ನರೇಗಾ ದಿವಸ ಹಿನ್ನೆಲೆ ವಿಶೇಷ ವರದಿ
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೂ 3.95 ಲಕ್ಷ ಕೂಲಿಕಾರರಿಗೆ ಕೆಲಸ ಒದಗಿಸಲಾಗಿದ್ದು, 89.40 ಲಕ್ಷ ಮಾನವ ದಿನಗಳನ್ನು ಸೃಜಿಸಿ ಪ್ರಸಕ್ತ ಸಾಲಿನ ನಿಗಧಿತ ಗುರಿಗಿಂತಲೂ ಶೇ. 119 ಹೆಚ್ಚಿನ ಪ್ರಗತಿ ಸಾಧಿಸಿ ರಾಜ್ಯದಲ್ಲಿಯೇ ಕೊಪ್ಪಳ ಜಿಲ್ಲೆಯು 4ನೇ ಸ್ಥಾನದಲ್ಲಿದೆ. ಮಹಾತ್ಮಾ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅಕುಶಲ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದಲ್ಲದೆ, ಸುಸ್ಥಿರ ಆಸ್ತಿಗಳನ್ನು ನಿರ್ಮಿಸಲಾಗಿದೆ. ಇದರಿಂದ ಗ್ರಾಮೀಣ ಮೂಲ ಸೌಕರ್ಯಗಳ ಬಲವರ್ಧನೆಯಿಂದ ಗ್ರಾಮೀಣ ಆಸ್ತಿ/ಕಟ್ಟಡಗಳನ್ನು ನಿರ್ಮಿಸಿ ಗ್ರಾಮ ಸ್ವರಾಜ್‌ದ ಕನಸು ನರೇಗಾ ಯೋಜನೆಯಿಂದ ಸಾಕಾರಗೊಳ್ಳಲು ಪ್ರೋತ್ಸಾಹಿಸಲಾಗಿದೆ.—ರಾಹುಲ್ ರತ್ನಂ ಪಾಂಡೆಯ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಕೊಪ್ಪಳ
ಅದರಂತೆ ಜಿಲ್ಲೆಯಲ್ಲಿ 7 ತಾಲ್ಲೂಕುಗಳ ಎಲಾ ್ಲಗ್ರಾಮ ಪಂಚಾಯತಿಗಳಲ್ಲಿ ಗ್ರಾಮೀಣ ಜನರು ಉದ್ಯೋಗ ಬೇಡಿಕೆ ನೀಡಿದ ತಕ್ಷಣ ಉದ್ಯೋಗ ಒದಗಿಸಲು ಹಾಗೂ ಸಕಾಲದಲ್ಲಿ ಕೂಲಿ ಪಾವತಿ ಮಾಡಲು ಗ್ರಾಮ ಪಂಚಾಯತಿಗಳಿAದ ಮತ್ತು ಅನುಷ್ಠಾನ ಇಲಾಖೆಗಳಿಂದ ಕ್ರಮ ಕೈಗೊಳ್ಳುತ್ತಾ ಬರುತ್ತಿದೆ. ಜಿಲ್ಲೆಯಲ್ಲಿ ಸತತವಾಗಿ ಪ್ರತಿ ವರ್ಷ ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ನೈಸರ್ಗಿಕ ಸಂಪನ್ಮೂಲ ಬಲಪಡಿಸಲಾಗಿದೆ. ವಲಸೆ ತಡೆಗಟ್ಟಲಾಗಿದೆ, ಆರ್ಥಿಕ ಭದ್ರತೆ ಒದಗಿಸಲಾಗಿದೆ.
ಗ್ರಾಮ ಪಂಚಾಯತಿಯಲ್ಲಿ ಸಮುದಾಯ ಆಧಾರಿತ ಮತ್ತು ವೈಯಕ್ತಿಕ ಕಾಮಗಾರಿಗಳಲ್ಲಿ ಕೂಲಿಕಾರರಿಗೆ ಉದ್ಯೋಗ ಸಿಗುತ್ತಿದ್ದು, ಇದರಿಂದ ಸ್ವಗ್ರಾಮದಲ್ಲೇ ಆರ್ಥಿಕವಾಗಿ ಸದೃಢವಾಗಿ ಸ್ವಾವಲಂಬಿ ಬದುಕು ಕಟ್ಟಿಕೊಂಡು ಯಶಸ್ಸು ಕಾಣಲು ಪ್ರೋತ್ಸಾಹಿಸಲಾಗಿದೆ. ಇದರೊಂದಿಗೆ ಕೊಪ್ಪಳ ಜಿಲ್ಲೆಯ ಗ್ರಾಮ ಪಂಚಾಯತಿಗಳ ಅಭಿವೃದ್ಧಿಗಾಗಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸಣ್ಣ, ಅತೀ ಸಣ್ಣ ರೈತರಿಗೆ, ಭೂರಹಿತ ಕೂಲಿಕಾರರಿಗೆ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ವರ್ಗದವರಿಗೆ, ಮಹಿಳೆಯರಿಗೆ, ವಿಶೇಷ ಚೇತನರಿಗೆ (ದಿವ್ಯಾಂಗರಿಗೆ) ಮತ್ತು ಲಿಂಗತ್ವ ಅಲ್ಪ ಸಂಖ್ಯಾತರಿಗೆ ವಿಶೇಷ ಆದ್ಯತೆ ನೀಡಿ ವೈಯಕ್ತಿಕ ಮತ್ತು ಸಮುದಾಯ ಆಧಾರಿತ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿಕೊಂಡು ಆರ್ಥಿಕವಾಗಿ ಸದೃಢರಾಗಲು ಪ್ರಯತ್ನಿಸಲಾಗುತ್ತಿದೆ.
ಕೃಷಿ ಪೌಷ್ಠಿಕ ಕೈತೋಟ: ಸರ್ಕಾರಿ ಶಾಲೆಗಳಲ್ಲಿ ಮತ್ತು ವಸತಿ ಶಾಲೆಗಳಲ್ಲಿ ಮಕ್ಕಳ ಅಪೌಷ್ಠಿಕತೆ ನಿರ್ವಹಣೆಗೆ ಕೃಷಿ ಪೌಷ್ಟಿಕ ತೋಟದಲ್ಲಿ ತಾಜಾ ತರಕಾರಿ, ಸೊಪ್ಪು, ಹಣ್ಣಿನ ಸಸಿಗಳನ್ನು ಶಾಲೆಯಲ್ಲಿಯೇ ಬೆಳೆಯುತ್ತಿದ್ದು, ಇದನ್ನು ಶಾಲೆಯ ಮಕ್ಕಳಿಗೆ ಊಟಕ್ಕೆ ಬಳಸಿಕೊಳ್ಳಲಾಗುತ್ತಿದೆ. ಹಣ್ಣು, ತರಕಾರಿಗಳು ಖನಿಜಾಂಶ ಜೀವಸತ್ವ, ನಾರಿನಾಂಶ ಮತ್ತು ಸೂಕ್ಷö್ಮ ಪೋಷಕಾಂಶಗಳು ಹೇರಳವಾಗಿ ಹೊಂದಿರುವುದರಿAದ ಶಾಲೆ, ಕಾಲೇಜು, ಅಂಗನವಾಡಿ ಆವರಣ, ಆಸ್ಪತ್ರೆ ಆವರಣ, ವಸತಿ ನಿಲಯ, ಇತ್ಯಾದಿ ಸರ್ವಾಜನಿಕ ಸಂಸ್ಥೆಗಳಲ್ಲಿ ಕೃಷಿ ಪೌಷ್ಠಿಕ ತೋಟಗಳನ್ನು ನಿರ್ಮಿಸಿ ಜಿಲ್ಲೆಯ ಗ್ರಾಮಗಳಲ್ಲಿ ಅಪೌಷ್ಠಿಕತೆ ನಿರ್ಮೂಲನೆ ಮಾಡಲು ಕ್ರಮ ವಹಿಸಲಾಗಿದೆ.
ಸೋಕ್ ಪಿಟ್ (ಬಚ್ಚಲ ಗುಂಡಿ): ಗ್ರಾಮೀಣ ಪ್ರದೇಶದಲ್ಲಿ ಬಚ್ಚಲ ನೀರನ್ನು ರಸ್ತೆಗೆ ಬಿಡುವುದರಿಂದ ಜನರು ರೋಗ ರುಜಿನಗಳಿಂದ ಸಾವು ನೋವುಗಳಿಗೆ ತುತ್ತಾಗಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಇಂಗು ಗುಂಡಿ ಕಾಮಗಾರಿಗಳನ್ನು ಅನುಷ್ಠಾನ ಮಾಡಿಕೊಂಡು ಗ್ರಾಮಗಳಲ್ಲಿ ಆರೋಗ್ಯ ಪರಿಸರವನ್ನು ನಿರ್ಮಿಸಲಾಗಿದೆ.
ಕೃಷಿ ಹೊಂಡ: ರೈತರು ತಮ್ಮ ಹೊಲಗಳಲ್ಲಿ ಅಂತರ್ಜಲ ಪ್ರಮಾಣ ಹೆಚ್ಚಿಸಿಕೊಳ್ಳಲು, ಬೇಸಿಗೆಯಲ್ಲಿ ಜಾನುವಾರುಗಳಿಗೆ, ಹೊಲದಲ್ಲಿ ಕೆಲಸ ನಿರ್ವಹಿಸುತ್ತಿರುವ ರೈತರಿಗೆ ಕುಡಿಯುವ ನೀರಿನ ಅಭಾವವನ್ನು ತಣಿಸಲು ಕೃಷಿ ಹೊಂಡಗಳನ್ನು ಹೆಚ್ಚೆಚ್ಚು ಅನುಷ್ಠಾನಿಸಲಾಗಿದೆ.
ದನ/ಕುರಿದೊಡ್ಡಿ: ಗ್ರಾಮೀಣ ಜನರ ಜೀವಾನೋಪಾಯಕ್ಕಾಗಿ ದನದದೊಡ್ಡಿ ಮತ್ತು ಕುರಿ ದೊಡ್ಡಿಗಳನ್ನು ಅನುಷ್ಠಾನಗೊಳಿಸಿ ಹೈನುಗಾರಿಕೆ, ಜಾನುವಾರುಗಳ ಲಾಲನೆ ಮತ್ತು ಪಾಲನೆ ಮತ್ತು ಸಾಕಾಣಿಕೆ ಕೈಗೊಳ್ಳಲು ಮತ್ತು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರೋತ್ಸಾಹಿಸಲಾಗಿದೆ.
ಕಂದಕ ಬದು ನಿರ್ಮಾಣ: ರೈತರು ತಮ್ಮ ಹೊಲಗಳ ಬದುಗಳಲ್ಲಿ ಕಟ್ಟೆಯನ್ನು ಕಡಿದು ಕಂದಕ ನಿರ್ಮಿಸಿ, ಮಣ್ಣನ್ನು ಬದುಗಳನ್ನಾಗಿ ಮಾಡಿ ಮಳೆಗಾಲದಲ್ಲಿ ಕಂದಕದಲ್ಲಿ ಮಳೆ ನೀರು ಶೇಖರಣೆಗೊಂಡು ಮಣ್ಣಿನ ಸವಕಳಿಯನ್ನು ತಡೆಗಟ್ಟುತ್ತದೆ. ಹೊಲದ ಫಲವತ್ತತೆಯನ್ನು ತೇವಾಂಶ ಮತ್ತು ಅಂತರ್ಜಲವನ್ನು ಹೆಚ್ಚಿಸಿಕೊಂಡು ಹೆಚ್ಚಿನ ಬೆಳೆಯನ್ನು ಬೆಳೆದು ಆರ್ಥಿಕ ಜೀವನಮಟ್ಟ ಸುಧಾರಿಸಲು ಪ್ರಯತ್ನಿಸಲಾಗಿದೆ.
ಕೊಳವೆಬಾವಿ ಮರುಪೂರಣ ಘಟಕ: ರೈತರು ತಮ್ಮ ಹೊಲದಲ್ಲಿ ಬತ್ತಿರುವ ಕೊಳವೆ ಬಾವಿಗಳನ್ನು ಮರುಪೂರಣಗೊಳಿಸುತ್ತಿದ್ದು, ಇದರೊಂದಿಗೆ ಸಮುದಾಯ ಆಧಾರಿತ ಕೊಳವೆ ಬಾವಿಗಳು ಮರುಪೂರಣಗೊಂಡು ಗ್ರಾಮೀಣ ಜನರಿಗೆ ಕುಡಿಯುವ ನೀರು ಒದಗಿಸಲು ಸಹಕಾರಿಯಾಗಿದೆ.
ತೋಟಗಾರಿಕೆ ಬೆಳೆಗಳು: ಗ್ರಾಮೀಣ ಭಾಗದ ರೈತರ ಬಡತನ ನಿರ್ಮೂಲನೆ ಮಾಡಲು ಜೀವನೋಪಾಯದ ಕಾರ್ಯಕ್ರಮಗಳನ್ನು ಒಗ್ಗೂಡಿಸುವುದರ ಮೂಲಕ ರೈತರ ಬದುಕನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ರೈತರು ತಮ್ಮ ಹೊಲಗಳಲ್ಲಿ ಮಾವು, ಪೇರಲ, ದಾಳಿಂಬೆ, ನುಗ್ಗೆ, ತೆಂಗು, ಪಪ್ಪಾಯಿ, ದ್ರಾಕ್ಷಿ, ಕರಿಬೇವು, ಅಂಜೂರ, ಬಾಳೆ ಇನ್ನಿತರ ಆರ್ಥಿಕ ಲಾಭಾಂಶ ಬರುವ ಬೆಳೆಗಳನ್ನು ಅನುಷ್ಠಾನ ಮಾಡಲಾಗಿದೆ.
ರೇಷ್ಮೆ ಬೆಳೆಗಳು: ರೈತರು ಹೆಚ್ಚಿನ ಆದಾಯ ಗಳಿಸಲು ರೇಷ್ಮೆ ಬೆಳೆಗಳಾದ ಹಿಪ್ಪು ನೇರಳೆ ನರ್ಸರಿ, ಹಿಪ್ಪು ನೇರಳೆ ನಾಟಿ, ಹಿಪ್ಪು ನೇರಳೆ ತೋಟದ 2 ಮತ್ತು 3 ನೇ ವರ್ಷದ ನಿರ್ವಹಣೆ, ಹಿಪ್ಪು ನೇರಳೆ ಮರಗಡ್ಡಿ ವಿಧಾನಗಳನ್ನು ಅಳವಡಿಸಿಕೊಂಡು ಹೆಚ್ಚಿನ ಆದಾಯ ತರಲು ರೇಷ್ಮೆ ಬೆಳೆಗಳನ್ನು ಅನುಷ್ಠಾನ ಮಾಡಲಾಗಿದೆ.
ಅರಣ್ಯ ಇಲಾಖೆ ಬೆಳೆಗಳು: ರೈತರು ತಮ್ಮ ಹೊಲಗಳ ಬದುಗಳಲ್ಲಿ ಸಾಗವಾನಿ, ಸಿಲ್ವರ್ ತೇಗ್, ಹೆಬ್ಬೇವು, ಹಲಸು, ಹೊಂಗೆ ಮುಂತಾದ ಗಿಡಗಳನ್ನು ಬೆಳೆಸಿಕೊಂಡು ಆರ್ಥಿಕವಾಗಿ ಬಲಗೊಳ್ಳಲು ಉತ್ತೇಜಿಸಲಾಗಿದೆ. ಇದರೊಂದಿಗೆ ಗುಡ್ಡಗಾಡು ಪ್ರದೇಶದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದ್ದು, ನೀರಿನ ಲಭ್ಯತೆಯಿಂದ ಪಕ್ಷಿ ಪ್ರಾಣಿ ಸಂಕುಲಕ್ಕೆ ಅನುಕೂಲವಾಗಿದೆ. ರಸ್ತೆ ಬದಿ ನೆಡುತೋಪು ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದ್ದು, ದಾರಿ ಹೋಕರಿಗೆ, ಪ್ರಾಣಿ ಪಕ್ಷಿಗಳಿಗೆ ನೆರಳಿನ ಸೌಲಭ್ಯ ಸಿಗುವಂತಾಗಿದೆ.
ಗೋಮಾಳ ಪ್ರದೇಶಾಭಿವೃದ್ಧಿ ಅಭಿಯಾನ: ದಿಬ್ಬದಿಂದ ಕಣಿವೆ ಮಾದರಿಯಲ್ಲಿ ವೈಜ್ಞಾನಿಕ ವಿಧಾನದಲ್ಲಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತದೆ. ನೈಸರ್ಗಿಕ ಮಾದರಿಯಲ್ಲಿ ಗೋಮಾಳ ಅಭಿವೃದ್ಧಿಪಡಿಸಿ ಸಾರ್ವಜನಿಕ ಆಸ್ತಿ ಸಂರಕ್ಷಣೆ, ಜಾನುವಾರುಗಳು ಮತ್ತು ಪ್ರಾಣಿ ಸಂಕುಲಗಳ ಬೆಳವಣಿಗೆಗೆ ಹಾಗೂ ಪ್ರಾಣಿಗಳ ಉತ್ಪನ್ನ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ.
ಹಸಿರೀಕರಣ: ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವನ ಮಹೋತ್ಸವವನ್ನು ಆಚರಿಸಲು ಕೋಟಿ ವೃಕ್ಷ ಅಭಿಯಾನ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಅಭಿಯಾನದಡಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕನಿಷ್ಠ 1700 (ಜಿಲ್ಲೆಗಳಿಗೆ ನೀಡಿದ ಗುರಿಯಂತೆ) 6-8 ಅಡಿ ಎತ್ತರದ ಸಸಿಗಳನ್ನು ನೆಡುವುದರ ಮೂಲಕ ಜಿಲ್ಲಾ ವ್ಯಾಪಿ ವೃಕ್ಷಗಳ ಪೋಷಣೆಯಲ್ಲಿ ಸಹಭಾಗಿಯಾಗಲು ಹಾಗೂ ಪ್ರತಿ ಗ್ರಾಮ ಮಟ್ಟದಲ್ಲಿ ಸಮುದಾಯ ಸ್ಥಳಗಳಲ್ಲಿ ಮತ್ತು ಅಮೃತವನವನ್ನು ನಿರ್ಮಾಣ ಮಾಡಲು ಶಾಲಾ ಕಾಲೇಜುಗಳು, ಸ್ವ-ಸಹಾಯ ಸಂಘಗಳು, ಸ್ಥಳೀಯ ಸರ್ಕಾರೇತರ ಸಂಸ್ಥೆಗಳು ಮತ್ತು ಗ್ರಾಮದ ಪರಿಸರವಾದಿಗಳನ್ನು ಒಳಗೊಂಡು, ಒಗ್ಗೂಡಿಸುವಿಕೆಯಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುತ್ತಿದೆ.
ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐ.ಇ.ಸಿ): ವಿಷಯಾಧಾರಿತ ಐಇಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಕೂಲಿಕಾರರನ್ನು ಸಂಘಟಿಸಿ, 40 ರಿಂದ 50 ಕೂಲಿಕಾರರಿರುವ ಕಾರ್ಮಿಕ ಸಂಘಗಳನ್ನು ರಚಿಸಿ ಆ ಸಂಘಕ್ಕೆ ಒಬ್ಬ ಕಾಯಕ ಬಂಧುವನ್ನು ನೇಮಿಸಲಾಗಿದೆ. ಕೂಲಿ ಬೇಡಿಕೆ ಪಡೆಯಲು ಗ್ರಾಮ ಪಂಚಾಯತಿಗಳ ವಾರ್ಡಗಳಲ್ಲಿ, ಎಸ್.ಸಿ/ಎಸ್.ಟಿ ಕಾಲೋನಿಗಳಲ್ಲಿ, ಸಣ್ಣ ಅತೀ ಸಣ್ಣ ರೈತರ ಓಣಿಗಳಲ್ಲಿ ರೋಜ್‌ಗಾರ್ ದಿವಸ್‌ಗಳನ್ನು ಆಚರಿಸಿ ಕೂಲಿಕಾರರಿಂದ ಬೇಡಿಕೆಗಳನ್ನು ಪಡೆದು ಕೂಲಿಯನ್ನು ಒದಗಿಸಲಾಗಿದೆ.
Comments are closed.