ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ರಕ್ತದಾನ ಮಾಡಿದ ಸ್ವಾಮೀಜಿಗಳು  

Get real time updates directly on you device, subscribe now.

ಕೊಪ್ಪಳ

ನಿಮಿತ್ಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಶ್ರೀ ಗವಿಮಠ ಜಂಟಿಯಾಗಿ  ಶ್ರೀ ಗವಿಸಿದ್ಧೇಶ್ವರ ಆರ್ಯುವೇದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ರಕ್ತದಾನ ಶಿಬಿರದಲ್ಲಿ ಸ್ವಾಮೀಜಿಗಳಿಬ್ಬರು ರಕ್ತದಾನ ಮಾಡುವ ಮೂಲಕ ರಕ್ತದಾನದ ಮಹತ್ವವವನ್ನು ಸಾರಿದರು.

ಧಾರವಾಡದ ನರೇಂದ್ರ ಗ್ರಾಮದ ಮಹಾಂತೇಶ್ವರಮಠದ ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳು  ಹಾಗೂ ಮಾನ್ವಿತಾಲೂಕಿನ ಬೆಟ್ಟದೂರು ಗ್ರಾಮದ ಪ್ರಭುಲಿಂಗೇಶ್ವರ ಮಠದ ಮಹದೇವದೇವರು ರಕ್ತದಾನ ಮಾಡಿದರು.

ಚಾಲನೆ – ಇದಕ್ಕೂ ಮೊದಲು ರಕ್ತದಾನ ಶಿಬಿರಕ್ಕೆ  ಶ್ರೀ ಮಹಾಂತಸ್ವಾಮೀಜಿಗಳು, ಶ್ರೀ ಗಿರಿಮಲ್ಲೇಶ್ವರ ಮಹಾಸ್ವಾಮಿಗಳು, ಶ್ರೀ ಮಹಾಂತೇಶ್ವರ ಮಹಾಸ್ವಾಮಿಗಳು, ಶ್ರೀ ವಿಶ್ವನಾಥ ಮಹಾಸ್ವಾಮಿಗಳು, ಶ್ರೀ ಚನ್ನಮಲ್ಲದೇವರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚೇರಮನ್ ಸೋಮರಡ್ಡಿ ಅಳವಂಡಿ, ಪ್ರಕಾ ಡಾ. ಶ್ರೀನಿವಾಸ ಹ್ಯಾಟಿ, ನಿರ್ದೇಶಕರಾದ ಡಾ. ಶಿವನಗೌಡ, ಮಂಜುನಾಥ ಸಜ್ಜನ, ಸುಧೀರ ಅವರಾದಿ ಇದ್ದರು.

27ಕೆಪಿಎಲ್21 ಕೊಪ್ಪಳ ನಗರದ ಶ್ರೀ ಗವಿಸಿದ್ಧೇಶ್ವರ ಆರ್ಯುವೇದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ರಕ್ತದಾನ ಶಿಬಿರಕ್ಕೆ ಸ್ವಾಮೀಜಿಗಳು ರಕ್ತದಾನ ಮಾಡಿ ಚಾಲನೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!