ಗವಿಮಠದಜಾತ್ರೆ -ಅನ್ವೇಷಣೆ ಆತ್ಮಚಿಂತನಕಾರ್ಯಕ್ರಮ
ಕೊಪ್ಪಳ- ಗವಿಮಠದಜಾತ್ರೆಯಲ್ಲಿ ಈ ಬಾರಿಆಧ್ಯಾತ್ಮ ಪ್ರೀಯರು, ಆಧ್ಯಾತ್ಮಚಿಂತಕರಿಗೂ ಒಳಗೊಂಡಂತೆ ಜನಸಾಮಾನ್ಯರಲ್ಲಿಯೂಆಧ್ಯಾತ್ಮ ಪ್ರಜ್ಞೆಯನ್ನು ಮೂಡಿಸಲು ಶ್ರೀಗವಿಸಿದ್ಧೇಶ್ವರ ಜಾತ್ರಾಮಹೋತ್ಸವದಲ್ಲಿ ಪ್ರಸ್ತುತ ವರ್ಷ ಮೂರು ದಿನಗಳ ಕಾಲ ವಿಶೇಷ ಕಾರ್ಯಕ್ರಮವನ್ನುಅನ್ವೇಷಣೆ; ಆತ್ಮಚಿಂತನಕಾರ್ಯಕ್ರಮ. ಶ್ರೀಮಠದಿಂದ ಆಯೋಜಿಸಲಾಗಿತ್ತು.ಸದರಿಕಾರ್ಯಕ್ರಮಮೊದಲ ದಿನವಾದಇಂದುಶ್ರೀಮಠದ ಯಾತ್ರಿನಿವಾಸದ ಬಳಿಯಿರುವ ಶಾಂತವನಯಾತ್ರಿ ನಿವಾಸ ರಸ್ತೆ, ಯಲ್ಲಿ ದಿನಾಂಕ ೨೭.೦೧.೨೦೨೪ ರಂದುಸಮಯ ಬೆಳಿಗ್ಗೆ ೧೦.೩೦ ರಿಂದ ೧.೩೦ ರ ವರೆಗೆಜರುಗಿತು.
ಇದೊಂದುಆಧ್ಯಾತ್ಮಿಕ ಸಂವಾದವಾಗಿದ್ದುಕಾರ್ಯಕ್ರಮದಲ್ಲಿ ಪೂಜ್ಯರಾದ ಪ ಪೂ ಶ್ರೀ ದೇವಾನಂದ ಶರಣರು, ಬೆನಕನಹಳ್ಳಿ ಹಾಗೂ ಪ ಪೂ ಶ್ರೀ ಕೃಷ್ಣಾನಂದ ಶಾಸ್ತ್ರಿಗಳು, ಕಜ್ಜಿಡೋಣಿಅನುಭಾವವನ್ನು ನೀಡಿದರು. ಭಕ್ತರು ಪಾಲ್ಗೊಂಡು, ಅನುಭಾವಾಮೃತವನ್ನುಪಡೆದುಕೊಂಡರುಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪೋಲಿಸ್ ಶ್ವಾನಗಳ ಸಾಹಸ ಪ್ರದರ್ಶನ (ಡಾಗ್‌ಶೋ) :
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳಲ್ಲಿ ಈ ಬಾರಿ ಪೋಲಿಸ್ ಶ್ವಾನಗಳ ಸಾಹಸ ಪ್ರದರ್ಶನಕಾರ್ಯಕ್ರಮಜರುಗಿತು.ಕಾರ್ಯಕ್ರಮವನ್ನುಉದ್ಘಾಟನಾ ಮಾಡಿದ ಉಪವಿಭಾಗಾಧಿಕಾರಿಕ್ಯಾಪ್ಟನ್ ಮಹೇಶ್ ಮಾಲಗಿತ್ತಿಅವರು ಮಾತನಾಡಿ ಈ ಬಾರಿ ಶ್ವಾನ ಪ್ರದರ್ಶನಉತ್ತಮವಾಗಿ ಮೂಡಿಬಂದಿದೆ.ಸಾರ್ವಜನಿಕವಾಗಿಕಳ್ಳತನ ಪ್ರಕರಣಗಳು ನಡೆದಾಗಅವುಗಳನ್ನು ಬೇಧಿಸುವಲ್ಲಿ ಮಹತ್ವದ ಪಾತ್ರವನ್ನು ಶ್ವಾನಗಳು ವಹಿಸುತ್ತವೆಎಂದು ಹೇಳಿದರು.ಕಿನ್ನಿಹೆಸರಿನಶ್ವಾನವು ಕಳ್ಳರನ್ನು ಪತ್ತೆ ಮಾಡುವ ಕಲೆ, ಬಿಂದುಹೆಸರಿನಶ್ವಾನವು ಬಾಂಬ್ ಪತ್ತೆ ಮಾಡುವ ಕಲೆ, ತುಂಗಾ ಹೆಸರಿನ ಶ್ವಾನವು ಕಳೆದ ಹೋದ ವಸ್ತುವನ್ನು ಹುಡುಕಿತರುವ ಕಲೆ ಹಾಗೂ ಸಿಂಧು ಹೆಸರಿನ ಶ್ವಾನವುಆಕರ್ಷಕ ಪರೇಡ್‌ನ್ನು ಮಾಡುವ ಮೂಲಕ ಪ್ರೇಕ್ಷಕರನ್ನುರಂಜಿಸುವಕಾರ್ಯ ಮಾಡಿದವು. ಶ್ರೀಮಠದ ಜಾತ್ರಾ ಮೈದಾನದಲ್ಲಿ ಮೂಡಿಬಂದ ಈ ಶ್ವಾನಗಳ ಕಸರತ್ತು ಪ್ರದರ್ಶನ ನೋಡುಗರಜಾತ್ರೆಗೆ ಭಂದ ಭಕ್ತರಕಣ್ಮನ ಸೆಳೆಯಿತು.
ಕರಾಟೆ ಪ್ರದರ್ಶನ :
ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದಕಾರ್ಯಕ್ರಮದಲ್ಲಿಕೊಪ್ಪಳದ ಭೂಮಿಕರಾಟೆ ಫೌಂಡೇಶನ್, ತಂಡ ಹಾಗೂ ಕೊಪ್ಪಳ ಜಿಲ್ಲಾಕರಾಟೆ ಸಂಘದವರಿಂದಇಂದುದಿನಾಂಕ ೨೭.೦೧.೨೦೨೪ ರಂದು ಮುಂಜಾನೆ ೧೨.೦೦ಕ್ಕೆ ಶ್ರೀಮಠದ ಜಾತ್ರಾ ಮೈದಾನದಲ್ಲಿ ಬಾರಿಕರಾಟೆ ಪ್ರದರ್ಶನಕಾರ್ಯಕ್ರಮ ನಡೆಯಿತು.ಕಾರ್ಯಕ್ರವನ್ನು ಉದ್ಘಾಟಿಸಿದ ನಗರಸಭೆಯ ಸದಸ್ಯರಾದರಾಜಶೇಖರಆಡೂರ ಮಾತನಾಡಿಕರಾಟೆಆತ್ಮರಕ್ಷಣೆಯಕಲೆಯಾಗಿದ್ದು ಮತ್ತುಆರೋಗ್ಯದದೃಷ್ಟಿಯಿಂದಉತ್ತಮಕ್ರೀಡೆಯಾಗಿದೆಅದುಎಲ್ಲರಿಗೂಉಪಯುಕ್ತವಾಗಿದೆ.ಇಂತಹಆರೋಗ್ಯಕರ ಚಟುವಟಿಕೆಗಳಲ್ಲಿ ಯುವಕರು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕೆಂದು ಹೇಳಿದರು.ಇಂದಿನ ದಿನಮಾನಗಳಲ್ಲಿ ಹೆಣ್ಣು ಮಕ್ಕಳು ಸಹ ಈ ಕ್ರೀಡೆಗಳಿಗೆ ಆಸಕ್ತಿ ತೊರಿಸುತ್ತಿರುವದುಧನಾತ್ಮಕ ಬೆಳವಣಿಗೆ ಆಗಿದೆಎಂದರು.ಕರಾಟೆ ಪ್ರದರ್ಶನದಲ್ಲಿಜಿಮ್ನಾಸ್ಟಿಕ್ ಪ್ರದರ್ಶನ ಹಾಗೂ ನಾಮ್‌ಚೆಕ್ ಪ್ರದರ್ಶನ, ದೊಣ್ಣೆ ವರಸೆ ಪ್ರದರ್ಶನ ಹಾಗೂ ವಿವಿಧ ಸಾಹಸ ಪ್ರದರ್ಶನಗಳು, ವಿವಿಧ ಶ್ರೇಣಿಗಳ ಕಟಾಗಳ ಕಸರತ್ತುಗಳು, ಬೈಕ್ ಸ್ಟಂಟ್, ಇಟ್ಟಗೆ,ಹಂಚು ಒಡೆಯುವುದು, ಮಹಿಳೆಯರಿಗಾಗಿ ಆತ್ಮರಕ್ಷಣಾಕಲೆಗಳು, ಹೀಗೆ ಇತ್ಯಾದಿ ಸಾಹಸ ಪ್ರದರ್ಶನಗಳು ಸಾಹಸಪ್ರಿಯರಜಾತ್ರೆಗೆ ಬಂದ ಭಕ್ತರಕಣ್ಮನ ಸೆಳೆದವು. ಈ ಸಂದರ್ಬದಲ್ಲಿ ಸಿಪಿಐ ಮಹಾಂತೇಶ ಸಜ್ಜನ್ ಹಾಗೂ ಕರಾಟೆತರಬೇತುದಾರ ಮೌನೇಶ ವಡ್ಡಟ್ಟಿ ಹಾಗೂ ಕ್ರೀಡಾಆಸಕ್ತರು,ಸಾಹಸ ಪ್ರೀಯರು ಪಾಲ್ಗೊಂಡಿದ್ದರು.
ದಾಲಪಟಾ, ಮೋಜಿನಗೊಂಬೆಕುಣಿತ :
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಕಾರ್ಯಕ್ರಮದಲ್ಲಿಶ್ರೀಮಠದ ಜಾತ್ರಾ ಮೈದಾನದಲ್ಲಿಬೆಳಿಗ್ಗೆ೧೧ :೦೦ಗಂಟೆಗೆಸಮರ ಕಲಾ ಪ್ರದರ್ಶನಕಾರ್ಯಕ್ರಮಜರುಗಿತು. ಕಾರ್ಯಕ್ರಮವನ್ನು ಡೊಳ್ಳು ಭಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದಯುವಜನ ಸೇವಾ ಕ್ರೀಡಾ ಇಲಾಖೆ ಉಪನಿರ್ದೆಶಕರಾದ ವಿಠಲ್‌ಜಾಬಗೌಡಅವರು ಪ್ರಾಚೀನ ಕಲೆಗಳನ್ನು ಇಂದಿನ ಯುವಜನತೆಅರಿವುದುಅವಶ್ಯಕತೆಎಂದು ಹೇಳಿದರು. ಹಿಂದಿನ ಕಾಲ ಸಮರಕಲೆಯಾದದಾಲಪಟ್ಟಕೈಗತ್ತಿ ವರಸೆಕಲೆಯನ್ನು ಪ್ರಸ್ತುತಪಡಿಸುತ್ತದೆ.ಕೈಗತ್ತಿಯಿಂದ ನಿಂಬೆಹಣ್ಣನ್ನುಕತ್ತರಿಸುವುದು, ತಲೆಯ ಮೇಲಿಟ್ಟು ಕಾಯಿ ಒಡೆಯುವುದು, ನೋಡುಗರನ್ನು ಮಂತ್ರಮುಗ್ಧಗೊಳಿಸುವ ಈ ಕಲೆ ಕೊಂಚ ಯಾಮಾರಿದರೂಅಪಾಯತಪ್ಪಿದ್ದಲ್ಲ. ಪ್ರಾಚೀನ ಕಲೆಗಳು ಮಾಯವಾಗುತ್ತಿರುವ ಈ ಸಂದರ್ಭದಲ್ಲಿತಂಡದ ಹಿರಿಯಕಲಾವಿದರಾದ ಹನುಮಂತಪ್ಪ ಬಗ್ಗಲ್, ಗಂಗಪ್ಪಬಗ್ಗಲ್, ಯುವಕಲಾವಿದರಾದ ಬಸವರಾಜ್, ಚನ್ನಬಸವ, ಬಾಲ ಕಲಾವಿದರಾದ ಸುದೀಪ್‌ದಾಲ್‌ಪಟ ಪ್ರದರ್ಶನ ನೀಡಿದರು.ಪ್ರದರ್ಶನ ನೋಡುಗರಜಾತ್ರೆಗೆ ಭಂದ ಭಕ್ತರಕಣ್ಮನ ಸೆಳೆಯಿತು.
ಮೋಜಿನ ಗೊಂಬೆ ಕುಣಿತ :ಇದೊಂದುಜಾನಪದಕಲೆಯಾಗಿತ್ತುದೊಡ್ಡಗಾತ್ರದ ಗೊಂಬೆಗಳ ಒಳಗೆ ಮನುಷ್ಯರು ಒಳಹೊಕ್ಕು ಸಂಗೀತದ ತಾಳಕ್ಕೆ ತಕ್ಕಂತೆ ನೃತ್ಯ ಮಾಡುತ್ತಾ ಸಾಗುವ ಕಲೆಯಾಗಿದೆ.
Comments are closed.