ಪೋಲಿಸ್ ಅಧಿಕಾರಿ ದಿ. ರವಿ ಉಕ್ಕುಂದರ  ಕುಟುಂಬಕ್ಕೆ 50 ಲಕ್ಷ ಪರಿಹಾರ ಧನ ವಿತರಣೆ

Get real time updates directly on you device, subscribe now.

ಕೊಪ್ಪಳ : ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದ  ಕೊಪ್ಪಳದ ಜನಪ್ರಿಯ ಪೊಲೀಸ್ ಅಧಿಕಾರಿಯಾಗಿದ್ದ ದಿ.  ರವಿ ಉಕ್ಕುಂದರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನು ಇಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಮ್ಯಾನೇಜರ್  ರವಿಕುಮಾರ್ ವಿತರಿಸಿದರು.

ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಯಶೋಧಗೋಡಿ ಇವರ ಸಮ್ಮುಖದಲ್ಲಿ ಅವರ ಕುಟುಂಬಕ್ಕೆ  ಪರಿಹಾರದ ಚೆಕ್ಕನ್ನು  ವಿತರಣೆ ಮಾಡಲಾಯಿತು. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಸ್ಯಾಲರಿ ಖಾತೆಯನ್ನು ಹೊಂದಿರುವ  ವ್ಯಕ್ತಿಗಳು ಆಕಸ್ಮಿಕವಾಗಿ ,ಅನಿರೀಕ್ಷಿತವಾಗಿ,  ಅಪಘಾತದಲ್ಲಿ  ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ  ಪಿಎನ್ ಬಿ ರಕ್ಷಕ್ ಪ್ಲಸ್ ಯೋಜನೆಯಂತೆ ಪರಿಹಾರದ ಹಣನ್ನು   ಮೂಲಕ ವಿತರಿಸಲಾಗುತ್ತದೆ. ಅದರಂತೆ ಅಪಘಾತದಲ್ಲಿ ಸಾವನ್ನಪ್ಪಿದ ರವಿ ಉಕ್ಕುಂದರ ಕುಟುಂಬಕ್ಕೆ ಇಂದು 50 ಲಕ್ಷ ರೂಪಾಯಿಯ ಪರಿಹಾರ ಧನದ ಚೆಕ್ಕನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರವಿ ಉಕ್ಕುಂದರ ಮಾವನವರಾದ ಹನುಮಂತಪ್ಪ ಓಲೇಕಾರ, ವೈರಲೆಸ್ ವಿಭಾಗದ ಸಿಪಿಐ ಮಲ್ಲನಗೌಡರ, ರವಿ ಉಕ್ಕುಂದರ ಮಕ್ಕಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: