೯೬ನೇ ಬಾರಿ ರಕ್ತದಾನ ನೀಡಿದ ದಾವಣಗೆರೆಯ ಮಹಡಿ ಮನೆ ಶಿವಕುಮಾರ
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ’ರಕ್ತದಾನ ಶಿಬಿರ’ವನ್ನು ದಿನಾಂಕ ೦೯/೦೨/೨೦೨೪ವರೆಗೂ ಬೆಳಿಗ್ಗೆ ೦೯:೦೦ರಿಂದ ಸಾಯಂಕಾಲ ೦೫:೦೦ರವರೆಗೆ ಜಾತ್ರಾಆವರಣದಲ್ಲಿ ಸಂಚಾರಿರಕ್ತ ಸಂಗ್ರಹಣಾ ವಾಹನದಲ್ಲಿರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಈ ರಕ್ತದಾನ ಶಿಬಿರದಲ್ಲಿ ೯೬ನೇ ಬಾರಿ ರಕ್ತದಾನ ನೀಡಿದ ದಾವಣಗೆರೆಯ ಮಹಡಿ ಮನೆ ಶಿವಕುಮಾರ ಅವರ ಸೇವೆ ವಿಶಿಷ್ಟವಾದುದು. ಸುಮಾರು೫೫ವರ್ಷದ ಇವರು ಇಪ್ಪತೈದು ವರ್ಷಗಳಿಂದ ಅನೇಕ ರಕ್ತದಾನ ಶಿಬಿರದಲ್ಲಿ ಭಾಗಿಯಾಗಿರಕ್ತದಾನದ ಮಹತ್ವ ಪ್ರಚಾರಪಡಿಸುತ್ತಿದ್ದಾರೆ.ಪ್ರಸ್ತುತ ಶ್ರೀ ಗವಿಸಿದ್ಧೇಶ್ವರ ಜಾತ್ರಾಆವರಣದಲ್ಲಿನ ಸಂಚಾರಿರಕ್ತದಾನ ಶಿಬಿರದಲ್ಲಿ ಭಾಗಿಯಾಗಿ ಮೈತುಂಬ ರಕ್ತದ ಬಣ್ಣವನ್ನು ಬಳಿದುಕೊಂಡುರಕ್ತದಾನದ ಮಹತ್ವ ತಿಳಿಸುವ ಬರವಣಿಗೆಯೊಂದಿಗೆಜಾತ್ರೆಗೆ ಬರುವವರಿಗೆ ವಿಶೇಷವಾಗಿ ರಕ್ತದಾನದ ಮಹತ್ವವನ್ನು ಸಾರುತ್ತಿದ್ದಾರೆ.ಇದಕ್ಕೆ ಮುಖ್ಯಕಾರಣಇಪ್ಪತ್ತೈದು ವರ್ಷದ ಹಿಂದೆ ಮಹಡಿಮನೆ ಶಿವಕುಮಾರರ ತಂಗಿ ಬೆಂಕಿ ಅನಾಹುತಕ್ಕೀಡಾಗಿಆಸ್ಪತ್ರೆಯಲ್ಲಿರಕ್ತ ಲಭ್ಯವಿಲ್ಲದೆಜೀವ ಕಳೆದುಕೊಂಡರು.ಅಂದಿನಿಂದಅವರುರಕ್ತದಾನದ ಮಹತ್ವವನ್ನು ಸಾರುತ್ತಿದ್ದಾರೆ.
Comments are closed.