ಸಂಸ್ಕೃತಿ, ಜ್ಞಾನ, ಸಂಗೀತದ ಜಗತ್ತನ್ನೇ ಸೃಷ್ಠಿಸುವ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹಾಜಾತ್ರೋತ್ಸವ
ಕೊಪ್ಪಳದ ಬೆಟ್ಟದಲ್ಲಿ ಪೂರ್ವಕ್ಕೆ ಮುಖಮಾಡಿ ನಿಂತಿರುವ,ಶಿವ ಸಾನಿಧ್ಯದ ?ಣ್ಮಾದ್ರಿ ಅನ್ನ, ಅರಿವು, ಆಧ್ಯಾತ್ಮ, ತ್ರಿವಿಧ ದಾಸೋಹದ ಗಂಗೋತ್ರಿ. ಭಕ್ತ ದೇವರಿಗಾಗಿ ಕಾಯದೆ ದೇವನೇ ಭಕ್ತರಿಗಾಗಿ ಕಾಯುವಂತಿರುವ ಪವಿತ್ರ ಸ್ಥಳವೇ ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಸಿದ್ಧಿ ಪಡೆದಸಂಸ್ಥಾನ ಶ್ರೀ ಗವಿಮಠ.ಜಾತ್ರೆಗು ಶಕ್ತಿ ಇದೆ ಎಂದು ತೋರಿಸಿರುವ ಶ್ರೀ ಗವಿಮಠವು ಜಾತ್ರಾ ಮಹೋತ್ಸವವು ಕೇವಲ ಜಾತ್ರೆಯಾಗಿರದೆ ಭಕ್ತಿ, ಆಧ್ಯಾತ್ಮ, ಸಾಮಾಜಿಕ ಕಳಕಳಿ,ಮನೋರಂಜನೆ, ಸಾಂಸ್ಕ್ರೃತಿಕ ಭವ್ಯ ರಥನಿಜಕ್ಕೂ ಅನನ್ಯ ಅರ್ಥಪೂರ್ಣ.
ಸಂಸ್ಥಾನ ಶ್ರೀಗವಿಮಠದ ಪರಂಪರೆ:
ಶ್ರೀ ಮಠದ ಸ್ಥಾಪಕರು ರುದ್ರಮುನಿ ಶಿವಯೋಗಿಗಳು, ಪ್ರಸ್ತುತ ಕತೃ ಗದ್ದುಗೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ೧೧ನೇ ಪೀಠಾಧೀಶರಾಗಿದ್ದಾರೆ. ಇವರ ಬಾಲ್ಯದ ನಾಮ ಗುಡದಯ್ಯ. ನಂತರ ಶ್ರೀ ಮಠದ ಆಗಿನ ಪೀಠಾಧಿಕಾರಿಯಾಗಿದ್ದ ಶ್ರೀ ಗುರುಚನ್ನಬಸವ ಶಿವಯೋಗಿಗಳ ಆಶೀರ್ವಾದದ ಮೇರೆಗೆ ಗುಡದಯ್ಯ ಗವಿಸಿದ್ಧರಾದರು. ಶ್ರೀ ಗವಿಸಿದ್ದೇಶ್ವರರು ಸ್ವ ಇಚ್ಚೇಯಿಂದ ತಮ್ಮ ಗುರುಗಳಿಗಾಗಿ ನಿರ್ಮಿಸಿದ ಗದ್ದುಗೆಯಲ್ಲಿ ಪ್ರವೇಶಿಸಿ ಸಮಾಧಿಯನ್ನು ಸ್ವೀಕರಿಸಿ ಗುರುಗಳ ಕೈಯಲ್ಲಿಯೇ ತಮ್ಮ ಪುಣ್ಯಾರಾಧನೆಯನ್ನು ಆಚರಿಸಿಕೊಳ್ಳುವ ಮೂಲಕ ಶ್ರೀ ಗವಿಸಿದ್ಧೇಶ್ವgರು ಅಮರರಾದರು.
ಶ್ರೀ ಗವಿಸಿದ್ಧೇಶ್ವರ ಸ್ವಾಮಿಜಿಯವರ ಪುಣ್ಯಪರಂಪರೆಯನ್ನು ಮುಂದುವರೆಸಿಕೊಂಡು ಹೋದವವ ಸಾಲಿನಲ್ಲಿ ೧೬ನೇ ಪೀಠಾಧಿಕಾರಿಯಾಗಿದ್ದ ಶ್ರೀ ಮರಿಶಾಂತವೀರ ಮಾಹಾಸ್ವಾಮಿಗಳು ವಿದ್ವಾಂಸರಾದ ಇವರು ನಾಡಿನ ಪ್ರಗತಿ ಜನತೆಯ ಉದ್ಧಾರ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಅರಿತು ಸುತ್ತಮುತ್ತಲಿನ ಹಳ್ಳಿಗಳ ಕಡುಬಡವ ವಿದ್ಯಾರ್ಥಿಗಳಿಗೆ ಶ್ರೀ ಗವಿಸಿದ್ಧೇಶ್ವರ ಶಾಲೆ ೧೯೫೧ರಲ್ಲಿ ಸ್ಥಾಪಿಸಿದರು. ಇದು ಕಲ್ಲಾಣ ಕರ್ನಾಟಕದಲ್ಲಿ ಸ್ಥಾಪಿತವಾದ ಪ್ರಥಮ ಖಾಸಗಿ ಶಾಲೆ. ಶೈಕ್ಷಣಿಕ ಕಾಳಜಿಯಿಂದ ಇವರು ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟನ್ನು ಸ್ಥಾಪಿಸಿ ಶ್ರೀಮಠದ ಆಸ್ತಿಯನಲ್ಲ ಟ್ರಸ್ಟಿಗೆ ದಾನ ನೀಡಿದರು ಅದರ ಫಲವಾಗಿ ಅನೇಕ ಸಂಸ್ಥೇಗಳು ಸಾಕಾರಗೊಂಡವು. ಇವರ ನಂತರ ಮಠದ ಸತ್ ಸಂಪ್ರದಾಯವನ್ನು ಜೀವಂತವಾಗಿಟ್ಟವರು ಸಂಸ್ಥಾನದ ೧೭ನೇ ಪೀಠಾಧಿಪತಿಗಳು ಶ್ರೀ ಶಿವಶಾಂತವೀರ ಮಾಹಾಸ್ವಾಮಿಗಳು ಇವರು ೧೯೯೮ರಲ್ಲಿ ಕೊಪ್ಪಳದಲ್ಲಿ ಶ್ರೀ ಗವಿಸಿದ್ಧೇಶ್ವರ ಆಯುರ್ವೆದ ಮಹಾವಿದ್ಯಾಲಯ ಮತ್ತು ಆಯುರ್ವೆದ ಆಸ್ಪತ್ರೆಯನ್ನು ಸ್ಥಾಪಿಸಿ, ಬಡವರಿಗೆ ಉಚಿತವಾಗಿ ಚಿಕಿತ್ಸೆ ಮತ್ತು ಔಷದಿ ಲಭ್ಯವಾಗುವಂತೆ ಮಾಡಿದರು. ಶ್ರೀ ಅಭಿನವ ಗವಿಸಿದ್ಧೇಶ್ವರ ಮಾಹಾಸ್ವಾಮಿಗಳು ಪ್ರಸ್ತುತ ಪೀಠಾಧೀಶರಾಗಿದ್ದಾರೆ. ಪ್ರಗತಿಪರ ಧೋರಣೆಗಳಿಂದ ಪೂರ್ವ ಪೀಠಗಳ ಸಂಕಲ್ಪಗಳನ್ನು ಸಾಕಾರಗೂಳಿಸಲು ಅವಿರತ ಪರಿಶ್ರಮಿಸುತ್ತರುವ ಶ್ರೀಗಳೂ ತಮ್ಮನ್ನು ತಾವು ಶ್ರೀಮಠದ ಸೇವಕನಂತೆ ಸಮರ್ಪಿಸಿಕೊಂಡಿದ್ದಾರೆ.
ಮಹಾಜಾತ್ರೋತ್ಸವ ಸಾಂಸ್ಕೃತಿಕ ಪರಂಪರೆಯ ಹೊಳಹುಗಳು:
ಬಸವ ಪಟ ಆರೋಹಣ:ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವದ ನಾಲ್ಕುದಿನ ಮೊದಲು’ಬಸವ ಪಟ ಆರೋಹಣ’ ಎಂಬ ಧಾರ್ಮಿಕ ಕಾರ್ಯಕ್ರಮವೂ ಜರುಗುತ್ತದೆ. ಬಸವಪಟಕ್ಕೆ ವಿಧಿವಿಧಾನವಾಗಿ ಪೂಜೆ ಸಲ್ಲಿಸಿ, ನೈವೇದ್ಯ ಮಾಡಿ ಆ ಬಳಿಕ ಅದನ್ನು ಕೈಯಲ್ಲಿ ಹಿಡಿದುಕೊಂಡು ಶ್ರೀ ಗವಿಮಠದ ಕರ್ತೃ ಗದ್ದುಗೆಯ ಸುತ್ತ ೫ ಸುತ್ತ ಪ್ರದಕ್ಷಿಣೆ ಹಾಕುತ್ತಾ ಗವಿಸಿದ್ಧೇಶ್ವರನ ಜಯಘೋಷಗಳೊಂದಿಗೆ ಶ್ರೀ ಗವಿಮಠದ ಕರ್ತೃ ಗದ್ದುಗೆಯ ದ್ವಾರ ಬಾಗಿಲಿನ ಎದುರಿಗಿರುವ ಕಲ್ಲಿನ ಮೇಲ್ಮಂಟಪದ ಕಂಭಕ್ಕೆ ಬಸವ ಪಟ ಕಟ್ಟುತ್ತಾರೆ.ನಮ್ಮದು ಕೃಷಿ ಪ್ರಧಾನ ನಾಡು.ಈ ನಾಡಿನಲ್ಲಿ ವರ್ಷಪೂರ್ತಿ ಉತ್ತಮ ಮಳೆ, ಉತ್ತಮ ಬೆಳೆ ಬಂದು ರೈತಾಪಿ ವರ್ಗಕ್ಕೆ ಸುಖ, ಶಾಂತಿ, ಸಮೃದ್ಧಿ ಸದಾ ದೊರೆಯಲೆಂಬ ಆಶಯಕ್ಕಾಗಿ ‘ಬಸವ ಪಟ ಆರೋಹಣ’ ಮಾಡುವ ಉದ್ದೇಶ. ಶ್ರೀಮಠದ ಜಾತ್ರಾ ಪರಂಪರೆಯಲ್ಲಿ ಬಸವ ಪಟ ಆರೋಹಣ ಕಾರ್ಯಕ್ರಮದ ಮೂಲಕವೇ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಂತಾಗುತ್ತದೆ.
ತೆಪ್ಪೋತ್ಸವ: ಸಂಸ್ಥಾನ ಶ್ರೀ ಗವಿಮಠದ ಜಾತ್ರಾ ಮಹೋತ್ಸವ ವ?ದಿಂದ ವ?ಕ್ಕೆ ಅತ್ಯಂತ ಮಹತ್ವ ಪಡೆದುಕೊಳ್ಳುತ್ತಿದೆ. ಮಹಾರಥೋತ್ಸವ ಮುನ್ನ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹು ವಿಜೃಂಭಣೆಯಿಂದ ಅತ್ಯಂತ ಕಣ್ಮನ ಸೆಳೆಯುವ ಉತ್ಸವ ತೆಪ್ಪೋತ್ಸವ.ತೆಪ್ಪದ ಮೇಲೆ ನಡೆಯುವ ದೇವರ ಉತ್ಸವೆಂದು ಅರ್ಥ.ಪ್ರಾಕೃತಿಕ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಶೃಂಗಾರಗೊಂಡ ಶ್ರೀ ಗವಿಮಠದ ಆವರಣದಲ್ಲಿ ವೈಶಂಪಾಯನ ಸರೋವರದಂತೆ ಕಾಣುವ ಶ್ರೀ ಮಠದ ಕೆರೆಯು ನೋಡಲು ಸುಂದರ,ಮನೋಹರ. ಶ್ರೀ ಗವಿಸಿದ್ಧೇಶ್ವರನ ಭವ್ಯ ಮೂರ್ತಿಯನ್ನು ತೆಪ್ಪದ ಮಂಟಪದಲ್ಲಿ ಪ್ರತಿ?ಪಿಸಿದಾಗ ನೆರೆದ ಲಕ್ಷೆಪಲಕ್ಷ ಭಕ್ತರ ಮನವು ಸ್ವರ್ಗವೇ ಧರೆಗಿಳಿದಂತೆ ಪುಳಕಗೊಳ್ಳುವರು. ವಿರಾಜಮಾನವಾದ ಗವಿಸಿದ್ಧೇಶ್ವರರನ್ನು ಹೊತ್ತು ಪು?ವೇ ತೇಲಾಡುವಂತೆ ಸಾಗಿ ಕೆರೆಯ ಸುತ್ತಲೂ ಪ್ರದಕ್ಷಿಣೆ ಹಾಕುವಾಗ ಬಳಗಾನೂರ ಚಿಕೇನಕೊಪ್ಪದ ಪೂಜ್ಯ ಶ್ರೀ ಶಿವಶರಣರ ಕಂಠದಿಂದ ನಾದಮಯವಾಗಿ ಹೊರಹೊಮ್ಮುವ ಶ್ರೀ ಗವಿಸಿದ್ಧೇಶ್ವರ ಪಾಹಿಮಾಮ್ ಪಾಹಿಮಾಮ್ ಎನ್ನುವ ಸ್ತೋತ್ರ ಕರ್ಣಸ್ಪರ್ಶವಾದಾಗ ಸಾಕ್ಷಾತ್ ಶ್ರೀ ಗವಿಸಿದ್ಧೇಶ್ವರ ಎಲ್ಲ ಭಕ್ತರನ್ನು ಹರಸುತ್ತಿದ್ದಾರೆ ಎಂಬ ಭಾವ ಭಕ್ತರಲ್ಲಿ ಮೂಡಿ ತಮ್ಮೋಳಗೆ ಪುಳಕಿತರಾಗಿ ಪರಮಾನಂದ ಭಾವದಿಂದ ಪುನಿತರಾಗುವರು. ಇಂತಹ ಮನಮೋಹಕ, ಭಕ್ತಿ ಪ್ರಧಾನಕ ಉತ್ಸವವಿರುವದು ಶ್ರೀಮಠದ ಹೆಮ್ಮೆ
ಶ್ರೀ ಗವಿಸಿದ್ಧೇಶ್ವರ ಮೂರ್ತಿಯ (ಪಲ್ಲಕ್ಕಿ) ಕಳಸದ ಮೆರವಣಿಗೆ: ಸಂಸ್ಥಾನಶ್ರೀ ಗವಿಮಠದ ೧೧ ಪೀಠಾಧೀಶರಾಗಿದ್ದ ಜ|| ಗವಿಸಿದ್ದೇಶ್ವರ ಮಹಾಸ್ವಾಮಿಗಳವರು ಶ್ರೀ ಗವಿಮಠಕ್ಕೆ ಆಗಮಿಸುವ ಪೂರ್ವದಲ್ಲಿ ಕೊಪ್ಪಳದ ಜಡೇಗೌಢರ ಮನೆಯಲ್ಲಿ ಲಿಂಗಾನುಷ್ಠಾನ ನಿರತರಾಗಿದ್ದರು. ಶ್ರೀ ಗವಿಮಠಕ್ಕೆ ಬರುವ ಪೂರ್ವದಲ್ಲಿ ಗೌಡರ ಧರ್ಮಪತ್ನಿಯವರಿಗೆ ತಮ್ಮ ಶಿಖೆ ಅಂದರೆ (ಜಡೆ)ಯನ್ನೇ ತೆಗೆದುಕೊಟ್ಟರು. ಅಂದಿನಿಂದ ಆ ಮನೆತನಕ್ಕೆ ಜಡೇಗೌಡ್ರ ಎಂಬ ಹೆಸರು ಬಂದಿತು.ಈ ಕಾರಣಕ್ಕಾಗಿ ಶ್ರೀಮಠದಲ್ಲಿ ಪೂಜೆಗೊಂಡ ಗವಿಸಿದ್ದೇಶ್ವರ ಮೂರ್ತಿಯನ್ನು ಜಡೇಗೌಡರ ಮನೆಯಲ್ಲಿ ಮೂಹರ್ತಗೊಳಿಸಿ ಪೂಜಾದಿಗಳನ್ನು ಸಲ್ಲಿಸಿದ ತರುವಾಯ ವಾದ್ಯಗಳ ಸಮೇತ ಪಲ್ಲಕ್ಕಿಯನ್ನು ಕೊಪ್ಪಳದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮುಖಾಂತರ ಶ್ರೀ ಗವಿಮಠಕ್ಕೆ ತರುವದು ಸತ್‌ಸಂಪ್ರದಾಯ.ಜಡೇಗೌಡರ ಮನೆಯಲ್ಲಿಯೇ ಪೂಜಾದಿ ಪುನ್ಯಕರ್ಮ ಸ್ವೀಕರಿಸಿಬಂದ ಗವಿಸಿದ್ದೇಶ್ವರನನ್ನು ಪುನಃ ಆ ಮನೆಯಿಂದಲೇ ಆಮಂತ್ರಿಸುವ ಹಾಗೂ ಕರೆತರುವ ಹಿನ್ನಲೆಯು ಇದರಲ್ಲಿ ಅಳವಟ್ಟಿದೆ.
ದೇವಿಗೆ ಉಡಿ ತುಂಬುವ ಕಾರ್ಯಕ್ರಮ:ಜಾತ್ರೆಯ ಅಂಗವಾಗಿ ಜಾತ್ರೆಯ ದಿನ ಪ್ರತಿವರ್ಷ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮವು ಸಾಯಂಕಾಲ ಜರುಗುತ್ತದೆ.ಈ ಕಾರ್ಯಕ್ರಮದಲ್ಲಿ ಗವಿಮಠದ ಬೆಟ್ಟದ ಮೇಲಿರುವ ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಉಡಿತುಂಬುವ ಕಾರ್ಯದಲ್ಲಿ ಸಕ್ರೀಯವಾಗಿ ಎಲ್ಲ ತಾಯಂದಿರು ಭಾಗವಹಿಸುತ್ತಾರೆ.ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಬಾಳೆಕಂಬ, ತೆಂಗಿನ ಗರಿ, ಕಬ್ಬಿನ ಹಂದರ ಹಾಕಿರುತ್ತಾರೆ. ಹೋಳಿಗೆ ಸಜ್ಜಕದ ನೈವೇದ್ಯವಾಗುತ್ತದೆ. ಆಗಮಿಸಿದ ಎಲ್ಲ ತಾಯಂದಿರಿಗೂ ಮಂಗಳಕರವಾದ ಬಾಗೀನ ಕೊಡುವ ಮೂಲಕ ಉಡಿತುಂಬುವ ಕಾಯಕವನ್ನು ಪರಸ್ಪರರು ನಡೆಸಿಕೊಡುವರು.ಅಷ್ಟೊತ್ತಿಗೆ ಸ್ವಾಮಿಗಳವರ ಪಾದೋದಕ ಬರುತ್ತದೆ.ಅದನ್ನು ಸಿಂಪಡಿಸಿದ ನಂತರ ಅನ್ನ ಸಂತರ್ಪಣೆ ನಡೆಯುತ್ತದೆ.ಶ್ರೀ ಅನ್ನಪೂರ್ಣೇಶ್ವರಿಗೆ ಹಾಗೂ ಎಲ್ಲ ತಾಯಂದಿರಿಗೂ ಉಡಿತುಂಬುವ ಮೂಲಕ ಜಾತ್ರೆಯ ಎಲ್ಲ ಕಾರ್ಯಕ್ರಮಗಳು ಸುಸೂತ್ರವಾಗಿ, ಮಂಗಳಕರವಾಗಿ ಸಾಗಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶ. ಇದರ ಜೊತೆಗೆ ತಮ್ಮ ತಮ್ಮ ಇಷ್ಟಾರ್ಥಗಳ ಶೀಘ್ರ ಈಡೇರಿಕೆಯಾಗಿ, ಕುಟುಂಬದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂಬ ಸಂಕಲ್ಪವನ್ನು ತಂದುಕೊಂಡು ಅಂದು ಎಲ್ಲ ತಾಯಂದಿರು ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಈ ಮೂಲಕ ಹರಕೆ ಮಾಡಿಕೊಳ್ಳುತ್ತಾರೆ.
ಕಳಸ ಹಾಗೂ ಮುದ್ದಾಬಳ್ಳಿಯಿಂದ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿಯ ಮೆರವಣಿಗೆ:ಜಾತ್ರೆಯ ಮುನ್ನಾ ಪ್ರತಿವರ್ಷದ ಸಂಪ್ರದಾಯದಂತೆ ಸಾಯಂಕಾಲ ೫ ಗಂಟೆಗೆ ಹಲಗೇರಿ ಗ್ರಾಮದ ಸದ್ಭಕ್ತರಾದ ಲಿಂ.ಶ್ರೀ ವೀರನಗೌಡರು ಪಾಟೀಲ ಮತ್ತು ಧರ್ಮಪತ್ನಿ ಶ್ರೀಮತಿ ಗಿರಿಜಮ್ಮ ಪಾಟೀಲರ ಮನೆಯಿಂದ ಶ್ರೀ ಗವಿಸಿದ್ಧೇಶ್ವರ ರಥದ ಮೇಲಿನ ಕಳಸವು ಸಹಸ್ರಾರು ಭಕ್ತರಾದಿಯಾಗಿ ಕೊಪ್ಪಳದ ಗವಿಮಠಕ್ಕೆ ಬರುತ್ತದೆ. ಈ ಮೆರವಣಿಗೆಯಲ್ಲಿ ಹಲಗೇರಿ ಗ್ರಾಮದ ಸದ್ಭಕ್ತರು ಹಾಗೂ ಗೌಡರ ಮನೆತನದವರು ಭಾಗವಹಿಸುತ್ತಾರೆ. ಮಾರ್ಗ ಮಧ್ಯದಲ್ಲಿ ಶ್ರೀ ಗವಿಸಿದ್ಧೇಶ್ವರ ಮೂರ್ತಿಯ ಮೆರವಣಿಗೆಯನ್ನು ಕೂಡಿಕೊಳ್ಳುವದು. ನಂತರ ರಾತ್ರಿ ಹೊತ್ತು ಗವಿಮಠ ತಲುಪವದು.ಇದೇ ದಿವಸ ಮುದ್ದಾಬಳ್ಳಿ- ಮಂಗಳಾಪುರ ಭಕ್ತರಿಂದ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿಯು ಮೆರವಣಿಗೆಯಿಂದ ಹೊರಟು ಮಾರ್ಗ ಮಧ್ಯದಲ್ಲಿ ಕಳಸೋತ್ಸವ ಹಾಗೂ ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಕೂಡಿಕೊಂಡು ಗವಿಮಠಕ್ಕೆ ಬರುತ್ತದೆ. ನಂತರ ಪೂಜೆ ಸಲ್ಲಿಸಿ ದರ್ಶನ ಪಡೆದು, ಪ್ರಸಾದ ಪಡೆದು ತಮ್ಮ ತಮ್ಮ ಗ್ರಾಮಕ್ಕೆ ತೆರಳುತ್ತಾರೆ.
ಉಚ್ಛಾಯಿ (ಲಘು ರಥೋತ್ಸವ): ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಜರುಗುವ ಮಹಾರಥೋತ್ಸವದ ಹಿಂದಿನ ದಿನ ಲಘು ರಥವನ್ನು ಎಳೆಯುವದು ಒಂದು ಸತ್ ಸಂಪ್ರದಾಯ. ಇದಕ್ಕೆ ‘ಉಚ್ಛಾಯಿ’ ಎಂತಲೂ ಕರೆಯುತ್ತಾರೆ.ಅಂದು ಸಾಯಂಕಾಲ ಲಘು ರಥೋತ್ಸವಕ್ಕೆ ಪೂಜೆ ಸಲ್ಲಿಸಿದ ನಂತರ ವಿಜೃಂಭಣೆಯಿಂದ ಭಕ್ತಿ-ಭಾವಗಳೊಂದಿಗೆ ಲಘು ರಥೋತ್ಸವ ಜರುಗುವುದು ವಾಡಿಕೆ.ಆಕರ್ಷಕ ನಂದಿಕೋಲು, ಪಂಜು, ಇಲಾಲುಗಳು, ವಾದ್ಯಗಳು, ಲಘು ರಥೋತ್ಸವಕ್ಕೆ ಮೆರಗು ತಂದು ಕೊಡುತ್ತವೆ. ಮುಂದಿನ ಮಹಾರಥೋತ್ಸವ ಸಾಂಗತ್ಯವಾಗಿ, ನಿರ್ವಿಘ್ನವಾಗಿ, ಧಾರ್ಮಿಕ ಸದಾಶಯಗಳಂತೆ ಯಶಸ್ವಿಯಾಗಲಿ ಎಂಬ ಉದ್ದೇಶದಿಂದ ಈ ಲಘು ರಥೊತ್ಸವ ನೆರವೇರಿಸಲಾಗುತ್ತದೆ.
ಬಳಗಾನೂರ ಶ್ರೀ ಶಿವಶಾಂತವೀರ ಶರಣರ ಧೀರ್ಘದಂಡ ನಮಸ್ಕಾರ: ಸಂಸ್ಥಾನ ಶ್ರೀಗವಿಮಠದಲ್ಲಿ ಜಾತ್ರೆಯ ಅಂಗವಾಗಿ ಮಹಾರಥೋತ್ಸವ ಜರುಗಿದ ಎರಡನೆಯ ದಿನ ಶ್ರೀ ಶಿವಶಾಂತವೀರ ಶರಣರ ದೀರ್ಘದಂಡ ನಮಸ್ಕಾರ ಕಾರ್ಯಕ್ರಮವೂ ಒಂದು ವಿಶಿಷ್ಟವಾದುದು. ಇದು ಕೂಡಾ ಶ್ರೀಗವಿಮಠದ ಪರಂಪರಾಗತ ಸಂಪ್ರದಾಯ. ಬಳಗಾನೂರಿನ ಪೂಜ್ಯ ಶ್ರೀ ಶಿವಶಾಂತವೀರ ಶರಣರು ಶ್ರೀಮಠದ ದ್ವಾರಬಾಗಿಲಿನಿಂದ ಹಿಡಿದು ಶ್ರೀ ಗವಿಮಠದ ಬೆಟ್ಟದ ಮೇಲಿನ ಶ್ರೀ ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಶಿವಯೋಗಿಗಳ ಗದ್ದುಗೆಯ ತನಕ ಹೂವಿನ ಹಾಸಿಗೆಯ ಮೇಲೆ ಭಕ್ತಿಯ ಭಾವಾವೇಷವಾಗಿ ದೀರ್ಘದಂಡ ನಮಸ್ಕಾರ ಹಾಕುತ್ತಾರೆ. ಶರಣರ ಹಿಂದೆ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತುಕೊಂಡ ಅಪಾರ ಭಕ್ತ ಸಮೂಹವೇ ದೀರ್ಘದಂಡ ನಮಸ್ಕಾರ ಹಾಕುತ್ತದೆ. ಚಿಕ್ಕೇನಕೊಪ್ಪದ ಲಿಂ. ಶ್ರೀ ಚನ್ನವೀರ ಶರಣರು ತಮ್ಮ ಗುರುಗಳಾದ ಶ್ರೀ ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಶಿವಯೋಗಿಗಳಿಂದ ಚಿನ್ಮಯಾನುಗ್ರಹ ದೀಕ್ಷೆ ಪಡೆದ ನಂತರ ಅಂದಿನಿಂದ ನಿರಂತರವಾಗಿ ಸುಮಾರು ಐದು ದಶಕಗಳಿಂದ ಶ್ರೀ ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಶಿವಯೋಗಿಗಳ ಗದ್ದುಗೆಯ ತನಕ ದೀರ್ಘದಂಡ ನಮಸ್ಕಾರ ಹಾಕುವುದರ ಮೂಲಕ ಗುರುಗಳಿಗೆ ಭಕ್ತಿಯ ನಮನಗಳನ್ನು ಅರ್ಪಿಸುತ್ತಿದ್ದರು. ಅವರ ಲಿಂಗೈಕ್ಯದ ನಂತರ ಇದೀಗ ಬಳಗಾನೂರಿನ ಶ್ರೀ ಶಿವಶಾಂತವೀರ ಶರಣರು ತಮ್ಮ ಗುರು ಪರಂಪರೆಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಹೊಂಬಳ, ಚಿಕ್ಕೇನಕೊಪ್ಪ, ಸೂಡಿ ಗ್ರಾಮದ ಸದ್ಭಕ್ತರ ಭಜನಾ ಮಂಡಳಿಯವರ ಭಕ್ತಿಗೀತೆಗಳು, ಜಯಘೋಷಗಳು, ಭಕ್ತಿಭಾವದ ಘೋಷಣೆಗಳು, ಭಕ್ತರೆಲ್ಲರ ಎದೆಯಲ್ಲಿ ‘ಗವಿಸಿದ್ಧ, ಗವಿಸಿದ್ಧ’ ಎಂಬ ವಾಣಿ ಪ್ರತಿಧ್ವನಿಸಿರುತ್ತಿದೆ.
ಶ್ರೀ ಸಿದ್ಧೇಶ್ವರ ಮೂರ್ತಿ ಶ್ರೀ ಗವಿಮಠಕ್ಕೆ ಬರುವ ಕಾರ್ಯಕ್ರಮ: ಗವಿಸಿದ್ದೇಶ್ವರ ಜಾತ್ರೆಯ ಮರು ದಿನವೆ ದಿನ ಶ್ರೀ ಸಿದ್ಧೇಶ್ವರ ಮೂರ್ತಿಯ ಮೆರವಣಿಗೆ ಪುರ ಪ್ರದಕ್ಷಿಣೆ ನೆರವೆರುವದು. ನಾಡಿನ ಎಲ್ಲಾ ಭಕ್ತಾದಿಗಳಿಗೂ ದರ್ಶನ ಆಶಿರ್ವಾದ ಕರುಣಿಸುವ ಹಿನ್ನಲೆಯಲ್ಲಿ ಶ್ರೀ ಸಿದ್ಧೇಶ್ವರ ಮೂರ್ತಿ ಮೆರವಣಿಗೆಯು ಅನುಚಾನವಾಗಿ ನಡೆದುಬಂದ ಕಾರ್ಯಕ್ರಮವಾಗಿದೆ. ದಶಮಿದಿಂಡಿನ ಮಂಟಪದಲ್ಲಿ ಮೂಹರ್ತಗೊಳಿಸಿದ ಸಿದ್ಧೇಶ್ವರ ಮೂರ್ತಿಗೆ ಹೂವಿನ ಹಾರ, ಬಾಳೆಹಣ್ಣು, ಉತ್ತತ್ತಿ ಅರ್ಪಿಸಿ ಭಕ್ತಿ-ಭಾವ ಮೆರೆಯುತ್ತಾರೆ. ಪಲ್ಲಕ್ಕಿ ಮಹೋತ್ಸವ, ಕಳಸೋತ್ಸವದ ಮೆರವಣಿಗೆಗಳಂತೆ ಈ ಮೆರವಣಿಗೆಯೂ ಸಾವಿರ ಸಾವಿರ ಭಕ್ತರ ನೇತೃತ್ವದಲ್ಲಿ ಜರುಗುತ್ತದೆ. ಜನ ಬಳಕೆಯಲ್ಲಿ ಇದನ್ನು ಸಿದ್ಧೇಶ್ವರ ಮೂರ್ತಿ ಮೆರವಣಿಗೆ ಎಂದೇ ಕರೆಯಲಾಗುತ್ತದೆ.
ಮಹಾರಥೋತ್ಸವ ಪ್ರತಿವರ್ಷವಿಶೇಷ ಸಾಧಕರಿದ ಚಾಲನೆ:
ಈಗಾಗಲೇ ಸಾಮಜಿಕ ಹೋರಾಟಗಾರ ಆಣ್ಣಾ ಹಜಾರೆ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ , ಯೋಗ ಗುರು ಬಾಬಾರಾಮದೇವ , ಡಾ. ಅನ್ನದಾನ ಸ್ವಾಮಿಗಳು, ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು, ಉಡುಪಿಯ ಪೇಜಾವರ ಶ್ರೀಗಳು ಸೇರಿದಂತೆ ಅನೇಕರು ಅಜ್ಜನ ಜಾತ್ರೆಗೆ ಚಾಲನೆ ನೀಡಿದ್ದಾರೆ. ಲಕ್ಷಾಂತರ ಭಕ್ತ ಸಮೂಹದ ಮಧ್ಯ ಜರಗುವ ಮಹಾರಥೋತ್ಸವವನ್ನು ಕಣ್ತುಂಬಿಕೊಳ್ಳಲು ಮಾಜಿ ಪ್ರಧಾನಿ ದೇವೇಗೌಡ್ರು, ಅನೇಕ ಗಣ್ರು ಆಗಮಿಸಿ ಶ್ರೀಮಠದ ಜಾತ್ರಾ ವೈಭವಕ್ಕೆ ಸಾಕ್ಷಿಯಾಗಿದ್ದಾರೆ. ಧಾರವಾಡ ಬಳಿಯ ಕಲಕೇರಿಯಲ್ಲಿ ಸಂಗೀತ ಶಾಲೆ ತೆರೆದು ೩೦೦ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಸಂಗೀತ ಶಿಕ್ಷಣ ಉಟ ವಸತಿ ಕಲ್ಪಿಸಿ ಸೇವೆ ಸಲ್ಲಿಸುತ್ತಿರುವ ಕೆನಡಾ ಮೂಲದ ಮ್ಯಾಥ್ಯು ಪೌರ್ಟಿಯರ್,ಆಥಿತಿಗಳೆಂದರೆಪ್ಯಾರಾಓಲಂಪಿಕ್ಸನಲ್ಲಿ ಭಾರತವನ್ನು ಪ್ರತಿನಿಧಿಸಿ ೩೮೯ ಬಂಗಾರ, ೨೭ ಬೆಳ್ಳಿ ಹಾಗೂ ೭ ಕಂಚಿನ ಪದಕಗಳನ್ನು ಜಯಿಸಿದ; ಪದ್ಮಶ್ರಿ-ಅರ್ಜುನ-ಏಕಲವ್ಯ ಪ್ರಶಸ್ತಿ ಪುರಸ್ಕ್ರತ ಅಂತರಾಷ್ಟ್ರೀಯ ಕ್ರೀಡಾಪಟು ಡಾ. ಮಾಲತಿ ಹೊಳ್ಳ, ಇಶ ಫೌಂಡೇಶನ್ ಸಂಸ್ಥಾಪಕ ಶ್ರೀ ಸದ್ಗುರು, ಪ್ರಸ್ತುತ ವರ್ಷ ಮೈಸೂರಿನ ಸುತ್ತೂರು ಕ್ಷೇತ್ರದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ವೀರಸಿಂಹಾಸನ ಜಗದ್ಗುರು ೧೦೦೮ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳುಗಳವರಿಂದಶ್ರೀಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಉದ್ಘಾಟನೆಯಾಗುತ್ತಿರುವದು ಪ್ರತಿವರ್ಷ ಒಂದೊಂದು ವಿಶೇಷತೆ.ಪಡೆದು ಜಾತ್ರೆ ವಿಶ್ವವ್ಯಾಪಿಯಾಗುತ್ತಿದೆ.
ಸಾಧು ಸಂತರ ಸಮಾಗಮ, ಜ್ಞಾನ, ಕಲಾ ಶಕ್ತಿಗಳ ಜೀವಂತಿಕೆ: ಗವಿಮಠದ ಕೈಲಾಸ ಮಂಟಪದಲ್ಲಿ ಜರುಗುವ ಕಾರ್ಯಕ್ರಮಗಳು ಅಂತರಾಷ್ಟ್ರೀಯ, ರಾಷ್ಟ್ರೀಯ ವಿವಿಧ ಕಲಾವಿಧರ ಭಾವ ಭಕ್ತಿಯ ಮಹಾಸಂಗಮ, ಸರ್ವಧರ್ಮಗಳ ಸಮ್ಮಿಲನ, ಭಾವೈಕ್ಯತೆಯನ್ನು ಸಾರುವ ಶ್ರೀ ಗವಿಸಿದ್ಧೇಶ್ವರ ಮಠದ ಹಿರಿಮೆ ಗರಿಮೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಭಕ್ತರನ್ನು ಕೈಬಿಸಿ ಕರೆಯುವ ಜಾತ್ರೆಯ ಕಲಾ ವಿಸ್ಮಯ ಪ್ರದರ್ಶನ, ನಾದ ತರಂಗ ,ತತ್ವ ಸಂಪದ, ಸಂಗೀತ ಕಾರ್ಯಕ್ರಮ, ಕೊಪ್ಪಳ ಜಿಲ್ಲಾ ಕರಾಟೆ ಶಿಕ್ಷಕರ ಸಂಘಹಾಗೂ ವಾಲಿಬಾಲ್ ಅಸೋಶಿಯೇಷ ಸಹಯೊಗದೊಂದಿಗೆ ಸಾಹಸ, ದಾಲಪಟ ಹಾಗೂ ಕರಾಟೆ ಪ್ರದರ್ಶನ. ಆಹ್ವಾನಿತ ಮಹಿಳೆಯರ ವಾಲಿಬಾಲ್ ಪಂದ್ಯಾವಳಿಗಳು ಜರುಗುವ ಶ್ರೀ ಗವಿಸಿದ್ಧನ ಜಾತ್ರೆ ಸಾಧು ಸಂತರ ಸಮಾಗಮವಾಗಿದೆ. ಸಾಂಸ್ಕೃತಿಕ ಪರಂಪರೆ ಜ್ಞಾನದ ಬೆಳಕಿನ ಮಾಹಾತಾಣವಾಗಿದೆ.
ಜಾತ್ರಾ ನಿಮಿತ್ಯ ವಿಶೇಷ ಮಹಾದಾಸೋಹ ಮಹಾಮನೆ: ನಿತ್ಯವು ಐದು ಸಾವಿರ ಮಕ್ಕಳಿಗೆ ಉಚಿತ ಪ್ರಸಾದ ನಿಲಯ ಆರಂಭಿಸಿ ದಾಸೋಹ ಪರಂಪರೆಯನ್ನು ಹೆಚ್ಚಿಸುತ್ತಿದೆ. ವರ್ಷದಿಂದ ವರ್ಷಕ್ಕೆ ವಿಶೇಷ ಮೆರಗು ಪಡೆಯತ್ತಿರಿವದರಿಂದ ಭಕ್ತರ ಸಂಖ್ಯೆಯು ಹೆಚ್ಚುತ್ತಲಿದೆ ಲಕ್ಷೆಪಕ್ಷ ಭಕ್ತರಿಗೆ ಪ್ರಸಾದ ಕಲ್ಪಿಸಲು ಶ್ರೀಮಠದ ಆವರಣದ ಪಕ್ಕದಲ್ಲಿರುವ ಹರ್ಬಲ್ ಗಾರ್ಡನ್‌ನಲ್ಲಿ ವರ್ಷವು ಜಾತ್ರೆಯಲ್ಲಿ ವಿಶೇಷ ಮಹಾದಾಸೋಹ ಮಹಾಮನೆಲ್ಲಿ ಆಗಮಿಸಿದ ಭಕ್ತರಿಗೆ ಅವರಾತ್ರಿ ಅಮಾವಾಸ್ಯೆಯವರೆಗೆ ನಿತ್ಯ ಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ.ವಯೋವೃದ್ಧರಿಗೆ, ಗರ್ಭಿಣಿಯರಿಗೆ, ವಿಕಲಚೇತನರಿಗೆ ಪ್ರತ್ಯೇಕ ದಾರಿಗೆ ಅವಕಾಶವಿರುತ್ತದೆ.
ಶಿಸ್ತು, ಸ್ವಚ್ಚತೆ, ಸಂರಕ್ಷಣೆ :ಮಹಾರಥೋತ್ಸವದ ಅಂಗವಾಗಿ ಶ್ರೀ ಗವಿಮಠದ ಆವರಣದ ಮುಂಭಾಗದಲ್ಲಿನ ಸುಮಾರು ೧೨ ಎಕರೆ ವಿಸ್ತೀರ್ಣದ ಮೈದಾನದಲ್ಲಿ ೯೦೦ ರಿಂದ ೧೦೦೦ ಅಂಗಡಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ವೈವಿಧ್ಯಮಯವಾದ ಅಂಗಡಿ-ಮುಂಗಟ್ಟುಗಳು ಸ್ಥಾಪಿತವಾಗಲಿವೆ. ಈ ಬೃಹತ್ ಮಹಾದ್ವಾರಗಳ ಮುಖೇನ ಜನರಿಗೆ ರಹದಾರಿ ಕಲ್ಪಿಸಿದೆ. ಈ ವಿಶಾಲ ಆವರಣದಲ್ಲಿ ಪ್ರತಿವರ್ಷ ಜಾತ್ರೆ ಆವರಣದ ಮಳಿಗೆಗಳಲ್ಲಿ ಜನಸಂದಣಿ ಆಗದಂತೆ ಸಮತಟ್ಟಾದ ರಸ್ತೆಗಳನ್ನು ನಿರ್ಮಿಸಲಾಗಿದೆ.ಪ್ರತಿ ಸಾಲಿನಲ್ಲಿರುವ ಅಂಗಡಿಗಳಿಗೆ ಕ್ರಮ ಬದ್ದವಾದ ಕ್ರಮ ಸಂಖ್ಯೆಯನ್ನು ಸಹ ಕೊಡಲಾಗಿದೆ.ಅಲ್ಲದೇ ಜಾತ್ರಾ ಮಹೋತ್ಸವದ ಅಂಗಡಿಗಳ ಆವರಣಗಳಲ್ಲಿ ರಥೋತ್ಸವದಿಂದ ಹಿಡಿದು ಅಮವಾಸ್ಯೆಯವರೆಗೆ ಈ ಜಾತ್ರಾ ಮಳಿಗೆಗಳ ಸ್ಥಳದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತದೆ.
ಇಂತಹ ಪವಿತ್ರವಾಗಿರುವ ಕೊಪ್ಪಳ ಗವಿಮಠದ ಐತಿಹಾಸಿಕ ಪರಂಪರೆ ಜನಸೇವಾ ಕಾರ್ಯಗಳ ಪರಿಚಯ ಮಾಡಿಕೊಂಡುನಾವು ಪಾಲ್ಗೊಂಡು ಭಕ್ತರ ಜನಸ್ತೋಮದಲ್ಲಿನ ನಾವು ಒಂದಾಗೋಣ! ಶ್ರೀ ಗವಿಸಿದ್ಧೇಶ್ವನಿಗೆ ಜಯವೆನ್ನೋಣ, ಜಾತ್ರೆಯ ಭಕ್ತಿ ಭಾವದಲ್ಲಿ ತನ್ಮಯರಾಗೋಣ! ಬನ್ನಿ!
ಡಾ. ನಾಗರಾಜ ದಂಡೋತಿ
ಸಹಾಯಕ ಪ್ರಾಧ್ಯಾಪಕ
ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯ, ಕೊಪ್ಪಳ
ಮೋ: ೯೭೪೦೪೭೯೧೨೭
Comments are closed.