ಭಾಗ್ಯನಗರದಿಂದ ಗವಿಮಠಕ್ಕೆ ಪಾದಯಾತ್ರೆ

Get real time updates directly on you device, subscribe now.


ಕೊಪ್ಪಳ  :  ಭಾಗ್ಯನಗರದ ಪಟ್ಟಣ ಪಂಚಾಯತನಿಂದ ಮುಂಜಾನೆ ೦೬ : ೩೦ ಕ್ಕೆ ಗಾಂಧೀ ಭಜನ್ ಹಾಡುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಜನತೆಗೆ ಸ್ವಾವಲಂಬನೆ, ಸಮೃದ್ಧ, ಸಂತೋ?ದ ಬದುಕು ಕಟ್ಟಿಕೊಳ್ಳಲು ಗವಿಶ್ರೀಗಳು ಈ ಬಾರಿಯ ಜಾತ್ರೆಯ ನಿಮಿತ್ಯ ಕಾಯಕ ದೇವೊಭವ ಜಾಗೃತ ನಡಿಗೆ ಹಮ್ಮಿಕೊಂಡಿದ್ದರ ಹಿನ್ನೆಲೆ , ಗಾಂಧೀ ಬಳಗ ಕೊಪ್ಪಳ ಇವರು ಭಾಗ್ಯನಗರ ಪಟ್ಟಣ ಪಂಚಾಯತನಿಂದ ಪಾದಯಾತ್ರೆ ಮಾಡಿದರು.
ಪಾದಯಾತ್ರೆಗೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುರೇಶ ಬಬಲಾದಿ, ಪತ್ರಕರ್ತ ಪ್ರಮೋದ, ಸಾಹಿತಿ ಸಾವಿತ್ರಿ ಮುಜುಂದಾರ, ಕಂದಾಯ ಅಧಿಕಾರಿ ಅರುಣ ಪಟ್ಟಣ ಪಂಚಾಯತ ಸದಸ್ಯರಾದ ಪರಶುರಾಮ ನಾಯಕ, ಜಗದೀಶ ಮಾಲಗಿತ್ತಿ, ಬಸವರಾಜ ಸವಡಿ, ಪ್ರಕಾಶಗೌಡ, ರಾಮಣ್ಣ ಶ್ಯಾವಿ, ಅಮರದೀಪ ಪಿ.ಎಸ್. ಮಹಾಂತೇಶ ಚಳ್ಳಮರದ, ಹನುಮಂತಪ್ಪ ಕುರಿ, ಮಂಜುನಾಥ ಪೂಜಾರ,ಫಕೀರಪ್ಪ ಗುಳದಳ್ಳಿ, ಸುರೇಶ ಕಂಬಳಿ, ದುರಗಪ್ಪ, ಶರಣಪ್ಪ ರೆಡ್ಡೇರ್, ಪ್ರಕಾಶ ತಗಡಿನಮನಿ,ವಿರೇಶ ಮೇಟಿ, ಹಾಗೂ ಗಾಂಧೀ ಭಜನ್ ಹಾಡಿದ ಸಂಗೀತ ಶಿಕ್ಷಕ ಶಂಕರ ಬಿನ್ನಾಳ, ಗಾಯಕ ಯೋಗಾನರಸಿಂಹ ಪಿ.ಕೆ ಗಾಂಧೀ ಭಜನ್ ಅನ್ನು ಹಾಡಿದರು.
ಬಿಳಿ ಬಣ್ಣದ ಉಡುಪಿನೊಂದಿಗೆ ಗಾಂಧೀ ಟೊಪ್ಪಿಗೆಯನ್ನು ಧರಿಸಿದ ಸದಸ್ಯರು, ಪಾದಯಾತ್ರೆಯ ಉದ್ದಕ್ಕೂ ಮಹತ್ಮಾ ಗಾಂಧೀಜಿ ಕೀ ಜೈ, ಕಾಯಕವೇ ಕೈಲಾಸ, ಕಾಯಕ ದೇವೊಭವ, ಗವಿಸಿದ್ಧೇಶ್ವರ ಸ್ವಾಮೀಜಿ ಕೀ ಜೈ ಎಂದು ಘೋ?ಣೆ ಕೂಗುತ್ತ, ಭಜನ್ ಹಾಡುತ್ತಾ ಶಿಸ್ತಿನಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಪಾದಯಾತ್ರೆ ಭಾಗ್ಯನಗರ ಪಟ್ಟಣ ಪಂಚಾಯತನಿಂದ ಪ್ರಾರಂಭವಾಗಿ ಪಬ್ಲಿಕ್ ಗ್ರೌಂಡಿಗೆ ತೆರಳಿ, ಅಲ್ಲಿಂದ ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಬ ಮಾರ್ಗವಾಗಿ ಶ್ರೀ ಗವಿಸಿದ್ಧೇಶ್ವರ ಮಠ ತಲುಪಿತು.

ಪಾದಯಾತ್ರೆಯಲ್ಲಿ ಶಿಕ್ಷಕರ ಕಲಾಸಂಘ (ರಿ) ಕೊಪ್ಪಳ, ಅಶೋಕ ಸರ್ಕಲ್ ನಾಟಕ ತಂಡ , ಗಾಂಧೀ ವಿಚಾರ ವೇದಿಕೆ, ಕಲರವ ಶಿಕ್ಷಕರ ಬಳಗ, ಪತಂಜಲಿ ಯೋಗ ಸಮಿತಿ, ಸದಸ್ಯರು ಪಾಲ್ಗೊಂಡಿದ್ದರು. ಪಾದಯಾತ್ರೆಗೆ ಮುಂಚೆ ನಡೆದ ಕಾರ್ಯಕ್ರಮದಲ್ಲಿ ನಾಗರಾಜನಾಯಕ ಡೊಳ್ಳಿನ ಸ್ವಾಗತಿಸಿದರು, ಪ್ರಾಣೇಶ ಪೂಜಾರ ನಿರೂಪಿಸಿದರು.

Get real time updates directly on you device, subscribe now.

Comments are closed.

error: Content is protected !!