ಬಾಲ್ಯವಿವಾಹ: ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Get real time updates directly on you device, subscribe now.

 

 ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ಮಾಲಗಿತ್ತಿ ಗ್ರಾಮದ ಅಪ್ರಾಪ್ತ ಬಾಲಕಿಯ ಜೊತೆ ಯಲಬುರ್ಗಾ ತಾಲ್ಲೂಕಿನ ಸಂಗನಾಳ ಗ್ರಾಮದ ವ್ಯಕ್ತಿವೊಬ್ಬರೊಂದಿಗೆ ಸಂಗನಾಳ ಗ್ರಾಮದಲ್ಲಿ ಜನವರಿ 01 ರಂದು ಬಾಲ್ಯವಿವಾಹ ಮಾಡಿದ ಹಿನ್ನೆಲೆಯಲ್ಲಿ ಸಂಬAಧಿಸಿದವರ ವಿರುದ್ಧ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜ.01 ರಂದು ಬಾಲ್ಯ ವಿವಾಹ ಮಾಡುತ್ತಿರುವ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ಸಹಾಯವಾಣಿ-1098/112 ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಯಲಬುರ್ಗಾ ಅಂಗನವಾಡಿ ಮೇಲ್ವಿಚಾರಕಿಯರು, ಸಂಗನಾಳ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ-1098 ಮತ್ತು 112 ಹಾಗೂ ಪೋಲಿಸ್ ಸಿಬ್ಬಂದಿಯೊAದಿಗೆ ಸಂಗನಾಳ ಗ್ರಾಮಕ್ಕೆ ತೆರಳಿ ಮದುವೆಯನ್ನು ಮಾಡಬಾರದು ಎಂದು ತಿಳಿಸಿ ಹೇಳಿದಾಗ್ಯೂ ಸಹ ಕೇಳದೆ ಬಾಲಕಿಯ ಬಾಲ್ಯವಿವಾಹವನ್ನು ನೆರವೇರಿಸಿರುತ್ತಾರೆ.
ಆದ್ದರಿಂದ ಬಾಲಕಿಯೊಂದಿಗೆ ಬಾಲ್ಯವಿವಾಹ ಮಾಡಿಕೊಂಡ ವ್ಯಕ್ತಿಯನ್ನು, ಬಾಲ್ಯವಿವಾಹ ನೆರವೇರಿಸಿದ ಬಾಲಕಿಯ ತಂದೆ, ತಾಯಿ, ವರನ ತಂದೆ, ಬಾಲ್ಯವಿವಾಹ ನೆರವೇರಿಸಿದ ಪೂಜಾರಿಗಳು, ಮದುವೆಗೆ ಪೆಂಡಾಲ ಹಾಕಿದ ವ್ಯಕ್ತಿ ಹಾಗೂ ಮದುವೆಯ ಆಮಂತ್ರಣ ಪತ್ರಿಕೆ ಮುದ್ರಿಸಿದ ಪ್ರಿಂಟರ್ಸ ಮಾಲೀಕನ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆ-2006ರನ್ವಯ ಸೆಕ್ಷನ್ 9, 10, 11 ರಡಿ 0002/2024, ಸಂಗನಾಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!