ವಿದ್ಯಾರ್ಥಿಗಳಿಗೆ ಉಚಿತ ಕಾರ್ಯಾಗಾರ

ಸಿವಿಸಿ ಫೌಂಡೇಶನ್, ಭೂಮಿ ಸ್ಟಡಿ ಸರ್ಕಲ್ ಹಾಗೂ ಎಸ್ ವಿ ಸಿ ಶಿಕ್ಷಣ ಸಂಸ್ಥೆಗಳು, ಕುಷ್ಟಗಿ, ಸಹಭಾಗಿತ್ವದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಒಂದು ದಿನದ ಉಚಿತ ಕಾರ್ಯಾಗಾರವನ್ನು ದಿನಾಂಕ ಫೆಬ್ರುವರಿ 11 ರವಿವಾರದಂದು ಏರ್ಪಡಿಸಲಾಗಿದೆ. ಈ ಕಾರ್ಯಗಾರ ಕುಷ್ಟಗಿ ಪಟ್ಟಣದ ಎಸ್ ವಿ ಸಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಬೆಳಿಗ್ಗೆ 10:00ಗೆ ಆರಂಭವಾಗಲಿದ್ದು ಉಪನ್ಯಾಸಕರಾದ ಭೀಮಪ್ಪ ಹೆಚ್ ಗೊಲ್ಲರ್, ಡಾ ಜೀವನ್ ಸಾಬ್ ಬಿನ್ನಾಳ್, ಹಾಗೂ ಭೂಮಿ ಸ್ಟಡಿ ಸರ್ಕಲ್ ನಿರ್ದೇಶಕರಾದ ಮಹೇಶ್
ಪಟ್ಟೇದ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳು ಹಾಗೂ ಯುವಕರು ಈ ಉಚಿತ ಕಾರ್ಯಗಾರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಮನವಿ. ಹೆಚ್ಚಿನ ಮಾಹಿತಿಗೆ ಸಂಪರ್ಕ ಅಂಬರೀಶ್ ( +917411024861)
Comments are closed.