ನಾಟಕಗಳು ಸಮಾಜದಲ್ಲಿ ನೈತಕತೆಯ ಸೆಲೆ ಉಕ್ಕಿಸುತ್ತವೆ: ಜೆ.ನಾರಾಯಣಪ್ಪ ನಾಯಕ

Get real time updates directly on you device, subscribe now.

ಗಂಗಾವತಿಯಲ್ಲಿ ಗಮನಸೆಳೆದ ರಕ್ತರಾತ್ರಿ ಪೌರಾಣಿಕ ನಾಟಕ ಪ್ರದರ್ಶನ

ಗಂಗಾವತಿ: ಒಳಿತು ಕೆಡಕಿನ ಪರಿಣಾಮಗಳನ್ನು ಸಮಾಜಕ್ಕೆ ಸರಳವಾಗಿ ತಿಳಿಸುವ ಮೂಲಕ ನಾಟಕಗಳು ಮನೋರಂಜನೆಯ ಜತೆಗೆ ನೈತಿಕತೆಯ ಸೆಲೆ ಉಕ್ಕಿಸುತ್ತವೆ ಎಂದು ನಗರದ ೧೮ ಸಮಾಜಗಳ ಶ್ರೀ ದುರ್ಗಾದೇವಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ ತಿಳಿಸಿದರು.
ಅವರು ನಗರದ ಪಬ್ಲಿಕ್ ಕ್ಲಬ್ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಕೊಪ್ಪಳ ಹಾಗು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಟಿ ಜಿ. ಅವರ ಏರ್ಪಡಿಸಿದ್ದ ರಕ್ತರಾತ್ರಿ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಡೋಲು ಬಡಿಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಕೆಟ್ಟ ಪಾತ್ರಗಳಿಂದ ಪ್ರಭಾವಿತರಾಗದೆ ಒಳ್ಳೆಯ ಪಾತ್ರಗಳ ಗುಣಗಳನ್ನು ಪ್ರೇಕ್ಷಕರು ಅಳವಡಿಸಿಕೊಳ್ಳಬೇಕು, ನಮ್ಮ ಕಲೆ ಪರಂಪರೆ ಉಳಿಸಿಕೊಂಡು ಹೋಗುವ ಹೊಣೆಗಾರಿಕೆ ಯುವ ಸಮುದಾಯಗಳ ಮೇಲಿದೆ. ಸಿನೆಮಾ ಹಾಗು ದೂರದರ್ಶನಗಳ ಹಾವಳಿಯಿಂದ ಪರಂಪರಾಗತ ಕಲೆಗಳು ನಶಿಸುತ್ತಿವೆ. ಉಳಿಸುವಲ್ಲಿ ಸರಕಾರಗಳು ಪ್ರಯತ್ನಿಸುತ್ತಿವೆಯಾದರೂ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅತಿ ಮುಖ್ಯ, ಲಕ್ಷಾಂತರ ಪ್ರದರ್ಶನಗಳನ್ನು ಕಂಡಿರುವ ರಕ್ತರಾತ್ರಿ ನಾಟಕ ಕಂದಗಲ್ ಹನುಮಂತರಾಯರ ಶ್ರೇಷ್ಠ ಕೃತಿ ಕಬ್ಬಿಣದ ಕಡಲೆಯಂಥ ಸಂಭಾಷಣೆಯನ್ನು ಕರಗತ ಮಾಡಿಕೊಂಡು ಅಭಿನಯಿಸುವ ಕಲಾವಿದರ ಶ್ರಮ ಅನುಕರಣೀಯ ಎಂದು ಗುಣಗಾನ ಮಾಡಿದರು.
ಗಂಗಾವತಿ ತಾಲೂಕಾ ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ ಮಾತನಾಡಿ, ನಾಟಕ ಕಲೆ ಉಳಿಸುವಿಕೆಗೆ ಎಲ್ಲರೂ ಕೈ ಜೋಡಿಸಬೇಕು, ಕಲಾವಿದರಿಗೆ ಪ್ರೋತ್ಸಾಹದ ಅಗತ್ಯವಿದೆ. ಪ್ಯಾಷನ್‌ಗೆ ಮಾರು ಹೋಗುವವರ ನಡುವೆ ರಂಗಕಲೆಗಾಗಿ ದುಡಿಯುತ್ತಿರುವ ಈ ಕಲಾವಿದರ ಪ್ರಯತ್ನ ನಿಜಕ್ಕು ಶ್ಲಾಘನೀಯ ಪ್ರೇಕ್ಷಕ ವರ್ಗ ಕಲಾವಿದರಿಗೆ ತನುಮನಧನದಿಂದ ಸಹಾಯ ಮಾಡಬೇಕೆಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಪರಮಪೂಜ್ಯ ರೇವಣಸಿದ್ದಯ್ಯ ತಾತನವರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕಾ ಅಧ್ಯಕ್ಷ ಹಾಗು ಕಲಾವಿದ ನಾಗರಾಜ್ ಇಂಗಳಗಿ, ಧೀರ ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯಧ್ಯಕ್ಷ ವಿರುಪಾಕ್ಷಪ್ಪ ಹೇರೂರು, ಕಲಾವಿದರಾದ ಅಮರೇಶಪ್ಪ ಇಂಗಳಗಿ ಪಟ್ಟೇದ್, ರಾರಾವಿ ಚಿದಾನಂದಪ್ಪ ಗವಾಯಿಗಳು, ಶೆಡ್ಡಿ ರಮೇಶ್ ಯುವ ಪ್ರಮುಖರಾದ ಸಂಗಮೇಶ್ ಕೋಟಿ, ಗುರುಬೋವಿ ಹಾಗು ಕೊಪ್ಪಳ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಶಿವುಕುಮಾರ್ ಸಾಫ್ಟ್‌ಮನ್ ಇದ್ದರು.
ನಂತರ ರಕ್ತರಾತ್ರಿ ನಾಟಕ ಪ್ರದರ್ಶನ ನೀಡಲಾಯಿತು. ರಾರಾವಿ ಚಿದಾನಂದ ಗವಾಯಿ (ಕೃಷ್ಣ), ನಾಗರಾಜ್ ಇಂಗಳಗಿ (ಅಶ್ವತ್ಥಾಮ), ಚಿದಾನಂದ ವೀರಗಂಟಿ (ಭೀಮ), ರಾಟಿ ಬಣಗಾರ ನಿಂಗಪ್ಪ ಸೋವೆನಹಳ್ಳಿ (ಶಕುನಿ), ನಾಗರಾಜ್ ರಾಟಿ ಬಣಗಾರ (ದುರ್ಯೋಧನ), ಜವಳಗೇರಾ ಬಸವಯ್ಯ ಸ್ವಾಮಿ (ಧರ್ಮರಾಯ, ಗಂಧರ್ವ, ಶಿವ), ಸೊತ್ತಿನ ಕೃಷ್ಣಪ್ಪ ಲಿಂಗನಾಯಕನಹಳ್ಳಿ (ಅರ್ಜುನ) ಎ.ಮದ್ದಯ್ಯ (ಕರ್ಣ), ಗಿರೀಶ್ ಆನೆಗೊಂದಿ (ಕಲಿ) ಸೋಗಿ ನಾಗರತ್ನ (ದ್ರೌಪದಿ), ದಿವ್ಯಾ ಕೂಡ್ಲಿಗಿ (ಭಾನಮತಿ, ಉತ್ತರೆ), ಕೊಟ್ರೇಶ್ ಉತ್ತಂಗಿ (ಅನಂಗಪುಷ್ಪಾ), ಅಮೋಘ ಅಭಿನಯ ನೀಡಿದರು. ಕ್ಯಾಷಿಯೋ ತಿಪ್ಪೆಸ್ವಾಮಿ, ತಬಲಾ ಎಸ್.ಎಸ್.ಹಿರೇಮಠ ಕುಷ್ಟಗಿ ಇವರು ಅತ್ಯುತ್ತಮವಾಗಿ ನುಡಿಸಿದರು. ಪಂಪಾಪತಿ ಇಂಗಳಗಿ ನೇತೃತ್ವದ ಎಕೆಪಿ ಮೆಲೋಡಿಸ್ ರಂಗಸಜ್ಜಿಕೆ, ಧ್ವನಿವರ್ಧಕದೊಂದಿಗೆ, ಮುರಳಿ ಚಿತ್ರದುರ್ಗಾ ಇವರ ಪ್ರಸಾದನದಲ್ಲಿ ನಾಟಕವು ನೋಡುಗರ ಕಣ್‌ಮನ ಸೆಳೆಯಿತು.

Get real time updates directly on you device, subscribe now.

Comments are closed.

error: Content is protected !!
%d bloggers like this: