ಗ್ರಾಮ ಪಂಚಾಯತಿಗಳು ಸ್ಥಳೀಯ ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸುವಂತಾಗಲು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಬೆಂಗಳೂರು ಚಲೋ…
ಗಂಗಾವತಿ: ಗ್ರಾಮ ಪಂಚಾಯತಿಗಳು ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಕಾಯ್ದೆ ಜಾರಿಗೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ದಿನಾಂಕ: ೦೮.೦೨.೨೦೨೪ ರಂದು ಬೆಂಗಳೂರು ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಪ್ರತಿಭಟನೆಯಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿನ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳಬೇಕೆಂದು ಕೊಪ್ಪಳ ಜಿಲ್ಲಾ ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟದ ಅಧ್ಯಕ್ಷರಾದ ಬಳ್ಳಾರಿ ರಾಮಣ್ಣ ನಾಯಕ ಕರೆನೀಡಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯರಾದ ಕಾಡಶೆಟ್ಟಿಹಳ್ಳಿ ಸತೀಶ್ ರವರ ನೇತೃತ್ವದಲ್ಲಿ ಫೆಬ್ರವರಿ-೦೮ ರಂದು ಬೆಂಗಳೂರು ಚಲೋ ಧರಣಿ ಹಮ್ಮಿಕೊಂಡಿದ್ದು, ಧರಣಿಯು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿದೆ.
ಸಂವಿಧಾನದ ಪ್ರಕರಣ ೨೪೩ಜಿ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂ.ರಾಜ್ ಅಧಿನಿಯ ೧೯೯೩ ರ ಪ್ರಕರಣ ೫೮(೪) ರ ಅನ್ವಯ ಗ್ರಾಮ ಪಂಚಾಯತಿಗಳು ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸುವಂತಾಗಲು, ಅಧಿನಿಯಮ ಪ್ರಕರಣ ೫೮, ೬೦, ಹಾಗೂ ೧ನೇ ಅನುಸೂಚಿಯಲ್ಲಿರುವ ಜವಾಬ್ದಾರಿಗಳನ್ನು ನಿರ್ವಹಿಸಲು ಪ್ರಕರಣ ೨(೨೮-ಸಿ) ಅನ್ವಯ ಜವಾಭ್ದಾರಿ ನಕ್ಷೆ ರಚಿಸಬೇಕು, ಗ್ರಾಮ ಪಂಚಾಯತಿಯ ಗ್ರಾಮಸಭೆಗಳು ಸ್ವರಾಜ್ಯದ ಮೂಲ ಘಟಕಗಳಾಗಿ ಸದೃಢವಾಗಿ ಕಾರ್ಯನಿರ್ವಹಿಸುವಂತಾಗಲು ನಿಯಮ ರೂಪಿಸುವುದು ಹಾಗೂ ಗ್ರಾಮಸಭೆಗಳಿಗೋಸ್ಕರ ಹೊಸ ತಂತ್ರಜ್ಞಾನ ಬಳಕೆಯನ್ನು ಅಳವಡಿಸುವುದು, ಬಾಪೂಜಿ ಸೇವಾ ಕೇಂದ್ರವನ್ನು ಸಶಕ್ತಗೊಳಿಸುವುದು, ಪ್ರತಿ ಗ್ರಾ.ಪಂ ಗೆ ಎಲೆಕ್ಟ್ರಿಷಿಯನ್ ಸಿಬ್ಬಂಧಿ ನೇಮಕ, ಅಧಿಕಾರ ವಿಕೇಂದ್ರಿಕರಣ ಕಾಯ್ದೆ ಜಾರಿಗೆ ತರುವುದು, ಗ್ರಾ.ಪಂ ಕಛೇರಿ ನಿರ್ವಹಣಾ ಕೈಪಿಡಿಯನ್ನು ರಚಿಸುವುದು, ಸ್ಥಾಯಿ ಸಮಿತಿಗಳು ಸಕ್ರೀಯವಾಗಿ ಕಾರ್ಯನಿರ್ವಹಿಸುವಂತಾಲು ನಿಯಮಗಳನ್ನು ರೂಪಿಸುವುದು, ಕೆಡಿಪಿ ಸಭೆಗಳನ್ನು ಶಾಸನಬದ್ಧಗೊಳಿಸುವುದು, ಇ-ಸ್ವತ್ತು ತಂತ್ರಾಂಶದಲ್ಲಿನ ಲೋಪದೋಷಗಳನ್ನು ಸರಿಪಡಿಸುವುದು, ಶಿಷ್ಟಾಚಾರದಡಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ವಿಧಾನಸೌಧ ಹಾಗೂ ಇತರೆ ಸರ್ಕಾರಿ ಕಛೇರಿಗಳಲ್ಲಿ, ಟೋಲ್‌ಗಳಲ್ಲಿ ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಡುವುದು, ಗೌರವಧನ/ಪಿಂಚಣಿ/ಉಪವೇಶನ ಶುಲ್ಕ/ಉಚಿತ ಬಸ್‌ಪಾಸ್/ಆರೋಗ್ಯ ವಿಮೆ ಜಾರಿಗೊಳಿಸುವುದು, ಕರ್ನಾಟಕ ವಿಕಾಸ ಪತ್ರಿಕೆಯನ್ನು ಪ್ರತಿ ಸದಸ್ಯರ ಮನೆಗೆ ತಲುಪಿಸುವುದು, ಹದಿನೈದನೇ ಹಣಕಾಸು ಆಯೋಗದ ಅನುದಾನದಡಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸುವುದು ಸೇರಿದಂತೆ ಸ್ವಂತ ಸಂಪನ್ಮೂಲ, ಆಶ್ವಾಸನೆ ನಿಧಿ, ಗಾಂಧಿ ಗ್ರಾಮ ಪುರಸ್ಕಾರ, ವಿದ್ಯುತ್ ಬಿಲ್‌ನಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವುದು, ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅರ್ಥಪೂರ್ಣವಾದ ಪ್ರತ್ಯೇಕ ಲಾಂಛನವನ್ನು ಸೃಜಿಸುವುದು, ಕೆ.ಕೆ.ಆರ್.ಡಿ.ಬಿ ಅನುದಾನವನು ಗ್ರಾಮ ಪಂಚಾಯತಿಗಳ ಮೂಲಕ ಖರ್ಚು ಮಾಡಲು ಕ್ರಮ ಕೈಗೊಳ್ಳುವುದು, ಗ್ರಾ.ಪಂ ವ್ಯಾಪ್ತಿಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳಲ್ಲಿರುವಂತೆ ಏಕ ಸದಸ್ಯ ಕ್ಷೇತ್ರಗಳನ್ನು ರಚಿಸಿ ಮುಂದಿನ ಚುನಾವಣೆ ನಡೆಸಬೇಕು. ಮುಂದುವರೆದು ಕೆ೨ ಹೆಸರಿನಲ್ಲಿ ಗ್ರಾ.ಪಂ ಅಧ್ಯಕ್ಷರಿಗಿರುವ ಚೆಕ್ ಸಹಿ ಅಧಿಕಾರವನ್ನು ಹಿಂಪಡಯುವ ಪ್ರಯತ್ನ ನಡೆದಿರುವ ಬಗ್ಗೆ ಮಾತುಗಳು ಕೇಳಿಬರುತ್ತಿದ್ದು, ಅದನ್ನು ನಮ್ಮ ಮಹಾ ಒಕ್ಕೂಟವು ಅದನ್ನು ಪ್ರಬಲವಾಗಿ ವಿರೋಧಿಸುತ್ತದೆ ಎಂದು ಆಗ್ರಹಿಸಿ ಸರ್ಕಾರದ ವಿರುದ್ಧ ನಡೆಯಲಿರುವ ಧರಣಿ ಸತ್ಯಾಗ್ರಹದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿರುವ ಗ್ರಾ.ಪಂ ಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಸ್ವಯಂ ಪ್ರೇರಿತರಾಗಿ ತನು-ಮನ-ಧನದಿಂದ ಪಾಲ್ಗೊಂಡು ನಮ್ಮ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕಾಡಶೆಟ್ಟಿಹಳ್ಳಿ ಸತೀಶ್‌ರವರ ಕೈ ಬಲಪಡಿಸುವುದರೊಮದಿಗೆ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಕರೆಕೊಟ್ಟರು.
Comments are closed.