ಭಾಗ್ಯನಗರ ಬಿಜೆಪಿಯ ತವರೂರು-ಸಂಗಣ್ಣ ಕರಡಿ

Get real time updates directly on you device, subscribe now.

ಕೊಪ್ಪಳ: ಭಾಗ್ಯನಗರ ಬಿಜೆಪಿಯ ತವರೂರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ರಾಜ್ಯಕ್ಕೆ ಮಾದರಿ ಫಲಿತಾಂಶ ನೀಡುವ ಪಟ್ಟಣವಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಭಾಗ್ಯನಗರದಲ್ಲಿ ನಮ್ಮ ಸಂಕಲ್ಪ ವಿಕಸತ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ಜನ ಕಲ್ಯಾಣಕ್ಕಾಗಿ ಉತ್ತಮ ಯೋಜನೆಗಳನ್ನು ನೀಡಿದೆ. ಪ್ರತಿಯೊಂದು ಕುಟುಂಬಕ್ಕೆ ಒಂದಿಲ್ಲೊಂದು ಯೋಜನೆ ತಲುಪಿವೆ. ಈ ಬಗ್ಗೆ ಜಾಗೃತಿ ಮೂಡಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂದರು.
ಪ್ರಧಾನ ನರೇಂದ್ರ ಮೋದಿ ಜಗತ್ತು ಮೆಚ್ಚಿದ ವಿಶ್ವದ ನಾಯಕ. ವಿಶ್ವದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಕ್ತಿ ಹೆಚ್ಚಿದೆ. ಭಾರತ ನೋಡುವ ದೃಷ್ಟಿಕೋನ ಬದಲಾಗಿದೆ. ಅವುಗಳ ಬಗ್ಗೆ ಜನರ ಬಗ್ಗೆ ತಿಳಿ ಹೇಳಿ. ಜಿಲ್ಲೆಗೆ ಬಿಜೆಪಿ ಸರ್ಕಾರದ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕು ಎಂದರು.
ಸರ್ಕಾರ ಯೋಜನೆಗಳ ಲಾಭ ಪಡೆದ ಫಲಾನುಭವಿಗಳನ್ನು ಗುರುತಿಸಿ ಮತವಾಗಿ ಪರಿವರ್ತಿಸಬೇಕು. ಕೇಂದ್ರ ಸರ್ಕಾರದ ಸಾಧನೆ ಮನೆ ಮನೆಗೆ ತಲುಪಿಸಿ.  ಬಿಜೆಪಿ ಯಾವ ರೀತಿ ಅಭಿವೃದ್ಧಿ ಮಾಡಿದೆ ಎನ್ನುವುದ ಕುರಿತು ಜಾಗೃತಿ ಮೂಡಿಸಬೇಕು. ಕೃಷಿ ಸಮ್ಮಾನ, ಉಜ್ವಲ ಯೋಜನೆ ಪ್ರತಿ ಕುಟುಂಬಕ್ಕೆ ತಲುಪಿದ್ದು, ಅವರನ್ನು ಸಂಪರ್ಕ ಮಾಡಿ. ಕೇವಲ ತೀರ್ಮಾನ, ಪ್ರಮಾಣದಿಂದ ಆಗಲ್ಲ. ನೇರ ಸಂಪರ್ಕದಿಂದ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯವಿದೆ ಎಂದು ಹೇಳಿದರು.
ಪಟ್ಟಣ ಪಂಚಾಯತಿ ಸದಸ್ಯೆ ಲಲಿತಾ ಮಂಜುನಾಥ ಡಂಬಳ, ಮಂಜುಳಾ ಶ್ಯಾವಿ, ಮಂಜಮ್ಮ ಮ್ಯಾಗಳಮನಿ, ಜಯಮಾಲಾ, ರೋಷನ್ ಅಲಿ ಮಂಗಳೂರು, ಜಗದೀಶ ಮಾಲಗತ್ತಿ, ಗವಿಸಿದ್ದಯ್ಯಸ್ವಾಮಿ ಕಂಬಾಳಮಠ, ಪರಶುರಾಮ ನಾಯಕ, ಬಿಜೆಪಿ ಮುಖಂಡರಾದ ನೀಲಕಂಠಪ್ಪ ಮೈಲಿ, ವಿಜಯ ಪಾಟೀಲ್, ಗಿರೀಶ್ ಪಾನಗಂಟಿ, ಕೃಷ್ಣ ಮ್ಯಾಗಳಮನಿ, ಮಂಜುನಾಥ ಶ್ಯಾವಿ, ಸುರೇಶ, ಕೊಟ್ರೇಶ, ಮಲ್ಲೇಶ, ರಾಜೇಶ್, ಸೋಮಣ್ಣ ದೇವರಮನಿ ಸೇರಿ ಮತ್ತಿತರರಿದ್ದರು.
ಭಾಗ್ಯನಗರ ಜನತೆ ಮೂರು ದಶಕದಿಂದ ನನ್ನನ್ನು ಕೈ ಬಿಟ್ಟಿಲ್ಲ. ಚುನಾವಣೆಯಲ್ಲಿ ಪಟ್ಟಣದಿಂದಲೇ ಹೆಚ್ಚಿನ ಲೀಡ್ ಬಂದಿದೆ. ಮುಂದಿನ ಲೋಕಸಭೆಯಲ್ಲೂ ಇದು ಮುಂದುವರಿಯಲಿ. ಪಟ್ಟಣದ ಅಭಿವೃದ್ಧಿ ಗೆ ನಾನು ಸದಾ ಬದ್ಧ.
– ಸಂಗಣ್ಣ ಕರಡಿ, ಸಂಸದ.
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ದಶಕಗಳಿಂದ ಆಗದ ಅಭಿವೃದ್ಧಿ ಕಾರ್ಯಗಳು ಸಂಸದ ಸಂಗಣ್ಣ ಕರಡಿ ಅವರ ಅವಧಿಯಲ್ಲಿ ನಡೆದಿವೆ. ಕೇಂದ್ರದ ಯೋಜನೆಯನ್ನು ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತಲುಪಿಸಲಿ. ಕ್ಷೇತ್ರದ ಅಭಿವೃದ್ಧಿಗಾಗಿ ಜನತೆ ಬಿಜೆಪಿ ಬೆಂಬಲಿಸಿ ಹ್ಯಾಟ್ರಿಕ್ ಗೆಲುವಿಗೆ ಕಾರಣೀಕರ್ತರಾಗಬೇಕು.
– ಹೇಮಲತಾ ನಾಯಕ, ವಿಧಾನ ಪರಿಷತ್ ಸದಸ್ಯೆ.

Get real time updates directly on you device, subscribe now.

Comments are closed.

error: Content is protected !!