ಬದಲಾದ ಆಹಾರಕ್ರಮ ಹಾಗೂ ಜೀವನಶೈಲಿಯಿಂದ ಮಾರಕ ಖಾಯಿಲೆಗಳು ಉಲ್ಬಣ: ಡಿಎಚ್‌ಒ ಡಾ.ಲಿಂಗರಾಜು ಟಿ.
ಪ್ರತಿ ವರ್ಷ ಫೆಬ್ರವರಿ 04 ರಂದು ವಿಶ್ವ ಕ್ಯಾನ್ಸರ್ ದಿನಾಚರಣೆಯ ನಿಯಂತ್ರಣ ಕಾರ್ಯಕ್ರಮದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತದೆ. ಆರೈಕೆಯ ಅಂತರವನ್ನು ಮುಚ್ಚಿ ಎಂಬ ಘೋಷ ವಾಕ್ಯದೊಂದಿಗೆ ಈ ವರ್ಷ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಕ್ಯಾನ್ಸರ್ ಖಾಯಿಲೆ ನಿಯಂತ್ರಣದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಸಾವುನೋವುಗಳನ್ನು ತಡೆಗಟ್ಟುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಜೀವನ ಶೈಲಿಯಿಂದ ರೋಗಗಳು ಇಂದಿನ ವೈದ್ಯಲೋಕಕ್ಕೆ ಸವಾಲಾಗಿವೆ. ಮನುಷ್ಯ ಆಧುನಿಕನಾದಂತೆ ಆತನ ಮಾನಸಿಕ ಹಾಗೂ ದೈಹಿಕ ಸ್ವಾಸ್ಥö್ಯಕ್ಕೆ ಹೆಚ್ಚಿನ ತೊಂದರೆಗಳು ಕಾಣಿಸಿಕೊಂಡು, ಆಹಾರಕ್ರಮದಲ್ಲಿನ ಬದಲಾವಣೆ, ದೈಹಿಕ ಚಟುವಟಿಕೆ ಇಲ್ಲದ ಜೀವನಶೈಲಿ ಹಾಗೇ ಮಾನಸಿಕ ಒತ್ತಡದಿಂದಾಗಿ ಅನೇಕ ರೋಗಗಳು ಶಾರೀರಿಕ ಹಾಗೂ ಮಾನಸಿಕವಾಗಿ ದಾಳಿ ಮಾಡುತ್ತವೆ. ಇಂತಹ ಜೀವನಶೈಲಿಯ ರೋಗಗಳಲ್ಲಿ ಕ್ಯಾನ್ಸರ್ ಮೊದಲನೇ ಸ್ಥಾನದಲ್ಲಿದೆ ಎಂದು ಹೇಳಿದರು.
ಮನುಷ್ಯನ ಯಾವುದೇ ಅಂಗಕ್ಕೂ ಬರಬಹುದಾದ ಮಾರಕ ಖಾಯಿಲೆ ಕ್ಯಾನ್ಸರ್. ನಮ್ಮ ದೇಶದಲ್ಲಿ ಪ್ರತಿ ವರ್ಷ 10 ಲಕ್ಷ ಮಂದಿ ಹೊಸದಾಗಿ ಕ್ಯಾನ್ಸರ್ ರೋಗಿಗಳ ಸಾಲಿಗೆ ಸೇರುತ್ತಿದ್ದಾರೆ. ತಂಬಾಕು ಮದ್ಯಪಾನಗಳಿಂದ ದೂರವಿರುವ ಶಿಸ್ತುಬದ್ಧ ಜೀವನ ಶೈಲಿ, ಪೌಷ್ಠಿಕ ಆಹಾರ ಸೇವನೆ, ವೈಯಕ್ತಿಕ ಸ್ವಚ್ಛತೆ, ಒಳ್ಳೆಯ ಆರೋಗ್ಯಕರ ಅಭ್ಯಾಸ, ದೈಹಿಕವಾಗಿ ಸದಾ ಚಟುವಟಿಕೆಯಿಂದ ಇರುವುದು ಹೀಗೆ ಪ್ರತಿನಿತ್ಯದ ನಮ್ಮ ಜೀವನಶೈಲಿಯನ್ನು ಉತ್ತಮವಾಗಿ ರೂಢಿಸಿಕೊಂಡರೆ ಈ ಖಾಯಿಲೆಯನ್ನ ತಡೆಗಟ್ಟಬಹುದು. ಗ್ರಾಮ ಮತ್ತು ನಗರಗಳಲ್ಲಿ ಕೆಲಸ ನಿರ್ವಹಿಸುವ ವೈದ್ಯಾಧಿಕಾರಿಗಳು ಮತ್ತು ಕ್ಷೇತ್ರ ಸಿಬ್ಬಂದಿಗಳು ಈ ಕ್ಯಾನ್ಸರ್ ಖಾಯಿಲೆಯ ನಿಯಂತ್ರಣದ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸಿ ಕ್ಯಾನ್ಸರ್‌ಮುಕ್ತ ಕೊಪ್ಪಳ ಜಿಲ್ಲೆಯಾಗಿ ಮಾಡಲು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಸತಿಳಿಸಿದರು.
ಜನಜಾಗೃತಿ ಜಾಥಾವು ಹಳೇ ಜಿಲ್ಲಾಸ್ಪತ್ರೆ ಆವರಣದಿಂದ ಅಶೋಕ ಸರ್ಕಲ್, ಜವಾಹರ ರಸ್ತೆ, ದಿವಟರ್ ಸರ್ಕಲ್, ಡಾ||ಸಿಂಪಿಲಿAಗಣ್ಣ ರಸ್ತೆ, ಕಾರ್ಮಿಕರ ಸರ್ಕಲ್, ಬಸ್‌ನಿಲ್ದಾಣ ಮಾರ್ಗವಾಗಿ ಸಾರ್ವಜನಿಕರಿಗೆ ಕ್ಯಾನ್ಸರ್ ನಿಯಂತ್ರಣ ಘೋಷಣೆ ಕೂಗುತ್ತ, ಕರಪತ್ರ ಹಂಚುವುದರ ಮೂಲಕ ಮರಳಿ ಹಳೇ ಜಿಲ್ಲಾಸ್ಪತ್ರೆಯ ಆವರಣಕ್ಕೆ ತಲುಪಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ|| ನಂದಕುಮಾರ್ ಹೆಚ್., ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳಾದ ಡಾ|| ಪ್ರಕಾಶ ವ್ಹಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ|| ರವೀಂದ್ರನಾಥ ಎಮ್.ಹೆಚ್., ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳಾದ ಡಾ|| ಶಶಿಧರ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳಾದ ಡಾ|| ಪ್ರಕಾಶ ಹೆಚ್., ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ|| ವೆಂಕಟೇಶ, ಕೊಪ್ಪಳ ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ|| ರಾಮಾಂಜನೇಯ, ಡಾ|| ಜಯಶ್ರೀ ಕಮತೆ, ಜಿಲ್ಲಾ ಎನ್.ಸಿ.ಡಿ. ಕಾರ್ಯಕ್ರಮ ಸಂಯೋಜಕರು, ವೈದ್ಯಾಧಿಕಾರಿಗಳು, ಡಾ|| ಮಹೇಶ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ, ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಲ್.ವ್ಹಿ ಸಜ್ಜನರ್ ಹಾಗೂ ವಿವಿಧ ವೃಂದದ ಅಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
Comments are closed.