ಶ್ರೀ ವಿದ್ಯಾನಿಕೇತನ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿಶ್ವದಾಖಲೆ
ಶ್ರೀರಾಮನಗರದ ನಮ್ಮ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನ ವಿದ್ಯಾರ್ಥಿಗಳು ರಾಸಾಯನಿಕ ಶಾಸ್ತ್ರದ ಪಿರಿಯಾಡಿಕ್ ಎಲಿಮೆಂಟ್ (ರಾಸಾಯನಿಕ ಆವರ್ತಕ ಅಂಶ) ಗಳ ವಿಷಯಕ್ಕೆ ಸಂಬಂಧಿಸಿದಂತೆ “ವಂಡರ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್” ಮತ್ತು “ಜೀನಿಯಸ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್”ನಲ್ಲಿ ವಿಶ್ವದಾಖಲೆ ಮಾಡುವ ಮೂಲಕ ನಾಡಿನ ಗಮನ ಸೆಳೆದಿದ್ದಾರೆ. ಇಂದು ನಡೆದ ಸ್ಪರ್ಧೆಯಲ್ಲಿ ನಮ್ಮ ಸಂಸ್ಥೆಯ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ 1062 ವಿದ್ಯಾರ್ಥಿಗಳು “ವಂಡರ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್” ಮತ್ತು “ಜೀನಿಯಸ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್”ನಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಕೇವಲ ಒಂದು ನಿಮಿಷ ನಲವತ್ನಾಲ್ಕು ಸೆಕೆಂಡುಗಳಲ್ಲಿ (1.44 ಸೆಕೆಂಡ್‍ಗಳಲ್ಲಿ) 118 ರಾಸಾಯನಿಕ ಪಿರಿಯಾಡಿಕ್ ಎಲಿಮೆಂಟ್‍ಗಳನ್ನು ಹೇಳುವ ಮೂಲಕ ವಿಜಯಶಾಲಿಗಳಾಗಿ ವಿಶ್ವದಾಖಲೆಯನ್ನು ಮಾಡಿದ್ದಾರೆ. “ವಂಡರ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್” ಮತ್ತು “ಜೀನಿಯಸ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್”ನ ಸಂಸ್ಥೆಯ ಮುಖ್ಯಸ್ಥರ ಸಮ್ಮುಖದಲ್ಲಿ ನಡೆದ ಸ್ಪರ್ಧೆಯಲ್ಲಿ ಮಕ್ಕಳು ತಮ್ಮ ಅಪ್ರತಿಮ ಪ್ರತಿಭೆ ತೋರುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ.
ನಮ್ಮ ಶಾಲಾ ಮಕ್ಕಳ ಸಾಧನೆಗೆ ಶ್ರಮಿಸಿದ ನಮ್ಮ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಡಾ|| ಶ್ರೀನಿವಾಸ ಚೌದರಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ರಾಸಾಯನಿಕ ಶಾಸ್ತ್ರದ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಸಾಧನೆಗೆ ಕಾರಣರಾದ ವಿದ್ಯಾರ್ಥಿಗಳ ಪಾಲಕರಿಗೂ, “ವಂಡರ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್” ಮತ್ತು “ಜೀನಿಯಸ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್”ನ ಸಂಸ್ಥೆಯ ಮುಖ್ಯಸ್ಥರಿಗೂ ಹೃತ್ಪೂರ್ವಕ ಅಭಿನಂದನೆಗಳು- ನೆಕ್ಕಂಟಿ ಸೂರಿಬಾಬು
Comments are closed.