ಶ್ರೀ ಗವಿಸಿದ್ದೇಶ್ವರ ಅರ್ಬನ್ ಬ್ಯಾಂಕ್ ಭಾಗ್ಯನಗರ ಶಾಖೆ ಉದ್ಘಾಟನೆ
ಚಿತ್ರಗಾರ ಓಣಿಯ ಕಟ್ಟಡದ ನೆಲಮಹಡಿಗೆ ಸ್ಥಳಾಂತರ
ಕೊಪ್ಪಳ : ಭಾಗ್ಯನಗರದ ಮುಖ್ಯ ರಸ್ತೆಯಲ್ಲಿರುವ ಪೆದ್ದಸುಬ್ಬಯ್ಯ ಸಲ್ಲಾ ಅವರ ಕಟ್ಟಡದ ಮೊದಲನೆ ಮಹಡಿಯಲ್ಲಿರುವ ಬ್ಯಾಂಕಿನ ಭಾಗ್ಯನಗರ ಶಾಖೆಯನ್ನು ಚಿತ್ರಗಾರ ಓಣಿಯಲ್ಲಿನ ಮಲಿಯಮ್ಮ ದೇವಸ್ಥಾನದ ಎದುರಿಗಿರುವ ಪರಶುರಾಮಸಾ ವಾಸುದೇವಸಾ ಖಟವಟೆ ಇವರ ಕಟ್ಟಡದ ನೆಲಮಹಡಿಗೆ ಸ್ಥಳಾಂತರಿಸಲಾಯಿತು.
ತನ್ನಿಮಿತ್ತ ಶ್ರೀ ವಿನಾಯಕ, ಲಕ್ಷ್ಮೀ ಹಾಗೂ ಸರಸ್ವತಿ ಪೂಜಾ ಕಾರ್ಯಕ್ರಮಗಳು ಜರುಗಿದವು. ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯವಹಿಸಿ ಸ್ಥಳಾಂತರಗೊಂಡ ಶಾಖೆಗೆ ಆಶೀರ್ವದಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ರಾಜಶೇಖರ ಗೌಡ ಆಡೂರು,ಉಪಾಧ್ಯಕ್ಷರಾದ ಬಸಯ್ಯ ಹಿರೇಮಠ, ಬ್ಯಾಂಕಿನ ನಿರ್ದೇಶಕ ಮಂಡಳಿ, ಭಾಗ್ಯನಗರದ ಗಣ್ಯರು ಬ್ಯಾಂಕಿನ ಗ್ರಾಹಕರು, ಪ್ರಧಾನ ವ್ಯವಸ್ಥಾಪಕರಾದ ಪ್ರಭಾಕರ ಜೋಷಿ ಹಾಗೂ ಸಿಬ್ಬಂದಿ ವರ್ಗ, ಪಿಗ್ಮಿ ಏಜೆಂಟರು ಉಪಸ್ಥಿತರಿದ್ದರು
Comments are closed.