ಗಮನ ಸೆಳೆದ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಅಂಗವಾಗಿ ಕೌಶಾಲ್ಯಾಭಿವೃದ್ಧಿ, ಉದ್ಯಮಶೀಲತೆಯೇತರ ಜೀವನೋಪಾಯ ಇಲಾಖೆ ಕೊಪ್ಪಳ, ಜಿಲ್ಲಾಡಳಿತ ಕೊಪ್ಪಳ, ಜಿಲ್ಲಾ ಪಂಚಾಯತ್ ಕೊಪ್ಪಳ ಇವರ ಸಹಯೋಗದಂದಿಗೆಜಾತ್ರಾ ಮಹೋತ್ಸವದಆವರಣದಲ್ಲಿ ಸ್ವ-ಸಹಾಯ ಸಂಘಗಳ ಮಹಿಳೆಯರು ತಯಾರಿಸಿದ ಖಾದ್ಯ ಉತ್ಪನ್ನಗಳು ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಈ ಕರಕುಶಲ ಮತ್ತು ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಸುಮಾರು ೧೦೦ಮಳಿಗೆಗಳು ಇವೆ. ಮಹಿಳಾ ಸ್ವ-ಸಹಾಯ ಸಂಘದವರುತಯಾರಿಸಿದ ಖಾದ್ಯಗಳು, ಪದಾರ್ಥಗಳು ಮತ್ತುಕರಕುಶಲ ವಸ್ತುಗಳಲ್ಲಿ ಬಿದಿರಿನಉತ್ಪನ್ನಗಳು,ಕಸೂತಿ, ತಾಮ್ರ ಉತ್ಪನ್ನಗಳು, ಪೇಪರ್ ಬ್ಯಾಗ್, ಜ್ಯೂಟ್ ಬ್ಯಾಗ್, ಸೆಣಬಿನ ಚೀಲ ಮುಂತಾದ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ದಿನಾಂಕ ೦೯.೦೨.೨೦೨೪ವರೆಗೆ ಇರಲಿದ್ದು, ಆಸಕ್ತರುಭೇಟಿ ನೀಡಿ ಮಾರ್ಗದರ್ಶನ ಮತ್ತುತರಬೇತಿ ಪಡೆಯಬಹುದುಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Comments are closed.