ಅಂಗವಿಕಲರ ಸಮಸ್ಯೆ ಹಾಗೂ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರವೇ ಅಂಗವಿಕಲರ ಘಟಕದಿಂದ ಸರ್ಕಾರಕ್ಕೆ ಮನವಿ
ಗಂಗಾವತಿ: ಕರ್ನಾಟಕ ರಾಜ್ಯದಲ್ಲಿ ಸುಮಾರು ೮೦-೮೫ ಸಾವಿರ ಅಂಗವಿಕಲರು ಇದ್ದು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಗಳು ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಮತ್ತು ನಾವು ಈಗಾಗಲೇ ರಾಜ್ಯದಲ್ಲಿ ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಹಳ್ಳಿಯಿಂದ ದಿಲ್ಲಿಯವರಗೆ ಹೋರಾಟ ಮಾಡಿರುತ್ತೇವೆ. ಆದರೂ ಸಹ ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳ ಬಗ್ಗೆ ನಮ್ಮ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಹಾಗೂ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸದೇ, ಅಂಗವಿಕಲರ ಸಮಸ್ಯೆಗಳನ್ನು ಗಮನಕ್ಕೆ ತೆಗೆದುಕೊಳ್ಳದೇ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಕರವೇ ಪ್ರವೀಣಕಮಾರ ಶೆಟ್ಟಿ ಬಣ ಅಂಗವಿಕಲರ ಘಟಕದ ಗಂಗಾವತಿ ತಾಲೂಕ ಅಧ್ಯಕ್ಷರಾದ ಅಶೋಕ ಗುಡಿಕೋಟಿ ಪ್ರಕಟಣೆಯಲ್ಲಿ ಕಿಡಿಕಾರಿದರು.
ಅವರು ಇಂದು ಅಂಗವಿಕಲರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು. ವಿಕಲಚೇತನರಿಗೆ ಪ್ರತಿ ತಿಂಗಳು ಬರುವ ಮಾಸಾಸನವನ್ನು ಹೆಚ್ಚಿಗೆ ಮಾಡಿರುವುದಿಲ್ಲ. ಹಾಗೂ ಈಗಿರುವ ಪ್ರತಿತಿಂಗಳ ಮಾಸಾನವನ್ನು ನಿಗದಿತ ದಿನದಂದು ಮಂಜೂರು ಮಾಡುತ್ತಿಲ್ಲ. ಇಂದಿನ ಬೆಲೆ ಏರಿಕೆ ದಿನಮಾನದಲ್ಲಿ ದುಡಿಯಲು ಸಾಧ್ಯವಾಗದ ನಾವುಗಳು ನಮ್ಮ ಕುಟುಂಬವನ್ನು ನಿರ್ವಹಣೆ ಮಾಡುವುದಾದರು ಹೇಗೆ? ಅಂಗವಿಕಲರು ಸರ್ಕಾರದ ಅಧೀನದಲ್ಲಿದ್ದು ಮೂಲಭೂತ ಸೌಕರ್ಯಗಳನ್ನು ಪಡೆಯಲು ವಂಚಿತರಾಗಿದ್ದಾರೆ. ಅನುದಾನ ಬಳಕೆ ಮಾಡುವಲ್ಲಿ ತಾರತಮ್ಯವಾಗುತ್ತಿರುವುದು ಅಂಗವಿಕಲರ ಪ್ರಮುಖ ಸಮಸ್ಯೆಗಳಾಗಿವೆ. ಅಂಗವಿಕಲರ ಪ್ರಮುಖ ಬೇಡಿಕೆಗಳಾದ ಪ್ರತಿ ತಿಂಗಳ ಮಾಶಾಸನವನ್ನು ರೂ. ೫೦೦೦/- ಗೆ ಹೆಚ್ಚಳ ಮಾಡಬೇಕು, ಅಂಗವಿಕಲ ಫಲಾನುಭವಿಗಳಿಗೆ ನಿವೇಶನ ಅಥವಾ ಪ್ರತ್ಯೇಕ ಕಾಲೋನಿ ಕಲ್ಪಿಸಿಕೊಡಬೇಕು, ಪುರುಷ ಅಂಗವಿಕಲರಿಗೂ ರಾಜ್ಯಾಧ್ಯಂತ ಪ್ರೀ ಬಸ್ ಪಾಸ್ ನೀಡಬೇಕು, ೨೦೧೬ನೇ ಕಾನೂನಿನ ಕೆಲವು ನಿಯಮಗಳು ಬಾಕಿ ಇದ್ದು, ಅವುಗಳನ್ನು ಅನು?ನಗೊಳಿಸಬೇಕು, ಸರಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ವ್ಯವಹರಿಸಲು ಪ್ರತ್ಯೇಕ ಅವಕಾಶ ಕಲ್ಪಿಸಿಕೊಡಬೇಕು, ಸರಕಾರ ಅಂಗವಿಕಲರಿಗೆ ಮೀಸಲು ನೀಡಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳಿಗೆ ಅರ್ಜಿಗಳನ್ನು ಕರೆಯಬೇಕು, ಅಂಗವಿಕಲರ ಕುಟುಂಬಗಳಿಗೆ ಅಂತ್ಯೋದಯ ಪಡಿತರ ಚೀಟಿಯನ್ನು ಕಡ್ಡಾಯ ಮಾಡಬೇಕು, ಗಂಗಾವತಿ ನಗರಸಭೆಯಲ್ಲಿ ವಿಕಲಚೇತನರಿಗೆ ರಾಂಪ್ (ಲಿಫ್ಟ್ ವ್ಯವಸ್ಥೆಯನ್ನು ಕೂಡಲೇ ಮಾಡಬೇಕು), ಗಂಗಾವತಿ ನಗರದ ರೈಲ್ವೇ ಸ್ಟೇ?ನ್‌ನಲ್ಲಿ ಸರಿಯಾದ ವ್ಯವಸ್ಥೆ ಇರುವುದಿಲ್ಲ. ಹೊಸದಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು, ತಾಲೂಕ, ಗ್ರಾಮೀಣ, ನಗರ ಪುರ್ನಸತಿ ಕಾರ್ಯಕರ್ತರ ಕನಿ? ವೇತನ ಜಾರಿ ಮಾಡಬೇಕು, ಶೇ. ೫ ಮೀಸಲಾತಿ ಹಣವನ್ನು ವೈಯಕ್ತಿಕ ಬಳಕೆಗೆ ಮಾತ್ರ ಮೀಸಲಿಡಬೇಕು, ಯು.ಡಿ.ಐ.ಡಿ ಕಾರ್ಡ್ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ವಿತರಿಸಬೇಕು, ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ಸಾರ್ವನಿಕ ಮತ್ತು ಸ್ಥಳಿಯ ಸಂಸ್ಥೆಗಳಲ್ಲಿ ವಿಕಲಚೇತನ ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು, ಪ್ರತ್ಯೇಕ ನಿಗಮ ಮಂಡಳಿಯನ್ನು ಸ್ಥಾಪಿಸಬೆಕು, ಮೇಲ್ಮನೆಯಲ್ಲಿ ಅಂಗವಿಕಲರಿಗೆ ಸ್ಥಾನ ಕಲ್ಪಿಸಿಕೊಡಬೇಕು, ಸರಕಾರಿ ಹುದ್ದೆಗಳಲ್ಲಿ ಅಂದ ಅಂಗವಿಕಲರಿಗೆ ನೀಡುವ ಪ್ರಾಧಾನ್ಯತೆಯಂತೆ ಸಾಮಾನ್ಯ ಅಂಗವಿಕಲರಿಗೂ ನೀಡಬೇಕು, ಅಂಗವಿಕಲರು ಎಸ್.ಸಿ./ಎಸ್.ಟಿ ಗೆ ಸಮಾನರು ಎಂದು ಗೌರವಾನ್ವಿತ ಉಚ್ಚನ್ಯಾಯಾಲಯ ತೀರ್ಪು ನೀಡಿದ್ದು ಅದನ್ನು ಜಾರಿ ಮಾಡಬೇಕು, ಸರಕಾರ ಅಂಗವಿಕಲರಿಗೆ ನೀಡುವ ಯಂತ್ರ ಚಾಲಿತ ವಾಹವನ್ನು ೫ ವ?ದ ಬಳಿಕ ಮತ್ತೊಮ್ಮೆ ನೀಡಬೇಕು, ಪ್ರತಿ ತಿಂಗಳ ಮಾಶಾಸನವನ್ನು ತಪ್ಪದೇ ನೀಡಬೇಕು, ೨-೩ ತಿಂಗಳ ಮಾಸಾಸನವನ್ನು ತಡೆಹಿಡಿಯಬಾರದು ಇವುಗಳ ನಮ್ಮ ಪ್ರಮುಖ ಬೇಡಿಕೆಯಾಗಿದ್ದು, ರಾಜ್ಯ ಸರ್ಕಾರ ನಮ್ಮ ಮೇಲಿನ ಬೇಡಿಕೆಗಳನ್ನು ಆದಷ್ಟು ಶೀಘ್ರದಲ್ಲಿ ಈಡೇರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರವೇ (ಪ್ರವೀಣಕುಮಾರ ಶೆಟ್ಟಿಬಣ) ಕೊಪ್ಪಳ ಜಿಲ್ಲಾಧ್ಯಕ್ಷರಾದ ಪಂಪಣ್ಣ ನಾಯಕ, ಅಂಗವಿಕಲರ ಘಟಕದ ಜಿಲ್ಲಾಧ್ಯಕ್ಷರಾದ ಮಂಜುನಾಥ ಹೊಸಕೇರ, ಪದಾಧಿಕಾರಿಗಳಾದ ಉಮೇಶ ಕಲ್ಮನಿ, ಅಬ್ರಾಹಿಂ ಖಾದರ್, ಪಿಂಟು, ಮಲಿಯಪ್ಪ, ನಾಗರಾಜ, ವಾಟಾಳ್, ಪ್ರಹ್ಲಾದ ಬಸವರಾಜ ಅರಳಿ, ಜೋಷಿ, ಸಜ್ಜನ್ ಭಾಷಾ, ಭುವನೇಶ್ವರಿ, ಶಬ್ಬೀರ್ ಗಾಂಧಿ, ಈರ, ನಾಗಪ್ಪ, ಯುವರಾಜ, ನರಸಿಂಹಲು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
Comments are closed.