ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕಾಂತ್ರಿಕಾರಿ ಬದಲಾವಣೆ-ಶಾಸಕ ಕೆ. ರಾಘವೇಂದ್ರ ಹಿಟ್ನಾಳ

Get real time updates directly on you device, subscribe now.

 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಫೇಸ್-೧ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ :

ಕೊಪ್ಪಳ: ೧೧ನಗರದ ಹಳೇ ಜಿಲ್ಲಾ ಆಸ್ಪತ್ರೆ ಹತ್ತಿರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಫೇಸ್-೧ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಬಳಿಕ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ರವರು, ಕೊಪ್ಪಳ ನಗರದಲ್ಲಿ ಹಲವಾರು ಇಲಾಖೆಗಳು ಸ್ವತಃ ಕಟ್ಟಡವಿಲ್ಲದ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಡೆಸಿತ್ತಿದ್ದು, ಎಲ್ಲಾ ಇಲಾಖೆಗಳಿಗೂ ಸ್ವತಃ ಕಟ್ಟಡ ಪೂರೈಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು. ಇದರಿಂದ ಕಛೇರಿ ಕಾರ್ಯಾಲಯಗಳ ಕೆಲಸ ಕಾರ್ಯಗಳು ಸುಗಮವಾಗಿ ನಡಿಯುತ್ತೆ, ಹಾಗೂ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕಾಂತ್ರಿಕಾರಿ ಬದಲಾವಣೆಗಳು ಆಗುತ್ತಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು, ಮಲ್ಟಿ ಸ್ಪೆಷಾಲಿಸ್ಟ ಸರಕಾರಿ ಆಸ್ಪತ್ರೆಗೆ ಮಾನ್ಯ ಸಿದ್ದರಾಮಯ್ಯ ನವರ ಸರ್ಕಾರ ಅನುದಾನ ಬಿಡುಗಡೆಗೊಳಿಸುದ್ದು, ಶೀದಲ್ಲಿ ಪೂರ್ಣಗೊಳ್ಳುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ ಪಾಷ ಪಲ್ಟನ್, ಮಾಜಿ ಜಿ.ಪಂ ಅಧ್ಯಕ್ಷ ನಾಗರಳ್ಳಿ ವಕೀಲರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರಸನ್ನ ಗಡಾದ ನಗರಸಭೆ ಸದಸ್ಯರಾದ ಅಜಿಮ್ ಅತ್ತಾರ, ವಿರುಪಾಕ್ಷಪ್ಪ ಮೋರನಾಳ, ಅರು ಅಪ್ಪುಶೆಟ್ಟಿ ಲತಾ ಗವಿಸಿದ್ದಪ್ಪ ಚಿನ್ನುರು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ ಕಾಟನ್ ಪಾಷ , ಪದ್ಮಾವತಿ ಕಂಬಳಿ, ರೇಖಾ ಬಿಜಾಪುರ ಮುಖಂಡರಾದ ನಾಗರಾಜ ಪಟವಾರಿ ಗವಿಸಿದ್ದಪ್ಪ ಚಿನ್ನೂರು, ಮಲ್ಲಿಕಾರ್ಜುನ ಪೂಜಾರ, ನಾಗರಾಜ ಜುಮ್ಮಣ್ಣನವರ, ತಾಲೂಕು ಮತ್ತು ಜಿಲ್ಲಾ ಅಧಿಕಾರಿಗಳು ಹಾಗೂ ಇನ್ನಿತರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: