶ ಅವರು ಹಾಸ್ಯ ಸಂಜೆ ನಡೆಸಿಕೊಡುವರು. ಮಾರುತಿ ಚಿತ್ರಗಾರ ಅವರ ತಂಡದಿಂದ ಯೋಗ ಪ್ರದರ್ಶನ, ಪ್ರಕಾಶ ಹೆಮ್ಮಾದಿ ಹಾಗೂ ನೇತ್ರಾವತಿ ಹೆಮ್ಮಾಡಿ ಅವರಿಂದ ಜಾದು ವಿಸ್ಮಯ ಕಾರ್ಯಕ್ರಮ ನಡೆಯಲಿವೆ.
ಫೆ. 16 ರಂದು ಸಂಜೆ ಧಾರ್ಮಿಕ ಚಿಂತನಾ ಮತ್ತು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಗಳು ನಡೆಯಲಿದ್ದು, ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಪ್ರಗತಿಪರ ಮಹಿಳೆ ಕವಿತಾ ಮಿಶ್ರಾ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮೌನೇಶ ವಡ್ಡಟ್ಟಿ ಅವರು ಕರಾಟೆ ಪ್ರದರ್ಶನ ಮಾಡಲಿದ್ದಾರೆ. ಜೀವನಸಾಹ ಬಿನ್ನಾಳ ಹಾಸ್ಯ ಕಾರ್ಯಕ್ರಮ ಹಾಗೂ ಜಾನಪದ ವೈಭವ ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಜಾನಪದ ಕಲಾವಿದ ಗುರುರಾಜ ಹೊಸಕೋಟೆ ಅವರ ತಂಡ ಪ್ರದರ್ಶನ ನೀಡಲಿದೆ.
Comments are closed.