ಭಾಗ್ಯನಗರದ ಶ್ರೀರಾಮ ಮಂದಿರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ಕೊಪ್ಪಳ : ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ದಿನಾಂಕ 22 ಜನವರಿ 2024 ರಂದು ನಡೆಯಲಿರುವ ಶ್ರೀ ರಾಮಲಲ್ಲಾ ದೇವರ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಭಾಗ್ಯನಗರದ ಶ್ರೀ ಸೂರ್ಯವಂಶ ಕ್ಷತ್ರಿಯ ಸಮಾಜದ ಶ್ರೀರಾಮ ಮಂದಿರದಲ್ಲಿ ದೇವಸ್ಥಾನದ ಕಮಿಟಿ ವತಿಯಿಂದ ಬೆಳಿಗ್ಗೆ ರಾಮ ದೇವರಿಗೆ ಪಂಚಾಮೃತ ಅಭಿಷೇಕ ಮತ್ತು ಸಾಯಂಕಾಲ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಭಾಗ್ಯನಗರದ ಭಜರಂಗಿ ಬಂಟರ ಬಳಗದ ಅಧ್ಯಕ್ಷ ನವೀನ್ ಕುಮಾರ್ ಶಿರಿಗೇರಿ ಮಾಹಿತಿ ನೀಡಿದರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನವೀನ್ ಕುಮಾರ್ ಸಿರಿಗೇರಿ ಭಜರಂಗಿ ಬಂಟರ ಬಳಗ ಭಾಗ್ಯನಗರ ವತಿಯಿಂದ ಬೆಳಿಗ್ಗೆ 10:00ಗೆ ಮುಂದಿನ ಪೀಳಿಗೆಯಲ್ಲಿ ರಾಮ ರಾಜ್ಯದ ಕನಸು ಬಿತ್ತುವ ಸಂಕಲ್ಪದೊಂದಿಗೆ ಮಕ್ಕಳ ರಾಮಾಯಣ ಪುಸ್ತಕ ವಿತರಣೆ ರೆಡ್ ಕ್ರಾಸ್ ಕೊಪ್ಪಳ ಸಂಸ್ಥೆಯ ಸಹಯೋಗದಲ್ಲಿ ಬೆಳಿಗ್ಗೆ 11 ರಿಂದ ಸಾಯಂಕಾಲ ನಾಲ್ಕರವರೆಗೆ ರಕ್ತದಾನ ಶಿಬಿರ ಮತ್ತು ಮಧ್ಯಾಹ್ನ 1:00ಗೆ ಭಕ್ತಾದಿಗಳಿಗೆ ಪ್ರಸಾದ ಸೇವೆ ಇರುತ್ತದೆ ಎಂದು ಹೇಳಿದರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಕಲಾಲ್ ಕಾಟಿಕ ಸಮಾಜ ಭಾಗ್ಯನಗರ ಕಾರ್ಯದರ್ಶಿ ಮಂಜುನಾಥ್ ವಿ ಕಲಾಲ್ ಭಕ್ತಾದಿಗಳು ಭಾಗವಹಿಸಿ ಶ್ರೀರಾಮನ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿಕೊಂಡರು ಈ ಸಂದರ್ಭದಲ್ಲಿ ಶಿವಕುಮಾರ್ ಕಂಬಳಿ ರಾಜಣ್ಣ ಕಲಾಲ್ ಗೋವಿಂದರಾಜ್ ಬೂದುಗುಂಪ ಉಪಸ್ಥಿತರಿದ್ದರು.
Comments are closed.