ಎಲ್‌ಐಸಿ ದೇಶದ ಗೌರವಾನ್ವಿತ ಸಂಸ್ಥೆಯಲ್ಲಿ ಕೆಲಸ ಮಾಡುವುದು ಹೆಮ್ಮೆಯ ಸಂಗತಿ
ಗಂಗಾವತಿ: ಭಾರತೀಯ ಜೀವ ವಿಮಾ ನಿಗಮ ದೇಶದ ಗೌರವಾನ್ವಿತ ಸಂಸ್ಥೆಯಾಗಿದ್ದು ಇಲ್ಲಿ ಕೆಲಸ ಮಾಡುವುದು ಹೆಮ್ಮೆಯ ಸಂಗತಿಯಾಗಿದೆ. ದೇಶದ ಜನರ ಜೀವನ ಆರ್ಥಿಕ ಭದ್ರತೆ ಹಾಗೂ ದೇಶದ ಅಭಿವೃದ್ಧಿಯಲ್ಲಿ ಎಲ್‌ಐಸಿ ಪಾತ್ರ ಹಿರಿದು ಎಂದು ಎಲ್‌ಐಸಿ ವ್ಯವಸ್ಥಾಪಕ ಕಲೀಲ್ ಆಮಹದ್ ಹೇಳಿದರು.
ಅವರು ಎಲ್‌ಐಸಿ ಕಚೇರಿಯಲ್ಲಿ ಪ್ರತಿನಿಧಿಗಳ ಸಂಘ(ಲಿಖೈ) ಆಯೋಜಿಸಿದ್ದ ಭಡ್ತಿ ಹೊಂದಿ ವರ್ಗಾವಣೆಗೊಂಡ ಕಟ್ಟಾ ಮಧು ಇವರ ಬೀಳ್ಕೊಡುಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಗಂಗಾವತಿ ಶಾಖೆಯಿಂದಲೇ ಕಟ್ಟಾ ಮಧು ವೃತ್ತಿ ಜೀವನ ಆರಂಭಿಸಿ ಮಾತೃಭಾಷೆ ತೆಲುಗು ಆಗಿದ್ದರೂ ಕನ್ನಡವನ್ನು ಓದಲು ಬರೆಯಲು ಕಲಿತು ಗ್ರಾಹಕರು ಮತ್ತು ಪ್ರತಿನಿಧಿಗಳೊಂದಿಗೆ ಅನ್ಯೂನ್ಯತೆಯಿಂದ ಕೆಲಸ ಮಾಡಿದ್ದರ ಪರಿಣಾಮ ಬೇಗನೇ ಭಡ್ತಿ ದೊರಕಿದೆ. ಶಾಖೆಯ ಯಾವುದೇ ವಿಭಾಗದಲ್ಲಿ ಕೆಲಸ ನಿಯೋಜನೆ ಮಾಡಿದರೂ ನಿರಾಕರಿಸದೇ ಮಾಡಿರುವ ಇವರು ಪುನಹ ಗಂಗಾವತಿಗೆ ವರ್ಗವಾಗಿ ಆಗಮಿಸಲಿ. ಮುಂದಿನ ಮಾರ್ಚ ವರೆಗೆ ಪ್ರತಿನಿಧಿಗಳು ಬಾಕಿ ಇರುವ ಮೂರು ಸಾವಿರ ಪಾಲಿಸಿಗಳನ್ನು ಮಾಡುವ ಮೂಲಕ ಗುರಿ ಸಾಧಿಸಲು ಶ್ರಮ ವಹಿಸುವಂತೆ ಮನವಿ ಮಾಡಿದರು.
ವರ್ಗಾವಣೆಗೊಂಡ ಕಟ್ಟಾ ಮಧು ಮಾತನಾಡಿ, ಕನ್ನಡ ಭಾಷೆ ಕಲಿಯುವುದು ಅತೀ ಸುಲಭ ಆದ್ದರಿಂದ ಕರ್ತವ್ಯಕ್ಕೆ ಹಾಜರಾದ ದಿನದಂದು ಕನ್ನಡ ಬಾರದೇ ಇದ್ದುದ್ದಕ್ಕೆ ಬೇಜಾರಾಗಿತ್ತು. ಮೂರು ತಿಂಗಳಲ್ಲಿ ಕನ್ನಡ ಕಲಿಯಲಿ ಪ್ರತಿನಿಧಿ ಬಾಂಧವರ ಸಹಕಾರ ನೆರವಾಗಿದೆ. ಎಲ್‌ಐಸಿ ದೇಶದ ಆರ್ಥಿಕತೆ ಸದೃಢಗೊಳಿಸಿದ ಸಂಸ್ಥೆಯಾಗಿದೆ. ಇದರಲ್ಲಿ ಸಾರ್ವಜನಿಕರ ಹಣ ಇದ್ದು ಇದರಿಂದ ದೇಶದ ಅಭಿವೃದ್ಧಿಯಾಗುತ್ತದೆ. ಹೆಚ್ಚು ಹೆಚ್ಚು ವ್ಯವಹಾರ ಮಾಡಿ ಪ್ರತಿನಿಧಿಗಳು ಆರ್ಥಿಕ ಸಬಲತೆ ಹೊಂದುವಂತೆ ಮನವಿ ಮಾಡಿದರು.
ವ್ಯವಸ್ಥಾಪಕ ಕಲೀಲ್ ಆಮಹದ್, ಎಬಿಎಂ ವಿ.ಹೂಗಾರ, ಲಿಖೈ ಸಂಘಟನೆಯ ಎಂ.ನಿರುಪಾದಿ ಬೆಣಕಲ್, ಕೆ.ನಿಂಗಜ್ಜ, ವಲೀಮೋಹಿಯುದ್ದೀನ್, ಬಾಷಾ, ಹುಸೇನ ಬಾಷಾ, ದೇಸಾಯಿ, ಕಳಕಪ್ಪ, ಸ್ವಾಮಿ, ವಿಮಾ ನೌಕರರ ಸಂಘದ ನರೇಶ, ಹನುಮಂತ, ರಾಮಣ್ಣ ಕುರಿ,ಅಭಿವೃದ್ಧಿ ಅಧಿಕಾರಿಗಳಾದ ಕೆ.ಫಣಿರಾಜ್, ಗುರುಪ್ರಸಾದ, ವಿರೂಪಾಕ್ಷಯ್ಯ ಶ್ರೀಧರರೆಡ್ಡಿ, ಅಧಿಕಾರಿಗಳಾದ ಸರಸ್ವತಿ, ರಾಮ್, ದಿವಾಕರ್ ಸೇರಿ ವಿಮಾ ನೌಕರರು, ಪ್ರತಿನಿಧಿಗಳಿದ್ದರು.
Comments are closed.