ಪಿ.ಎಲ್.ಡಿ ಬ್ಯಾಂಕ್ ಗೆ ನಾಮನಿರ್ದೇಶನ : ಅಸ್ಮಾನ್ ಸಾಬ್ ಕರ್ಕಿಹಳ್ಳಿಗೆ ಸನ್ಮಾನ

Get real time updates directly on you device, subscribe now.

ಕೊಪ್ಪಳ : ಪಿ ಎಲ್ ಡಿ ಬ್ಯಾಂಕ್ ಗೆ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಅಸ್ಮಾನ್ ಸಾಬ್ ಕರ್ಕಿಹಳ್ಳಿ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ತಾಲೂಕಿನ ಕಾಂಗ್ರೆಸ್ ಮುಖಂಡ, ಅಲ್ಪಸಂಖ್ಯಾತರ ಯುವ ನಾಯಕ ಅಸ್ಮಾನಸಾಬ್ ಕರ್ಕಿಹಳ್ಳಿ ಅವರನ್ನು ಬ್ಯಾಂಕಿನಲ್ಲಿ ಅಧಿಕಾರ ಸ್ವೀಕರಿಸಿದ ವೇಳೆ ಹಲವು ಮುಖಂಡರು ಸೇರಿ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಮಾತನಾಡಿ, ನೂರಾರು ಜನ ಪ್ರಮುಖ ಪದಾಧಿಕಾರಿಗಳು, ಕಾರ್ಯಕರ್ತರು ಸೇರಿ ಶ್ರಮವಹಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ, ಕಾಂಗ್ರೆಸ್ ಈಗ ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸುತ್ತಲೇ ಕಾರ್ಯಕರ್ತರನ್ನು ಗುರುತಿಸಿ ಅಧಿಕಾರ ನೀಡುತ್ತಿದೆ, ಅಸ್ಮಾನ ಅವರೂ ಸಹ ಪಕ್ಷದಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿದ್ದಾರೆ, ಅವರ ಕ್ಷೇತ್ರದಲ್ಲಿ ಅವರಿಗೆ ಅವಕಾಶ ನೀಡಿದ್ದು, ಪಕ್ಷದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಅವರಿಂದ ಪಕ್ಷವೂ ಬೆಳೆಯಲಿ ಎಂದು ಶುಭ ಹಾರೈಸಿದರು.
ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಮೈನಾರಿಟಿ ಸೆಲ್ ಅಧ್ಯಕ್ಷ ಸಲೀಂ ಅಳವಂಡಿ, ಎಸ್.ಟಿ. ಸೆಲ್ ತಾಲ್ಲೂಕು ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಕಾರ್ಮಿಕ ಘಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪಂಡಿತ್, ಮುಖಂಡರಾದ ನಿಂಗಜ್ಜ ಶಹಪೂರ, ರಿಯಾಜ್ ಮಂಗಳಾಪೂರ, ಡಿ. ಎಂ. ದೊಡ್ಡಮನಿ ಇತರರು ಇದ್ದರು.

 

Get real time updates directly on you device, subscribe now.

Comments are closed.

error: Content is protected !!
%d bloggers like this: