ಡಾ.ಅಂಬೇಡ್ಕರ್‌ರವರಿಗೆ ಅವಮಾನ: ಖಂಡನೀಯ- ಗಣೇಶ ಹೊರತಟ್ನಾಳ್ ಕಿಡಿ
ಕೊಪ್ಪಳ: ಗಂಗಾವತಿ ನಗರದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಮೂರ್ತಿಗೆ ಟೊಮೊಟೊ ಸಾಸ್ ಮತ್ತು ಕೊಳಚೆ ಎಸೆದು ಅವಮಾನ ಮಾಡಿದ ಕೀಡಿಗೇಡಿಗಳು ಯಾರೇ ಇದ್ದರೂ ಕೂಡಲೇ ಬಂಧಿಸಬೇಕು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅವರ ಮೌಲ್ಯ, ಅವರ ವ್ಯಕ್ತಿತ್ವ, ಅವರ ಕೊಡುಗೆ, ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ಮತ್ತು ಪ್ರಸ್ತುತ ತಾಂತ್ರಿಕ ಯುಗದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಶೋಚನೀಯ ಸಂಗತಿಯಾಗಿದೆ, ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸಬೇಕು ಇಲ್ಲವಾದರೇ ಮುಂದಿನ ದಿನಮಾನಗಳಲ್ಲಿ ದಲಿತ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಲಿವೆ ಎಂದು ಕರ್ನಾಟಕ ದಲಿತ ಪರ ಹೋರಾಟ ಸಂಘದ ರಾಜ್ಯಾಧ್ಯಕ್ಷರಾದ ಗಣೇಶ ಹೊರತಟ್ನಾಳ್ ತಿಳಿಸಿದ್ದಾರೆ.
. ಕೂಡಲೇ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥತಪ್ಪಿತಸ್ಥರನ್ನು ಬಂಧಿಸುವAತೆ ಮಾಡಬೇಕು. ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.
Comments are closed.