ವಿಜಯನಗರ ಸಾಮ್ರಾಜ್ಯದ ಸೊಬಗಿಗೆ ಸಾಕ್ಷಿಯಾದ ಜಾನಪದ ವಾಹಿನಿ

Get real time updates directly on you device, subscribe now.

ಐತಿಹಾಸಿಕ ಹಂಪಿ ಉತ್ಸವದ ಮೂರನೇ ದಿನವಾದ ಭಾನುವಾರದಂದು ಇಳಿ ಸಂಜೆ ಹೊತ್ತಿನಲ್ಲಿ ಜಾನಪದ ವಾಹಿನಿ ಮೆರವಣಿಗೆಯು ಅದ್ಧೂರಿಯಾಗಿ ನಡೆಯಿತು.
ಹಂಪಿಯ ಶ್ರೀ ಉದ್ದಾನ ವೀರಭದ್ರೇಶ್ವರ ದೇವಸ್ಥಾನದ ಬಳಿ ಮೆರವಣಿಗೆಗೆ ಶಾಸಕ ಹೆಚ್.ಆರ್.ಗವಿಯಪ್ಪ ಅವರು ಭುವನೇಶ್ವರಿ ದೇವೆಗೆ ಪುಷ್ಪಾರ್ಪಿಸಿ, ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.
ಮುಂದೆ ರಾಜಗಾಂಭೀರ್ಯದಿAದ ಲಕ್ಷ್ಮೀ ಆನೆಯು ಹೆಜ್ಜೆ ಹಾಕುತ್ತಿದ್ದರೆ ಹಿಂದೆ ಭುವನೇಶ್ವರಿ ದೇವಿ ಇದ್ದ ರಥ ಸಾಗಿತು.
ಕಣ್ಣು ಹಾಯಿಸಿದ ಕಡೆಯೆಲ್ಲಾ ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ಫೋಟೋ ಮತ್ತು ವಿಡಿಯೋ ದೃಷ್ಯೀಕರಣ ಮಾಡುವುದು ಕಂಡುಬAತು. ಮೆರವಣಿಗೆ ನಡೆಯುವ ರಾಜಬೀದಿಯುದ್ದಕ್ಕೂ ಎಲ್ಲೆಲ್ಲೂ ಮೇಳೈಸಿದ ಕಲಾ ತಂಡಗಳ ವೈಭವ ಮತ್ತು ಕಲಾತಂಡಗಳ ಸಾಂಪ್ರದಾಯಿಕ ವಾದ್ಯಗಳ ನಾದವೂ ಮಾರ್ಗದುದ್ದಕ್ಕೂ ಪ್ರತಿಧ್ವನಿಸಿತು.
ಕಣ್ಣಿಗೆ ಹಬ್ಬ ನೀಡುತ್ತಿರುವ ವೇಷ ಭೂಷಣ ತೊಟ್ಟ ಕಲಾ ತಂಡಗಳ ನೃತ್ಯ. ನೃತ್ಯವನ್ನು ನೋಡುತ್ತಾ ಸಂಭ್ರಮಿಸುತ್ತಿರುವ ಕಲಾ ಪ್ರೇಮಿಗಳು. ಮೆರವಣಿಗೆಯು ಉತ್ಸವಕ್ಕೆ ಆಗಮಿಸಿದ್ದ ಜನತೆಯ ಆಕರ್ಷಣೆಗೆ ಕಾರಣವಾಯಿತು. ವಿದೇಶಿ ಪ್ರವಾಸಿಗರು ಸಹ ಜಾನಪದ ಕಲೆಗಳಿಗೆ ಮನಸೋತು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಜಾನಪದ ವಾಹಿನಿಯಲ್ಲಿ ಡೊಳ್ಳು ಕುಣಿತ, ನಾದಸ್ವರ, ಕಹಳೆ ವಾದ್ಯ, ಸಮಾಳ, ನಂದಿಧ್ವಜ, ಮಂಗಳವಾದ್ಯ, ಜೆಂಡೆವಾದ್ಯ, ಸಿಂಗಾರಿ ಮೇಳ, ಕಂಸಾಳೆ, ಸುಡಗಾಡು ಕೈಚಳಕ ಚಮತ್ಕಾರ, ಸಂಸ್ಕೃತಿ ಜನಪದ ಕಲೆ, ಚಿಲಿಪಿಲಿಬೊಂಬೆ, ಹಲಗೆ ವಾದನ, ತಮಟೆ ವಾದನ, ಸೋಮನ ಕುಣಿತ, ಸಮಾಳ ಮತ್ತು ನಂದಿಕೋಲು, ಗಾರುಡಿ ಗೊಂಬೆ, ಕೋಲಾಟ, ನಗಾರಿ, ಹಂಪಾ ಪಟ್ಟಣ ಸುಡಗಾಡು, ಕೈಚಳಕ ಚಮತ್ಕಾರ, ಸಂಸ್ಕೃತಿ ಜಾನಪದ ಕಲೆ, ಮೋಹಿನಿ ಭಸ್ಮಾಸುರ ರೂಪಕ, ಹಗಲು ವೇಷ, ಕೀಲು ಕುದುರೆ, ಪೂಜಾ ಕುಣಿತ, ನಂದಿಧ್ವಜ ಮತ್ತು ಸಂಬಾಳ, ಹಲಗೆ ವಾದನ, ವೀರಗಾಸೆ, ಗೋಂಬೆಕುಣಿತ, ಚಿಲಿಪಿಲಿ ಗೊಂಬೆ, ವೀರಗಾಸೆ ಕಲಾ ಪ್ರಕಾರಗಳು ಮೆರವಣಿಗೆಗೆ ಮೆರಗು ನೀಡಿದವು.
ಹಂಪಿಯ ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಜಾನಪದ ವಾಹಿನಿ ಮೆರವಣಿಗೆಯು ಹಂಪಿಯ ಬಜಾರ್ ಮೂಲಕ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ವೈಭವದಿಂದ ಜರುಗಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು

Get real time updates directly on you device, subscribe now.

Comments are closed.

error: Content is protected !!