ಶ್ರೀ ಗವಿಮಠದಲ್ಲಿ ತೆಪ್ಪೋತ್ಸವ ಹಾಗೂ ಸಂಗೀತಕಾರ್ಯಕ್ರಮ
Koppal ಶ್ರೀ ಗವಿಮಠದಲ್ಲಿ ಸಾಯಂಕಾಲ ತೆಪ್ಪೋತ್ಸವ ಹಾಗೂ ಸಂಗೀತ ಕಾರ್ಯಕ್ರಮ ಶ್ರೀಮಠದ ಕೆರೆಯ ಆವರಣದಲ್ಲಿ ಜರುಗಿತು.ಜಾತ್ರಾ ಮಹೋತ್ಸವದಲ್ಲಿಅತ್ಯಂತಕಣ್ಮನ ಸೆಳೆಯುವ ಉತ್ಸವತೆಪ್ಪೋತ್ಸವ.ಮಹಾಮಹಿಮ ಕರ್ತೃ ಶ್ರೀ ಗವಿಸಿದ್ಧೇಶನಲ್ಲಿ ಸಂಕಲ್ಪ ಮಾಡಿಕೊಂಡರೆಇಷ್ಟಾರ್ಥ ಸಿದ್ಧಿಸುತ್ತದೆಂಬ ನಂಬಿಕೆ ಭಕ್ತಾದಿಗಳಲ್ಲಿದೆ.
ನಿಸರ್ಗದಕಣ್ಮನ ಸೆಳೆಯುವ ಕೆರೆಯಲ್ಲಿ ಸುಂದರ ಮಧುವಣಗಿತ್ತಿಯಂತೆ ಶೃಂಗಾರಗೊಂಡತೆಪ್ಪವುದೈವದತೊಟ್ಟಿಲಿನಂತೆತೇಲುತ್ತ ಶ್ರೀ ಗವಿಸಿದ್ಧೇಶ್ವರನ ಭವ್ಯ ಮೂರ್ತಿಯನ್ನುತನ್ನ ಮಡಿಲಲ್ಲಿ ಆಸೀನಗೊಳಿಸಿಕೊಂಡು ತೂಗುತ್ತಾ, ಭಕ್ತರ ಹೃನ್ಮನಗಳನ್ನು ತಣಿಸಿತು.ಸುಗಂಧ ಭರಿತ ಪು?ಗಳಿಂದ ಅಲಂಕಾರಗೊಂಡತೆಪ್ಪವು ನೋಡಲು ಸುಂದರ ಮನೋಹರ. ಶ್ರೀ ಗವಿಸಿದ್ಧೇಶ್ವರರನ್ನು ಹೊತ್ತು ಪು?ವೇತೇಲಾಡುವಂತೆ ಸಾಗಿ ಕೆರೆಯ ಸುತ್ತಲೂ ಪ್ರದಕ್ಷಿಣೆ ಹಾಕುವಾಗ ಭಕ್ತಜನಸ್ತೋಮದಿಂದ ನಾದಮಯವಾಗಿ ಹೊರಹೊಮ್ಮುವ ಶ್ರೀ ಗವಿಸಿದ್ಧೇಶ್ವರ ಗಂಗಾರತಿಗೀತೆಕರ್ಣಸ್ಪರ್ಶವಾದಾಗ ಸಾಕ್ಷಾತ್ ಶ್ರೀ ಗವಿಸಿದ್ಧೇಶ್ವರ ಎಲ್ಲ ಭಕ್ತರನ್ನು ಹರಸುತ್ತಿದ್ದಾರೆ ಎಂಬ ಭಾವ ಭಕ್ತರಲ್ಲಿ ಮೂಡಿಪುಳಕಗೊಂಡು ಪುನೀತರಾದರು.ಆರಂಭದಲ್ಲಿಸಂಗೀತಕಲಾವಿದರಾದ ಶ್ರೀ ಅಯ್ಯಪ್ಪಯ್ಯ ಹಲಗಲಿಮಠ, ಧಾರವಾಡ ಹಾಗೂ ಸಂಗಡಿಗರಿಂದ ಸಂಗೀತಕಾರ್ಯಕ್ರಮಜರುಗಿತು. ಪುಟ್ಟರಾಜ ಗವಾಯಿಗಳು ವಿರಚಿತ ಮಹಾದೇವಿ ಪುರಾಣಕೃತಿಯನ್ನುವಿರಕ್ತಮಠ ಬಿಜಕಲ್‌ನ ಪರಮಪೂಜ್ಯ ಶ್ರೀ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳವರು ಬಿಡುಗಡೆಗೊಳಿಸಿದರು.ಸಂಕಲ್ಪದೊಂದಿಗೆ ಮುನಿರಾಬಾದ್‌ಡಯಟ್‌ನ ನಿವೃತ್ತ ಪ್ರಾಧ್ಯಾಪಕರಾದ ಶ್ರೀ ಪಂಚಾಕ್ಷರಯ್ಯ ರೇವಣಸಿದ್ದಯ್ಯ ನೂರಂದಯ್ಯನಮಠಅವರುತೆಪ್ಪೋತ್ಸವಕ್ಕೆ ಚಾಲನೆ ನೀಡಿದರು.
ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಜರುಗಿದಗಂಗಾರತಿ
ವಾರಾಣಸಿ, ಹರಿದ್ವಾರ, ರಿಷಿಕೇಶ, ಪ್ರಯಾಗ್‌ಇವು ಆಧ್ಯಾತ್ಮಿಕ ನಡೆಯುವ ಗಂಗಾ ಆರತಿಯುಇಡೀ ಭಾರತದಲ್ಲಿಯೇ ಪ್ರಸಿದ್ಧ.ಸಂಸ್ಥಾನ ಶ್ರೀ ಗವಿಮಠವು ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ದಿನಾಂಕ ೨೪.೦೧.೨೦೨೪ರಂದು ಶ್ರೀಮಠದ ಕೆರೆಯದಡದಲ್ಲಿ ನಡೆಯುವತೆಪ್ಪೋತ್ಸವಕಾರ್ಯಕ್ರಮದಲ್ಲಿಜರುಗುವ ಗಂಗಾ ಆರತಿಯು ಬಹಳ ವಿಜೃಂಬಣೆಯಿಂದ ನೆರವೇರಿಸಲಾಯಿತು.ತೆಪ್ಪೋತ್ಸವದಲ್ಲಿ ವಿರಾಜಮಾನರಾಗಿಅಲಂಕೃತಗೊಂಡ ಶ್ರೀ ಗವಿಸಿದ್ಧೇಶ್ವರರ ಉತ್ಸವ ಮೂರ್ತಿಯನ್ನು ಭಕ್ತಸಮೂಹದರ್ಶನಗೈಯುತ್ತಿರುವಾಗಶ್ರೀ ಮಠದ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಶ್ರೀ ಗವಿಸಿದ್ಧಗೆ ನಮೋ ನಮೋ, ಶ್ರೀ ಗವಿಮಠಾಧೀಶಗೆ ನಮೋ ನಮೋ ಮಂಗಳ ಗೀತೆಯೊಂದಿಗೆಅರ್ಚಕರಿಂದ ಶ್ರೀ ಗವಿಸಿದ್ದೇಶ್ವರನಿಗೆ ಗಂಗಾ ಆರತಿಯಿಂದಬೆಳಗಲಾಯಿತು.ನೆಮ್ಮದಿ ಮತ್ತು ಮನಸ್ಸಿಗೆ ಶಾಂತಿದೊರೆಯಲುಭಕ್ತ ಸಮೂಹ ಗಂಗಾಆರತಿ ವೀಕ್ಷಿಸಿ ಪುನೀತರಾದರು.
Comments are closed.