ವೀರಾಪೂರ ಗ್ರಾಮಸ್ಥರಿಂದ ದಾಸೋಹಕ್ಕೆ ಕರ್ಚಿಕಾಯಿ, ಬಾದೂಶಾ ಸಿಹಿ ಸಮರ್ಪಣೆ
ಕೊಪ್ಪಳ, ೦೫- ಏತಿಹಾಸಿಕ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಮಹಾ ದಾಸೋಹಕ್ಕೆ ಕುಕನೂರ ತಾಲೂಕಿನ ವೀರಾಪೂರ ಗ್ರಾಮದಿಂದ ಕರ್ಚಿಕಾಯಿ ಮತ್ತು ಬಾಲೂಶಾ ಸಿಹಿ ತಿನಿಸುಗಳನ್ನು ಸಮರ್ಪಿಸಲಾಯಿತು.
ಗ್ರಾಮದ ಜನತೆ ಸಾಮೂಹಿಕವಾಗಿ ಸಿಹಿ ತಿನಿಸುಗಳನ್ನ ಮಾಡಿ ಶ್ರೀ ಗವಿಮಠಕ್ಕೆ ಸಮರ್ಪಿಸಿದರು. ಎರಡು ಕ್ವಿಂಟಾಲ್ ಕರ್ಚಿಕಾಯಿ ಹಾಗೂ ಎರಡು ಕ್ವಿಂಟಲ್ ಬಾಲೂಶಾ ತಯಾರಿಸಿ ಸಮರ್ಪಿಸಿದ್ದಾರೆ. ಗ್ರಾಮದಿಂದ ನಾಲ್ಕು ಟ್ರ‍್ಯಾಕ್ಟರ್ ಮೂಲಕ ಗವಿಮಠಕ್ಕೆ ಆಗಮಿಸಿ ಸಿಹಿತಿನಿಸು ಅರ್ಪಿಸಿ ಗ್ರಾಮದ ಭಕ್ತರು ಎರಡು ದಿನ ಸೇವೆ ಸಲ್ಲಿಸಿದ್ದಾರೆ.
Comments are closed.