ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ: ಜಾಗೃತಿ ಫಲಕ ಅಳವಡಿಕೆ

Get real time updates directly on you device, subscribe now.

: ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ-2024ರ ಪ್ರಯುಕ್ತ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಸಿದ್ದಪಡಿಸಲಾದ `ಮಗಳನ್ನು ಉಳಿಸಿ, ಮಗಳನ್ನು ಓದಿಸಿ, ಮಾನವಕುಲಕ್ಕೆ ಮಾದರಿ ಈ ಹೆಣ್ಣುಮಕ್ಕಳು’ ಎಂಬ ಸಂದೇಶಗಳೊಂದಿಗೆ ಮಹಿಳಾ ಸಾಧಕರ ಭಾವಚಿತ್ರವಿರುವ ಜಾಗೃತಿ ಫಲಕವನ್ನು ಅಳವಡಿಸಲಾಗಿದೆ.
ಕೊಪ್ಪಳ ನಗರದ ಗದಗ ರಸ್ತೆಯ ಲೇಬರ್ ಸರ್ಕಲ್ ಬಳಿಯ ರಸ್ತೆಯ ಮಧ್ಯದಲ್ಲಿ ಅಳವಡಿಸಲಾದ ಈ ಫಲಕದಲ್ಲಿ ಕನ್ನಡಾಂಬೆ ಭುವನೇಶ್ವರಿ ದೇವಿ, ಮೊದಲ ಮಹಿಳಾ ವಚನಗಾರ್ತಿ ಅಕ್ಕಮಹಾದೇವಿ, ರಾಣಿ ಅಹಲ್ಯಾದೇವಿ, ಅಕ್ಷರದವ್ವ ಸಾವಿತ್ರಿಬಾಯಿ ಪುಲೆ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಮದರ ತೆರೇಸಾ, ಸಾಲುಮರದ ತಿಮ್ಮಕ್ಕ, ಕಿತ್ತೂರು ರಾಣಿ ಚೆನ್ನಮ್ಮ, ಕಲ್ಪನಾ ಚಾವ್ಲಾ, ಸೀತಾ ಮಾತೆ, ಶಬರಿ, ಮೊದಲ ಮಹಿಳಾ ರಾಷ್ಟ್ರ ಪತಿಗಳಾದ ಪ್ರತಿಭಾ ಪಾಟೀಲ್, ಉಕ್ಕಿನ ಮಹಿಳೆ ಇಂದಿರಾಗಾAಧಿ ಸೇರಿದಂತೆ ಅನೇಕ ಮಹಿಳಾ ಸಾಧಕರ ಭಾವಚಿತ್ರ ಮತ್ತು ಅವರ ಹೆಸರಿರುವ ಹಾಗೂ `ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸಿ, ಹೆಣ್ಣುಮಕ್ಕಳನ್ನು ರಕ್ಷಿಸಿ ಮನುಕುಲ ಉಳಿಸಿ, ಹೆಣ್ಣುಮಕ್ಕಳನ್ನು ಆಲಿಸಿ ಗೌರವಿಸಿ, ಹೆಣ್ಣುಮಗು ಸಂಸಾರದ ಅತ್ಯಮೂಲ್ಯ ಸಂಪನ್ಮೂಲ’ ಎಂಬ ಸಂದೇಶದೊಂದಿಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಈ ಬಾರಿಯ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯನ್ನು ವಿಶೇಷ ಹಾಗೂ ಮಾದರಿಯ ರೀತಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

Get real time updates directly on you device, subscribe now.

Comments are closed.

error: Content is protected !!
%d bloggers like this: