ಲೋಕಸಭಾ ಚುನಾವಣೆ ಪ್ರಿಯಾಂಕಾ ಗಾಂಧಿ ಬಂದ್ರೆ ಲಕ್ಷ ಲೀಡ್ ಗೆಲುವು : ಜ್ಯೋತಿ
ಕೊಪ್ಪಳ: ಮುಂಬರುವ ಲೋಕಸಭೆ ಚುನಾವಣೆ ದೇಶದ ಅಳಿವು ಉಳಿವಿನ ಹೋರಾಟ, ಇಂಡಿಯಾ ವರ್ಸಸ್ ಚಾರ್ ಗುಜರಾತಿಯದ್ದಾಗಿದೆ, ಅಂತಹ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಬಂದ್ರೆ ಕೊಪ್ಪಳ ಲೋಕಸಭೆ ಕ್ಷೇತ್ರದಿಂದ ಲಕ್ಷ ಲೀಡ್‌ನಲ್ಲಿ ಗೆಲ್ಲಿಸುತ್ತೇವೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಹೇಳಿಕೆ ನೀಡಿದ್ದಾರೆ.
ಪ್ರಿಯಾಂಕಾ ಗಾಂಧಿ ನಿಜವಾದ ದಿಟ್ಟ ಹೆಣ್ಣುಮಗಳು, ಆಕೆಗೆ ಜನರ ನೋವು ಗೊತ್ತಿದೆ, ತಳಮಟ್ಟದ ವಾಸ್ತವ ಗೊತ್ತಿದೆ, ಸದಾ ನೋವನ್ನೇ ಉಂಡ ಮನಸ್ಸು ಸದಾ ಒಳ್ಳೆಯದನ್ನೇ ಮಾಡುತ್ತದೆ, ಮೇಲಾಗಿ ಅತ್ಯಂತ ಸುಸಂಸ್ಕೃತ ವಿದ್ಯಾವಂತೆಯಾಗಿರುವದರಿಂದ ಅವರು ಕೊಪ್ಪಳದಿಂದ ಸ್ಪರ್ಧೆ ಮಾಡಿದ್ದೇ ಆದರೆ ನಾನೂ ಸೇರಿದಂತೆ ನನ್ನಂತಹ ಸಾವಿರಾರು ಜನ ಕಂಕಣತೊಟ್ಟು ಒಂದು ಲಕ್ಷಕ್ಕೂ ಅಧಿಕ ಲೀಡ್‌ನಿಂದ ಗೆಲ್ಲಿಸುತ್ತೇವೆ, ಪ್ರಿಯಾಂಕಾರಂತಹ ಶುದ್ಧ ಪ್ರೀತಿಯ ಮನಸ್ಸು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲಲು ಸಹಾಯ ಮಾಡುತ್ತದೆ. ಕೊಪ್ಪಳ ಕ್ಷೇತ್ರ ಅವರ ಕಾರಣಕ್ಕೆ ರಾಷ್ಟ್ರೀಯ ಮಹತ್ವ ಪಡೆಯುತ್ತದೆ, ಇಲ್ಲಿನ ಸಮಗ್ರ ಅಭಿವೃದ್ಧಿಗೆ ಅದು ಸಹಾಯ ಮಾಡುತ್ತದೆ ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕೊಪ್ಪಳ ಕ್ಷೇತ್ರದಲ್ಲಿ ಈಗಾಗಲೇ ಕಳೆದ ಬಾರಿ ಪರಾಭವಗೊಂಡಿರುವ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ. ರಾಜಶೇಖರ್ ಹಿಟ್ನಾಳ ಪರ ಒಲವಿದೆ, ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ಗೆಲುವು ಶತಸಿದ್ಧ. ಎರಡು ಬಾರಿ ಬಿಜೆಪಿ ಮೋದಿಯ ಸುಳ್ಳು ಗ್ಯಾರಂಟಿಗಳಿಂದ ಗೆದ್ದಿತ್ತು ಈಗ ಜನರಿಗೆ ಮೋಸದ ಅರಿವಾಗಿದೆ, ರಾಜ್ಯ ಸರಕಾರದ ಒಳ್ಳೆಯ ಯೋಜನೆಗಳು, ನಿಜವಾದ ಗ್ಯಾರಂಟಿಗಳು, ನುಡಿದಂತೆ ನಡೆದ ರೀತಿ ಹಾಗೂ ಕ್ಷೇತ್ರದಲ್ಲಿ ಸಚಿವರು ಶಾಸಕರು ಮಾಡುತ್ತಿರುವ ಅಭಿವೃದ್ಧಿಪರ ಜನಪರ ಕೆಲಸಗಳು ಕೈ ಹಿಡಿಯಲಿವೆ. ಸಚಿವ ಶಿವರಾಜ ತಂಗಡಗಿ ಮತ್ತು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಪಕ್ಷ ಸಂಘಟಿಸಿದ ರೀತಿ ಎಐಸಿಸಿ ಮಟ್ಟದಲ್ಲಿ ಹೆಸರು ಮಾಡಿದ್ದು ಸಹ ಕೊಪ್ಪಳ ಕ್ಷೇತ್ರದಲ್ಲಿ ಪ್ರಿಯಾಂಕಾ ಪರ ಅಲೆ ಸೃಷ್ಟಿ ಯಾಗಿದೆ ಎಂದು ತಿಳಿಸಿದ್ದಾರೆ.
Comments are closed.