ಹುಲಿಗಿ-ವಾರದ ಸಂತೆಯಲ್ಲಿ ಕಳ್ಳರ ಕೈಚಳಕ ಬರೋಬ್ಬರಿ 8 ಮೊಬೈಲ್ ಎಗರಿಸಿದ ಚೋರರು
ಕೊಪ್ಪಳ :
ತಾಲೂಕಿನ ಹುಲಿಗಿ ಗ್ರಾಮದಲ್ಲಿ ಮಂಗಳವಾರ ನಡೆದ ವಾರದ ಸಂತೆಯಲ್ಲಿ ಕಳ್ಳರು ಕೈಚಳಕ ತೋರಿದ ಸಂಗತಿ ಬೆಳಕಿಗೆ ಬಂದಿದೆ.
ಗೃಹಬಳಕೆದಿನಸಿ, ತರಕಾರಿಗಳನ್ನು ಖರೀದಿಸಲು ಬಂದಿದ್ದ ಸುಮಾರು ೮ ಮಂದಿ ಗ್ರಾಹಕರ ಮೊಬೈಲ್ಗಳನ್ನು ಕಳ್ಳರು ಎಗರಿಸಿದ್ದಾರೆನ್ನಲಾಗಿದೆ. ಇದು ಪ್ರತಿ ವಾರದ ಸಂತೆಯಲ್ಲಿ ಮೊಬೈಲ್ ಸೇರಿದಂತೆ ಬೆಲೆಬಾಳುವ ವಸ್ತುಗಳ ಕಳ್ಳತನ ನಡೆಯುತ್ತಲಿದೆ.
ಪ್ರತಿ ಮಂಗಳವಾರ ನಡೆಯುವ ವಾರದ ಸಂತೆಗೆ ಹಲವು ಗ್ರಾಮಗಳಿಂದ ಜನರು ಆಗಮಿಸಿ ಒಂದು ವಾರಕ್ಕೆ ಸಾಕಾಗುವಷ್ಟು ತರಕಾರಿ ಮತ್ತು ಆಹಾರ ಸಾಮಾಗ್ರಿಗಳನ್ನು ಖರೀದಿಸುವಲ್ಲಿ ತಲ್ಲಿನರಿದ್ದಾಗ, ಜನದಟ್ಟಣೆಯಲ್ಲಿರುವಾಗ ಕಿಸೆಯಿಂದ ಬೆಲೆ ಬಾಳುವ ಮೊಬೈಲ್ಗಳನ್ನು ನೋಡಿ ಕಳ್ಳತನ ಮಾಡುತ್ತಿದ್ದಾರೆ ಎಂದು ಕೇಳಿಬರುತ್ತಿದೆ ಇದರಿಂದ ಸಂತೆಗೆ ಬರುವ ಜನರು ಆತಂಕದಲ್ಲಿದ್ದಾರೆ.
ಮೊಬೈಲ್ಗಳು, ಒಡವೆಗಳು, ಬೆಲೆ ಬಾಳುವ ವಸ್ತುಗಳು ಕಳ್ಳತನ ಆಗುವುದು ಹುಲಿಗಿ ಗ್ರಾಮದಲ್ಲಿ ಸಾಮಾನ್ಯವಾಗಿದೆ.
Comments are closed.