ಸಂಪಾದಕ ರವಿ ಕುಮಾರ್ ಡಿ. ಮೇಲೆ ದಾಳಿ ನಡೆಸಿದ ಹಲ್ಲೆ ಕೋರರ ಬಂಧನಕ್ಕೆ ವಿವಿಧ ಸಂಘಟನೆಗಳ ಆಗ್ರಹ

Get real time updates directly on you device, subscribe now.

ಕೊಪ್ಪಳ :  ಜಿಲ್ಲೆಯ ಗಂಗಾವತಿಯ ನಿತ್ಯ ಕರ್ನಾಟಕ ದಿನ ಪತ್ರಿಕೆಯ ಸಂಪಾದಕ ರವಿ ಕುಮಾರ್ ಡಿ. ಅವರ ಮೇಲೆ ಹಾಡು ಹಗಲೇ ದಾಳಿ ನಡೆಸಿದ ಹಲ್ಲೆ ಕೋರರನ್ನು ಬಂಧಿಸಿ ಕಠಿಣ ಕ್ರಮಕ್ಕೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರ ಅನುಪಸ್ಥಿತಿಯಲ್ಲಿ ಜಿಲ್ಲಾ ಪೊಲೀಸ್ ಭವನದಲ್ಲಿ ಸಿಬ್ಬಂದಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಗಂಗಾವತಿ ನಗರದ ನಿತ್ಯ ಕರ್ನಾಟಕ ದಿನ ಪತ್ರಿಕೆ ಸಂಪಾದಕ ರವಿ ಕುಮಾರ್.ಡಿ ಅವರು ತಮ್ಮ ಪತ್ರಿಕೆಯಲ್ಲಿ ಗಂಗಾವತಿಯ ಅಬಕಾರಿ ಇಲಾಖೆ ಅಧಿಕಾರಿಯ ಹಾಗೂ ಕೆಲ ಬಾರಗಳಲ್ಲಿ ನಿಗದಿತ ಮೊತ್ತಕ್ಕಿಂತ ಹೆಚ್ಚು ಬೆಲೆಗೆ ಮದ್ಯ ಮಾರಾಟ ಮಾಡುವ ಕುರಿತು ಸರಣಿ ಸುದ್ದಿಗಳನ್ನು ಪ್ರಕಟಿಸಿದ್ದಾರೆ.  ಅವರ ಮೇಲೆ ಶುಕ್ರವಾರ ಮಧ್ಯಾಹ್ನ ಒಂದುವರೆ ಗಂಟೆ ಸುಮಾರಿಗೆ ಹಲ್ಲೆ ಮಾಡಿಸಲಾಗಿದೆ.

ಯಾರೇ ತಪ್ಪು ಮಾಡಿದರೂ ಮನುಷ್ಯನ ಮೇಲೆ ಮನುಷ್ಯ ಹಲ್ಲೆ ಮಾಡುವುದು ಅಪರಾಧ ಎಂಬುದನ್ನು ಎಲ್ಲರಿಗೂ ತಿಳಿದ ವಿಷಯ. ಪತ್ರಿಕೆದವರು ತಪ್ಪು ಮಾಡಿದರೂ ಕಾನೂನಿನ ಪ್ರಕಾರ ಪ್ರಶ್ನೆಸಲು ಅವಕಾಶವಿದೆ.ಕಾನೂನು ಗಾಳಿಗೆ ತೂರಿ ಹಲ್ಲೆ ಮಾಡುವಂತಹ ಪ್ರವೃತ್ತಿ ಎಷ್ಟರ ಮಟ್ಟಿಗೆ ಸರಿ. ಇದಕ್ಕೆ ಪೊಲೀಸ ಇಲಾಖೆ ಅವಕಾಶ ಕೊಡದೆ ನಿತ್ಯ ಕರ್ನಾಟಕ ದಿನ ಪತ್ರಿಕೆ ಸಂಪಾದಕ ರವಿ ಕುಮಾರ್ ಡಿ. ಅವರ ಮೇಲೆ ನಡೆದ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿ. ತಕ್ಷಣ ಪ್ರಕರಣವನ್ನು ದಾಖಲಿಸಿಕೊಂಡು ಹಲ್ಲೆ ಕೋರರನ್ನು ಮತ್ತು ಕುಮ್ಮಕು ನೀಡಿದವರನ್ನು ಬಂಧಿಸಿ,ಕಠಿಣ ಕ್ರಮ ಕೈಗೊಂಡು ಸಂಪಾದಕರು ಮತ್ತು ಅವರ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಬೆಂಗಳೂರಿನ ಕೆಂಬಾವುಟ ವಾರ ಪತ್ರಿಕೆಯ ವರದಿಗಾರ ಹಾಗೂ ಕಾರ್ಮಿಕ ಸಂಘಟನೆಗಳ ರಾಜ್ಯ ಮುಖಂಡ ಡಾ: ಕೆ.ಎಸ್. ಜನಾರ್ಧನ.ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ(ಎಐಟಿಯುಸಿ)

ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ್. ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್.ಭಾರತೀಯ ಪ್ರಜಾ ಸಂಘ (ರಿ) ಭೀಮ ನಡೆ. ರಾಜ್ಯ ಉಪಾಧ್ಯಕ್ಷ ನಾಗರಾಜ್ ಕಟ್ಟಿಮನಿ ಯಲಮಗೇರಿ. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಖಾಸೀಮ್ ಸರ್ದಾರ್.ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ(ಎಐಟಿಯುಸಿ ಸಂಯೋಜಿತ) ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ. ಪಾತ್ರೋಟಿ.ಭ್ರಷ್ಟಾಚಾರ ಮುಕ್ತ ಕರ್ನಾಟಕದ ರಾಜ್ಯ ಅಧ್ಯಕ್ಷ ಪ. ಯ. ಗಣೇಶ. ಮುತ್ತು ಹಡಪದ್ ಮುಂತಾದವರು ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!