೧೦೧ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ

Get real time updates directly on you device, subscribe now.

:

 

ಕೊಪ್ಪಳ : ಅಯೋಧ್ಯೆಯ ಶ್ರೀರಾಮಮೂರ್ತಿಯ ಪ್ರಾಣ ಪ್ರತಿಷ್ಟಾಪನೆಯ ನಿಮಿತ್ತ ಸೋಮವಾರದಂದು ನಗರದ ಬಿ.ಟಿ.ಪಾಟೀಲ್‌ನಗರದ (ಮಹಾಂತಯ್ಯನಮಠ ಶಾಲೆ ಹತ್ತಿರ) ಶ್ರೀಮತಿ ಪೂರ್ಣಿಮ ದೊಡ್ಡನಗೌಡ ಓಜನಹಳ್ಳಿಯವರ ನಿವಾಸದಲ್ಲಿ ಕೊಪ್ಪಳದ ಶ್ರೀ ಗವಿಶ್ರೀಗಳ ಸಾನಿಧ್ಯದಲ್ಲಿ ಕೊಪ್ಪಳದ ಆರಾಧ್ಯ ಧೈವ ಶ್ರೀ ಗವಿಸಿದ್ದೇಶ್ವರ ಧ್ಯಾನ ಭಕ್ತಿ ಗೀತೆ ಹಾಗೂ ೧೦೧ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಯಶಸ್ವೀಯಾಗಿ ಜರುಗಿತು.

ಗವಿಮಠದ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಉದ್ಘಾಟಿಸಿ ಶುಭ ಕೋರಿ ಆರ್ಶೀವಾದಿಸಿದರು.

ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ ಇಂದು ಅಯೋಧ್ಯೆಯ ಶ್ರೀರಾಮಮೂರ್ತಿಯ ಪ್ರಾಣ ಪ್ರತಿಷ್ಟಾಪನೆಯ ನಿಮಿತ್ತ ಶುಭದಿನದಂದು ಶ್ರೀಮತಿ ಪೂರ್ಣಿಮ ದೊಡ್ಡನಗೌಡ ಓಜನಹಳ್ಳಿಯವರು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತಸ ಎನ್ನಿಸುತ್ತದೆ ಎಂದರು. ಬಿಜೆಪಿ ಮುಖಂಡರಾದ ಮಂಜುಳಾ ಅಮರೇಶ ಕರಡಿ ಮಾತನಾಡಿ ಅಯೋಧ್ಯೆಯ ಶ್ರೀರಾಮಮೂರ್ತಿಯ ಪ್ರಾಣ ಪ್ರತಿಷ್ಟಾಪನೆ ಇಂದು ನೇರವೇರುತ್ತಿದ್ದು ಸಂತಸ ವಿಷಯ ಎಲ್ಲಾರಿಗೂ ಶುಭವಾಗಲಿ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ದಿಶಾ ಕಮೀಟಿ ಸದಸ್ಯರಾದ ಶಕುಂತಲಾ ವಿ. ಪಾಟೀಲ್, ಕೊಪ್ಪಳ ಮಾಜಿ ಶಾಸಕರಾದ ದಿ| ಎಂ.ಎಸ್. ಪಾಟೀಲರ ಧರ್ಮಪತ್ನಿ ಶತಾಯುಷಿ ಕಮಲಮ್ಮ ಪಾಟೀಲ, ಮುಖಂಡರಾದ ದೊಡ್ಡನಗೌಡ ಓಜನಹಳ್ಳಿ, ವೀರಣ್ಣ ಹುಬ್ಬಳ್ಳಿ, ಮಂಜುನಾಥ ಅಧಿಕಾರಿ, ರೇಣುಕಾ ಹೂಗಾರ ಪಾಲ್ಗೋಂಡಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: