ಜಾತ್ರಾ ಆವರಣದ ಸಿದ್ಧತೆ

Get real time updates directly on you device, subscribe now.

ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಸಿದ್ಧಿ ಪಡೆದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಜಾತ್ರಾ ಮಹೋತ್ಸವದ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಜಾತ್ರಾ ಮೈದಾನವನ್ನು ಡೋಜರ್ ಹಾಗೂ ಶ್ರೀಮಠದ ಸೇವಾ ಸಿಬ್ಬಂದಿಗಳಿಂದ ಸ್ವಚ್ಛಗೊಳಿಸುವ ಹಾಗೂ ಸಮತಟ್ಟು ಮಾಡುವ ಕಾರ್ಯ ಭರದಿಂದ ಸಾಗಿದೆ. ಅಂಗಡಿ ಹಾಕುವ ಸ್ಥಳದಲ್ಲಿ ಕೆಂಪು ಮಣ್ಣಿನಿಂದ ಹಾಸನ್ನು ಹಾಕಲಾಗುತ್ತಿದೆ. ವ್ಯಾಪಾರಸ್ಥರು ತಮ್ಮ ಜಾಗೆಗಳನ್ನು ಗುರುತಿಸಿಕೊಳ್ಳುತ್ತಿದ್ದಾರೆ. ಜಾತ್ರಾ ಮಹಾದ್ವಾರದ ಮುಂದುಗಡೆ ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೇದಾರರು ಸಿದ್ಧತಾಕಾರ್ಯ ಕೈಗೊಂಡಿದ್ದಾರೆ. ಇಂದು ಶ್ರೀಮಠದ ತೇರನ್ನು ಅದರ ಮೂಲ ಸ್ಥಳಕ್ಕೆ ತಂದು ನಿಲ್ಲಿಸಲಾಗಿದೆ, ಎಂದು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Get real time updates directly on you device, subscribe now.

Comments are closed.

error: Content is protected !!