ಹುಲಿಗೆಮ್ಮ ದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರಾಗಿ ವೀರೇಶ್ ಅಧಿಕಾರ ಸ್ವೀಕಾರ
ಕೊಪ್ಪಳ:
ನ್ಯಾಯಾಲಯದ ನಿರ್ದೇಶನದಂತೆ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರ ಆಯ್ಕೆ ನಡೆದಿದೆ. ಬಿಜೆಪಿ ಮುಖಂಡ ವೀರೇಶ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಶಕ್ತಿ ದೇವತೆ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಎ ದರ್ಜೆ ಗೆ ಸೇರಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ವ್ಯವಸ್ಥಾಪನ ಸಮಿತಿ ರಚಿಸಲಾಗಿತ್ತು. ಸಮಿತಿಯಲ್ಲಿ ಪರಶುರಾಮ, ಸುಜಾತಾ, ಅನಿತಾ, ವೀರೇಶ್, ಶೇಖರಪ್ಪ ಶಿಂದೋಗಿ ಹಾಗೂ ಪಂಪಮಗೌಡ ಪಾಟೀಲ್ ಅವರನ್ನು ಸದಸ್ಯರನ್ನಾಗಿ ಅಂದಿನ ಸರ್ಕಾರ ಆದೇಶ ಹೊರಡಿಸಿತ್ತು.
ಬದಲಾದ ರಾಜಕೀಯ ಪರಿಸ್ಥಿತಿ ಯಿಂದ ಸರ್ಕಾರ ಬದಲಾವಣೆಯಾಗಿತು. ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅವರು, ಸರ್ಕಾರ ಆದೇಶದ ಪ್ರಕಾರ ವ್ಯವಸ್ಥಾಪನ ಸಮಿತಿ ರದ್ದು ಆಗಿದೆ. ಹೊಸ ಸಮಿತಿ ರಚಿಸಬೇಕು ಎಂದು ಲೆಟರ್ ಹೆಡ್ ನಲ್ಲಿ ಉಲ್ಲೇಖಿಸಿ ಸರ್ಕಾರಕ್ಕೆ ಕಳುಹಿಸಿದ್ದರು. ಒಂದು ಬಾರಿ ಸಮಿತಿ ರಚನೆಯಾದರೆ 3 ವರ್ಷ ಅಧಿಕಾರ ಇರಲಿದೆ. ಇದನ್ನು ಉಲ್ಲಂಘಿಸಿ ಶಾಸಕ ಹಿಟ್ನಾಳ್ ಪತ್ರ ಬರೆದಿದ್ದರು. ಇದನ್ನು ಪ್ರಶ್ನಿಸಿ ಸಮಿತಿಯ ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಸಮಿತಿಯನ್ನು ಮುಂದುವರಿಸಿ, ಅಧ್ಯಕ್ಷರ ಆಯ್ಕೆ ಮಾಡಲು ನಿರ್ಧರಿಸಿತ್ತು. ಅದರಂತೆ ಬುಧವಾರ ಅಧ್ಯಕ್ಷರ ಅಯ್ಕೆ ಜರುಗಿದ್ದು, ವೀರೇಶ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಗೆ ಹಿನ್ನಡೆಯಾಗಿದ್ದು, ದೇವಸ್ಥಾನ ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸಿರುವುದಕ್ಕೆ ವಿಪಕ್ಷಗಳು ಖಂಡಿಸಿವೆ ಮತ್ತು ನ್ಯಾಯಾಲಯದ ಆದೇಶ ಸ್ವಾಗತಿಸಿವೆ.
ವ್ಯವಸ್ಥಾಪನ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬಳಿಕ ಬಿಜೆಪಿ ಮುಖಂಡರಾದ ಅಮರೇಶ ಕರಡಿ ಅವರು ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ನೂತನ ಅಧ್ಯಕ್ಷರನ್ನು ಸನ್ಮಾನಿಸಿದರು.
ಅಧಿಕಾರ ಸ್ವೀಕಾರ ವೇಳೆ ತಾಲೂಕು ಪಂಚಾಯತ ಮಾಜಿ ಸದಸ್ಯ ಪಾಲಾಕ್ಷಪ್ಪ ಗುಂಗಾಡಿ, ಹುಲಗಿ ಗ್ರಾಮದ ಹಿರಿಯರಾದ ಕೊಟ್ರಯ್ಯ ಸ್ವಾಮಿ ಹಿರೇಮಠ, ಶರಣಪ್ಪ ಆನೆಗೊಂದಿ, ಮಂಜುನಾಥ ಪಾಟೀಲ್ ಹಂದ್ರಾಳ್, ಮಾಜಿ ಎಪಿಎಂಸಿ ಸದಸ್ಯ ಬಸವರಾಜ ಈಶ್ವರಗೌಡ್ರು, ಬಿಜೆಪಿ ಮುಖಂಡ ಗಣೇಶ್ ಹೊರಟ್ನಾಳ್ ಸೇರಿ ಹುಲಗಿ ಗ್ರಾಮದ ಹಿರಿಯರು ಉಪಸ್ಥಿತರಿದ್ದರು ಎಂದು ಅಮರೇಶ ಕರಡಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಶ್ರೀಹುಲಿಗೆಮ್ಮ ದೇವಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸಂತಸ ತಂದಿದೆ. ಶ್ರೀಕ್ಷೇತ್ರದಲ್ಲಿ ಕುಡಿಯುವ ನೀರು, ಶೌಚಾಲಯ, ರಸ್ತೆ, ಯಾತ್ರಿ ನಿವಾಸ ಸೇರಿ ಅಭಿವೃದ್ಧಿ ಕೆಲಸ ಮಾಡುವೆ.
– ವೀರೇಶ್, ಶ್ರೀಹುಲಿಗೆಮ್ಮ ದೇವಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ.
ದಿನೇ ದಿನೇ ಹುಲಿಗೆಮ್ಮನ ದೇವಸ್ಥಾನ ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆಯುತ್ತಿದ್ದು, ಕಳೆದ ಹುಣ್ಣುಮೆಯಂದು 3 ಲಕ್ಷ ಭಕ್ತರು ದರ್ಶನ ಪಡೆದಿರುವ ಸುದ್ದಿ ರಾಜ್ಯಾದ್ಯಂತ ತಿಳಿದಿದೆ. ಧರ್ಮಸ್ಥಳ ಮಂಜುನಾಥೇಶ್ವರ, ತಿರುಪತಿ ತಿಮ್ಮಪ್ಪ, ಶಿರಡಿ ಸಾಯಿಬಾಬಾ, ಅಯೋಧ್ಯೆ ಶ್ರೀರಾಮ ಮಂದಿರ ಸಮಿತಿ ಯಂತೆ ಹುಲಿಗೆಮ್ಮ ದೇವಸ್ಥಾನ ಸಮಿತಿ ಕಾರ್ಯ ನಿರ್ವಹಿಸಿ ಶ್ರೀಕ್ಷೇತ್ರ ಅಭಿವೃದ್ಧಿ ಯಾಗಲಿ.
– ಅಂಬರೇಶ್ ಕರಡಿ, ಬಿಜೆಪಿ ಮುಖಂಡರು.
Comments are closed.