ಓದಿದವನು ಉತ್ತಮ  ಬದುಕನ್ನು ಕಟ್ಟಿಕೊಳ್ಳಬಲ್ಲ: ಮಹಾಂತೇಶ ಸಜ್ಜನ್

Get real time updates directly on you device, subscribe now.


ಕೊಪ್ಪಳ;ಜ,೧೩;-ಓದಿದವನು ಮಾತ್ರ ಬದುಕನ್ನು ಕಟ್ಟಿಕೊಳ್ಳುತ್ತಾನೆ. ಓದದೇ ಇರುವನು ಯಾವುದರಲ್ಲಿಯೂ ಯಶಸ್ವಿಯಾಗಲಾರ, ಉದ್ಯೊಗ, ವ್ಯಾಪಾರ, ಸರಕಾರಿ ನೌಕರಿ ಯಾವುದರಲ್ಲಿಯೂ ಫಲ ಪಡೆಯುತ್ತಾನೆ ಎಂದು ಕೊಪ್ಪಳ ನಗರ ಠಾಣೆಯ ಇನಸ್ಪೆಕ್ಟರ್ ಶ್ರೀ ಮಹಾಂತೇಶ ಸಜ್ಜನ್‌ರವರು ನುಡಿದರು. ಅವರು ಶ್ರೀ ಗವಿಸಿದ್ಧೇಶ್ವರ ಹಾಗೂ ಪೂಜ್ಯ ಶ್ರೀ ಮರಿಶಾಂತವೀರ ಸ್ವಾಮಿಜಿ ಪದವಿ ಪೂರ್ವ ಮಹಾವಿದ್ಯಾಲಯಗಳು ಆಯೋಜಿಸಿದ್ದ ೨೦೨೩-೨೪ನೇ ಸಾಲಿನ ಕ್ರೀಡಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಬದುಕಿನಲ್ಲಿ ಒಳಿತು, ಕೆಡಕು, ಲಾಭ, ನಷ್ಟ ಎಲ್ಲವೂ ಇವೆ. ಅವುಗಳಲ್ಲಿ ಯಾವುದು ಸೂಕ್ತ ಎಂಬುದು ಅರಿತು ಆಯ್ಕೆ ಮಾಡಿಕೊಳ್ಳಬೇಕಿದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾಲೇಜು ಸಂಯೋಜಕರಾದ ಎ.ಜಿ ಶರಣಪ್ಪರವರು ಮಾತನಾಡಿ ಕ್ರೀಡೆಯಲ್ಲಿ ಎಲ್ಲರು ಗೆಲ್ಲಲಾರರು ಆದರೆ ಬದುಕಿನಲ್ಲಿ ಎಲ್ಲರೂ ಗೆಲ್ಲಬಹುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ವೀರೇಶಕುಮಾರ್‌ರವರು ವಹಿಸಿದ್ದರು. ವೇದಿಕೆಯ ಮೇಲೆ ಮರಿಶಾಂತವೀರ ಕಾಲೇಜಿ ಪ್ರಾಚಾರ್ಯರಾದ ಅಗಸ್ಟಿನ್‌ರವರು ಉಪಸ್ಥಿತರಿದ್ದರು. ಆರಂಭದಲ್ಲಿ ಕ್ರೀಡಾ ಸಂಯೋಜಕರಾದ ಈಶಪ್ಪ ದೊಡ್ಡಮನಿಯವರು ೨೦೨೩-೨೪ ನೇ ಸಾಲಿನ ವಾರ್ಷಿಕ ವರದಿ ಓದಿದರು. ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್‌ರವರು ಸ್ವಾಗತ ಮತ್ತು ಅತಿಥಿಗಳ ಪರಿಚಯ ಮಾಡಿದರು. ಅಶೋಕ ಓಜಿನಹಳ್ಳಿಯವರು ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಸುಮಾರು ಎರಡು ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!
%d bloggers like this: