ಎಲ್‌ಐಸಿ ಪ್ರತಿನಿಧಿಗಳ ಕಲ್ಯಾಣ ನಿಧಿ ಸ್ಥಾಪನೆ ಸಂಸದರಿಗೆ ಮನವಿ

Get real time updates directly on you device, subscribe now.

ಗಂಗಾವತಿ: ಭಾರತದ ಆರ್ಥಿಕ ಸದೃಢತೆಗಾಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಕಲ್ಯಾಣ ನಿಧಿಯನ್ನು ಕೇಂದ್ರ ಸರಕಾರ ಸ್ಥಾಪಿಸಿ ಪ್ರತಿನಿಧಿಗಳಿಗೆ ಸೇವಾ ಭದ್ರತೆ ಕಲ್ಪಿಸುವ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಕಾನೂನು ಮಾಡುವಂತೆ ಒತ್ತಾಯಿಸಿ ದೇಶದಾದ್ಯಂತ ಭಾರತೀಯ ಜೀವ ವಿಮಾ ನಿಗದ ಪ್ರತಿನಿಧಿಗಳ ಸಂಘ(ಲಿಖೈ) ಸ್ಥಳೀಯ ಸಂಸದದರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ. ಕೊಪ್ಪಳದ ಸಂಸದ ಕರಡಿ ಸಂಗಣ್ಣನವರಿಗೆ ಸಂಘಟನೆ ಮುಖಂಡರು ಪ್ರತಿನಿಧಿಗಳ ಕಲ್ಯಾಣ ನಿಧಿ ಸ್ಥಾಪನೆಗೆ ಅಗತ್ಯ ಕ್ರಮ ವಹಿಸುವಂಂತೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕರಡಿ ಸಂಗಣ್ಣ ಮಾತನಾಡಿ, ವಿಶ್ವವೇ ಆರ್ಥಿಕ ಮುಗ್ಗಟ್ಟಿನಿಂದ ತೊಂದರೆಯಲ್ಲಿದ್ದಾಗ ಎಲ್‌ಐಸಿ ಸದೃಢ ಆರ್ಥಿಕ ಶಕ್ತಿಯ ಪರಿಣಾಮ ದೇಶದ ಆರ್ಥಿಕ ಸುಸ್ಥಿರವಾಗಿತ್ತು. ಇಲ್ಲಿ ಕೆಲಸ ಮಾಡುವ ಪ್ರತಿನಿಧಿಗಳು ಶ್ರಮಜೀವಿಗಳಾಗಿದ್ದು ಇವರು ಕುಟುಂಬ ನಿರ್ವಹಣೆ ಹಾಗೂ ಪಾಲಿಸಿದಾರರ ಕ್ಷೇಮಕ್ಕಾಗಿ ಹಗಲಿರುಳು ಕೆಲಸ ಮಾಡುವುದರಿಂದ ಎಲ್‌ಐಸಿಯಲ್ಲಿ ಸಾರ್ವಜನಿಕರ ಹಣ ಸಂಗ್ರಹವಾಗುತ್ತದೆ. ಪ್ರತಿನಿಧಿಗಳ ಕಲ್ಯಾಣಕಾರ್ಯಕ್ಕೆ ಕೇಂದ್ರ ಸರಕಾರ ಸೂಕ್ತ ನಿಯಮ ರೂಪಿಸುವಂತೆ ಹಣಕಾಸು ಸಚಿವರನ್ನು ಮನವಿ ಮಾಡಲಾಗುತ್ತದೆ. ಸಂಸತ್ತಿನಲ್ಲಿ ಬಿಲ್ ಬಂದರೆ ಪ್ರತಿನಿಧಿಗಳ ಪರವಾಗಿ ಮಾತನಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಜೀವ ವಿಮಾ ನಿಗದ ಪ್ರತಿನಿಧಿಗಳ ಸಂಘ(ಲಿಖೈ) ಸಂಘಟನೆಯ ಪದಾಧಿಕಾರಿಗಳಾದ ನಿರುಪಾಧಿ ಬೆಣಕಲ್, ಕೆ.ನಿಂಗಜ್ಜ, ಹುಸೇನಬಾಷಾ, ಬಸವರಾಜ,ಗೋಟೂರು, ಹುಸೇನಬಾಷಾ ಜೆ ಸೇರಿ ಅನೇಕರಿದ್ದರು.

Get real time updates directly on you device, subscribe now.

Comments are closed.

error: Content is protected !!