ಲೋಕ ಸಭೆಯಲ್ಲಿ ಧ್ವನಿ ಎತ್ತಲು ಕಾರ್ಮಿಕ ಸಂಘಟನೆಗಳಿಂದ ಮನವಿ

Get real time updates directly on you device, subscribe now.

ಕೊಪ್ಪಳ : ಸಂಸದ ಸಂಗಣ್ಣ ಕರಡಿಗೆ ಕೇಂದ್ರದ ಗಮನ ಸೆಳೆಯಲು ಲೋಕ ಸಭೆಯಲ್ಲಿ ಧ್ವನಿ ಎತ್ತಲು ಕಾರ್ಮಿಕ ಸಂಘಟನೆಗಳಿಂದ ಮನವಿ.

ಕೊಪ್ಪಳ : ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಗಳಾದ ಅಂಗನವಾಡಿ.ಬಿಸಿಯೂಟ. ಸ್ಕೀಂ ನೌಕರರ ಗೌರವಧನ ಹೆಚ್ಚಳ.ನಿವೃತ್ತಿ ವೇತನ.ಇ.ಎಸ್.ಐ. ಹಾಗೂ ಸಾಮಾಜಿಕ ಭದ್ರತೆ ಸೌಲಭ್ಯಗಳು ಸೇರಿದಂತೆ ಅನುದಾನಗಳ ಹೆಚ್ಚಳಕ್ಕೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಕೋರಿ ಕೊಪ್ಪಳ ಜಿಲ್ಲಾ ಆಡಳಿತ ಭವನದಲ್ಲಿಯ ಲೋಕ ಸಭಾ ಸದಸ್ಯರ ಕಾರ್ಯಾಲಯದಲ್ಲಿ ಸಂಸದ ಸಂಗಣ್ಣ ಕರಡಿ ಅವರ ಅನುಪಸ್ಥಿತಿಯಲ್ಲಿ ಅವರ ಆಪ್ತ ಸಹಾಯಕ ವಿಜಯಕುಮಾರ್ ಪುರಾಣಿಕ ಅವರಿಗೆ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಅಡಿಯಲ್ಲಿ ಬರುವ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಮನವಿ ಸಲ್ಲಿಸಿದರು. ಮನವಿಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ದೇಶದಲ್ಲಿ ಜಾರಿಯಲ್ಲಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆ- 48, ಯೋಜನೆಯ ಅನುಷ್ಠಾನಕ್ಕಾಗಿ ಹಗಲಿರುಳು ದುಡಿದು ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಆಶಾ ಕಾರ್ಯಕರ್ತೆಯರು 18 ವರ್ಷಗಳಿಂದ ಈ ಯೋಜನೆಯ ಅನುಷ್ಠಾನಕ್ಕಾಗಿ ಹಗಲಿರಳು ದುಡಿದ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಮಹಿಳೆರಿಗೆ ಕನಿಷ್ಠ ಗೌರವಧನ ನೀರಲಾಗುತ್ತಿದೆ. ಪ್ರಸ್ತುತ ಅಂಗನವಾಡಿ ಕಾರ್ಯಕರ್ತೆಯರಿಗೆ ರೂ.4500/- ಸಹಾಯಕಿಯರಿಗೆ ರೂ2500/- ಬಿಸಿಯೂಟ ಕಾರ್ಯಕರ್ತೆಯರಿಗೆ 1000/- ಆಶಾ ಕಾರ್ಯಕರ್ತೆಯರಿಗೆ ರೂ.2000/- ಗಳಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಕೇಂದ್ರ ಸರ್ಕಾರ ಇವರುಗಳಿಗೆ ನೀಡುತ್ತಿರುವ ಗೌರವ ಧನ. ಅನುದಾನ ಹಾಗೂ ಅಗತ್ಯ ಸೌಲಭ್ಯಗಳು ಸಪರ್ಕಕವಾಗಿ ಸಕಾಲಕ್ಕೆ ದೊರೆಯುತ್ತಿಲ್ಲ. 2014-15 ಸಾಲಿನಲ್ಲಿ ಯೋಜನೆಗಳಲ್ಲಿ ಕೇಂದ್ರ ಹಾಗೂ ರಾಜ್ಯದ ಅನುದಾನದ ಮುಂಜೂರಾತಿಯಲ್ಲಿ ಶೇಕಡವಾರು ಅನುಪಾತ 90:10 ರಂತೆ ಇದ್ದು. ಪ್ರಸ್ತುತ ಸದರಿ ಅನುಪಾತ ಮೊತ್ತವನ್ನು 60140 ಕ್ಕೆ ಸೀಮಿತಗೊಳಿಸಿ ಕಡಿತಗೊಳಿಸಲಾಗಿದೆ. ಆಹಾರ. ಆರೋಗ್ಯ ಶಿಕ್ಷಣ ಬಹು ಮುಖ್ಯವಾದುದು. ಸಮಗ್ರ ಶಿಶು ಅಭಿವೃದ್ಧಿ ಯೋಜನೆ. ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ. ಆಸ್ಪತ್ರೆಗಳಲ್ಲಿ ಆಶಾ ಕಾರ್ಯಕರ್ತೆಯರ ಸೇವೆಗಳು ಜನ ಸಮುದಾಯಕ್ಕೆ ಅತ್ಯಗತ್ಯವಾಗಿದ್ದು.ಅವುಗಳನ್ನು ಪರಿಣಾಮಕಾರಿಯಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು.ಆಶಾ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ಕಾರ್ಯಕರ್ತೆಯರು ದಿನನಿತ್ಯ ದುಡಿಯುತ್ತಿದ್ದಾರೆ. ಅದರೆ ಕೇಂದ್ರ ಸರ್ಕಾರ ಈ ಯೋಜನೆಗಳಿಗೆ ನೀಡಲಾಗುತ್ತಿರುವ ಅನುದಾನವನ್ನು ಕಡಿಮೆ ಮಾಡಿರುವುದು ಸರಿಯಲ್ಲ. ಪ್ರಸ್ತುತ ಬೆಲೆಯೇರಿಕೆಯಿಂದ ಉಂಟಾಗಿರುವ ದುಬಾರಿ ದಿನಗಳಲ್ಲಿ ಸದರಿ ಯೋಜನೆಗಳಲ್ಲಿ ದುಡಿಯುತ್ತಿರುವ ನೌಕರರಿಗೆ ಜೀವನ ನಿರ್ವಹಣೆ ಪ್ರಯಾಸದಾಯಕವಾಗಿದೆ. ಕಳೆದ ಹತ್ತು ವರ್ಷಗಳಿಂದ ನೌಕರರಿಗೆ ಅರ್ಹ ಗೌರವಧನವನ್ನು ಕೇಂದ್ರದಿಂದ ಹೆಚ್ಚಳ ಮಾಡಿಲ್ಲ. ನೀಡಿಲ್ಲ. ಪೋಷನ್ ಕಾರ್ಯಕ್ರಮಕ್ಕೆ ನೀಡಲಾಗುವ ಮೊಬೈಲ್ ವೆಚ್ಚ. ಆಹಾರ ಧಾನ್ಯ.ಆರೋಗ್ಯ ವೆಚ್ಚಗಳ ಅನುದಾನ ಹಾಗೂ ಗೌರವಧನ ಹೆಚ್ಚಳ ಅಗತ್ಯವಾಗಿದೆ ಆದುದರಿಂದ ತಾವು ಇದೀಗ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲಿ ಸ್ಕೀಂ ವರ್ಕ‌ರ್ಸ್‌ಗಳ (SCHEME WORKERS) ಸಮಸ್ಯೆಗಳು ಹಾಗೂ ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳ ಪರಣಾಮಕಾರಿ ಅನಷ್ಠಾನಕ್ಕೆ ಆಗ್ರಹಿಸಿ ಈ ಕೆಳಕಂಡ ಬೇಡಿಕೆಗಳ ಈಡೇರಿಕೆಗಾಗಿ ಧ್ವನಿ ಎತ್ತಬೇಕಾಗಿ ಕೋರಿದರು. ಕೇಂದ್ರ ಪುರಸ್ಕೃತ ಯೋಜನೆಗಳಾದ ಅಂಗನವಾಡಿ.ಆಶಾ ಮತ್ತು ಬಿಸಿಯೂಟದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಶೇ 90 ಹಾಗೂ ರಾಜ್ಯ ಸರ್ಕಾರದ ಶೇ10 (90 :10) ಅನುಪಾತದಲ್ಲಿ ಅನುದಾನ ನೀಡಲಾಗುತ್ತಿತ್ತು. ಆದರೆ ಕಳೆದ 2015 ರ ನಂತರ ಈ ಅನುದಾನ ಕಡಿತಗೊಂಡು ಕೇಂದ್ರದ 60ಹಾಗೂ ರಾಜ್ಯದ 40 ಅಂದರೆ 60:40 ರ ಅನುಪಾದಲ್ಲಿ ನಿಗದಿಗೊಳಿಸಿ ಅನುದಾನದಲ್ಲಿ ಕಡಿತಗೊಳಿಸಲಾಗಿದೆ. ಆ ಕಡಿಮೆ ಅನುದಾನವು ಸಹ ಸಕಾಲಕ್ಕೆ ಹಾಗೂ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ. ಮೊಬೈಲ್ ವೆಚ್ಚ.ಆಹಾರ ಸಾಮಾಗ್ರಿ. ಆರೋಗ್ಯ ವೆಚ್ಚ.ಇಂದಿನ ಬೆಲೆ ಏರಿಕೆ ಸೂಚ್ಯಂಕಕ್ಕನುಸಾರ ಈ ಯೋಜನೆಗಳಿಗೆ ಅನುದಾನವನ್ನು ಹೆಚ್ಚಿಸಬೇಕಾಗಿದ್ದು. ಸರ್ಕಾರ ಸೂಕ್ತ ಕ್ರಮ ವಹಿಸಬೇಕು.

ಗೌರವ ಧನ ಹೆಚ್ಚಿಸಿ.ಇದೀಗ ಸ್ಕೀಂ ವರ್ಕರಸ್ ನೀಡಲಾಗುತ್ತಿರುವ ಗೌರವಧನವು ಅತ್ಯಂತ ಕಡಿಮೆಯಾಗಿದ್ದು.ಬೆಲೆ ಏರಿಕೆಗಳ ಸಂದರ್ಭದಲ್ಲಿ ಕಡಿಮೆ ಪ್ರಮಾಣದ ಸಂಭಾವನೆ ಪಡೆದು ಜೀವನ ನಿರ್ವಹಿಸುವುದು ಸಾಧ್ಯವಿಲ್ಲ. ಆದುದರಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು. ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರ ಗೌರವಧನವನ್ನು ಕನಿಷ್ಠ ವೇತನದ ಕಾಯಿದೆಯ ವ್ಯಾಪ್ತಿಗೆ ತಂದು ಸಂಭಾವನೆಯನ್ನು ಹೆಚ್ಚಿಸಬೇಕು.ನಿವೃತ್ತಿ ವೇತನ :-
ಗೌರವ ಧನದಲ್ಲಿ ಬದುಕು ನಡೆಸುತ್ತಿರುವ ಅಂಗನವಾಡಿ. ಬಿಸಿಯೂಟ.ಆಶಾ ಯೋಜನೆಗಳ ಸಿಬ್ಬಂದಿಗಳು ನಿವೃತ್ತರಾದ ನಂತರ ಅವರ ಬದುಕಿಗೆ ಯಾವುದೇ ಭದ್ರತೆ ಇಲ್ಲವಾಗಿದೆ. ಆದುದರಿಂದ ಇವರುಗಳಿಗೆ ನಿವೃತ್ತಿಯಾದ ನಂತರ ಜೀವನ ನಡೆಸಲು ನಿವೃತ್ತಿ ವೇತನ ನೀಡಬೇಕು. ಇ.ಎಸ್.ಐ.ಯೋಜನೆ ವ್ಯಾಪ್ತಿಗೆ ಸೇರಿಸಿ :-ಅತ್ಯಂತ ಕಡಿಮೆ ಸಂಭಾವನೆ ಪಡೆದು ಸೇವೆ ಸಲ್ಲಿಸುತ್ತಿರುವ ಅಂಗನವಾಡಿ. ಬಿಸಿಯೂಟ.ಆಶಾ ಕಾರ್ಯಕರ್ತೆಯರ ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಲು ಇವರುಗಳನ್ನು ಇ.ಎಸ್.ಐ ವ್ಯಾಪ್ತಿಗೆ ಸೇರಿಸಬೇಕು.ಸ್ಕೀಂ ವರ್ಕರ್ ಖಾಯಂಗೊಳಿಸಬೇಕು:-
ಅಂಗನವಾಡಿ.ಬಿಸಿಯೂಟ. ಆಶಾ ಕಾರ್ಯಕರ್ತೆಯರ ಸೇವೆ ಸಮಾಜಕ್ಕೆ ಮೂಲಭೂತ ಅವಶ್ಯಕತೆಗಳಾಗಿದ್ದು. ಇವರುಗಳನ್ನು ಸರಕಾರಿ ನೌಕರರಾಗಿ ಪರಿಗಣಿಸಿ ಖಾಯಂಗೊಳಿಸಬೇಕು.ಪುಸ್ತಕ ದಾಖಲಾತಿ ಪ್ರಕಾರ ಆಹಾರ ಪೂರೈಕೆಯಾಗಲಿ :-ಪೋಷನ್ ಟ್ರ್ಯಾಕ್ ಆಪ್‌ನಲ್ಲಿ ಮೊಬೈಲ್ ಮೂಲಕ ನಮೂದಿಸಿದ ಫಲಾನುಭವಿಗಳಿಗೆ ಮಾತ್ರ ಆಹಾರ ಬಿಡುಗೊಳಿಸಲಾಗುತ್ತಿದೆ. ಆದರೆ ಈ ವಿಷಯದಲ್ಲೂ ತಾಂತ್ರಿಕ ತೊಂದರೆಗಳು ಇರುತ್ತದೆ. ಆದ್ದರಿಂದ ಅನಿವಾರ್ಯವಾಗಿ ಹೆಚ್ಚುವರಿ ಮಾನ್ಯುವಲ್ ಮೂಲಕ ಪುಸ್ತಕಗಳಲ್ಲಿ ನಮೂದಿಸಿದ ನೈಜ ಪಲಾನುಭವಿಗಳಿಗೆ ಆಹಾರ ಸೌಲಭ್ಯಗಳು ಸಕಾಲದಲ್ಲಿ ದೊರಕುತ್ತಿಲ್ಲ. ಆದರೆ ಪ್ರಸ್ತುತ ಮೊಬೈಲ್‌ನಲ್ಲಿ ದಾಖಲಿಸಿದ ಪಲಾನುಭವಿಗಳಿಗೆ ಮಾತ್ರ ಆಹಾರ ಬಿಡುಗಡೆಗೊಳಿಸುತ್ತಿದ್ದು. ಹೆಚ್ಚುವರಿಯಾಗಿ ನಮೂದಿಸಿದ ಫಲಾನುಭವಿಗಳಿಗೆ ಆಹಾರ ದೊರೆಯದೇ ಕಾರ್ಯಕರ್ತರ ಮಧ್ಯೆ ಗಲಾಟೆಗಳು ಆಗುತ್ತಿದೆ ಆದುದರಿಂದ ಪುಸ್ತಕ ದಾಖಲಾತಿ ನೋಂದಣಿ ಪ್ರಕಾರ ಆಹಾರ ಸರಬರಾಜುಗೊಳಿಸಬೇಕು ಹಾಗೂ ಗುಣಮಟ್ಟದ ಮೊಬೈಲ್‌ಗಳನ್ನು ಕಾರ್ಯಕರ್ತೆಯರಿಗೆ ವಿತರಿಸಲು ಕ್ರಮ ವಹಿಸಬೇಕು.
ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬೇಕೆಂದು ಈ ಮೂಲಕ ವಿನಂತಿಸುತ್ತೇವೆ ಎಂದು ಅಂಗನವಾಡಿ ಕಾರ್ಯಕರ್ತರ ಹಾಗೂ ಸಹಾಯಕರ ಒಕ್ಕೂಟದ ರಾಜ್ಯ ನಾಯಕ ಡಾ: ಕೆ ಎಸ್ ಜನಾರ್ಧನ್. ರಾಜ್ಯ ಮುಖಂಡ ತಿಮ್ಮಣ್ಣ ಎ.ಎಲ್.ಕಾರ್ಮಿಕ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್. ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ. ಪಾತ್ರೋಟಿ. ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಒಕ್ಕೂಟದ ಜಿಲ್ಲಾಧ್ಯಕ್ಷೆ ಶಿವಮ್ಮ ಹುಡೇದ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಮತಾಜ್ ಬೇಗಂ ಕಂದಗಲ್.ಶೈಲಜಾ ಶಶಿಮಠ ಲಕ್ಷ್ಮೀ ಹುಲಿಹೈದರ ಕನಕಗಿರಿ.
ಚೆನ್ನಮ್ಮ ಕುಕನೂರು. ಸುಮಂಗಳಾ ಕುಕನೂರು.ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟದ ಜಿಲ್ಲಾ ಸಂಚಾಲಕಿ ಸುನೀತಾ ಕಾರಟಗಿ.
ಪಾರ್ವತಿ ಕಾರಟಗಿ ಮುಂತಾದವರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!