ಮನೆಯಲ್ಲಿ ಅಯ್ಯಪ್ಪಸ್ವಾಮಿ ಪೂಜೆ, ಮಾಲಾಧಾರಿಗಳಿಗೆ ಸನ್ಮಾನ : ಭಾವೈಕ್ಯತೆಗೆ ಮಾದರಿಯಾದ ಮುಸ್ಲಿಂ ಕುಟುಂಬ
ಗಂಗಾವತಿ : ಗಂಗಾವತಿ ನಗರದ ಮುಸ್ಲಿಂ ಕುಟುಂಬವೊಂದು ತಮ್ಮ ಮನೆಯಲ್ಲಿಯೇ ಅಯ್ಯಪ್ಪ ಸ್ವಾಮಿ ಪೂಜೆ ನೆರವೇರಿಸಿ ಮಾಲಾಧಾರಿಗಳಿಗೆ ಸನ್ಮಾನಿಸಿ ಪ್ರಸಾದ ವಿತರಿಸಿ ಭಾವೈಕ್ಯತೆ ಮೆರೆದಿದೆ. ನಗರದ ಕೆ.ಎಫ್.ಮುದ್ದಾಬಳ್ಳಿಯವರ ಮನೆಯಲ್ಲಿ ಪೂಜೆ ನೆರವೇರಿದೆ. ಮುದ್ದಾಬಳ್ಳಿಯವರ ಕುಟುಂಬ ಹಲವಾರು ವರ್ಷಗಳಿಂದಲೂ ಅಯ್ಯಪ್ಪ ಪೂಜೆ ನೆರವೇರಿಸುತ್ತಾ ಬಂದಿದೆ. ಈ ಸಲವೂ ತಮ್ಮ ಮನೆಗೆ ಅಯ್ಯಪ್ಪ ಮಾಲಾಧಾರಿಗಳಿಗೆ ಕರೆದು ಪೂಜೆ ನೆರವೇರಿಸಿದ್ದಾರೆ. ಈ ಮೂಲಕ ಭಾವೈಕ್ಯತೆಯನ್ನು ಮೆರೆದಿದ್ದಾರೆ. ಮೊದಲಿನಿಂದಲೂ ಮುದ್ದಾಬಳ್ಳಿಯವರ ಕುಟುಂಬ ಜಿಲ್ಲೆಯಾದ್ಯಂತ ತಮ್ಮ ಸಮಾಜಮುಖಿ ಸೇವೆಗಳಿಂದ ಗುರುತಿಸಿಕೊಂಡಿದೆ. ಕೆ.ಎಫ್.ಮುದ್ದಾಬಳ್ಳಿ ಜಿಲ್ಲಾ ನದಾಪ ಪಿಂಜಾರ ಸಮಾಜದ ಅಧ್ಯಕ್ಷರೂ ಆಗಿದ್ದಾರೆ.
Comments are closed.