ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ -೨೦೨೪ : ಕೈಲಾಸ ಮಂಟಪದ ಸಿದ್ಧತೆ ಕಾರ್ಯ

Get real time updates directly on you device, subscribe now.

ನಾಡಿನ ಪ್ರಸಿದ್ಧ ಶಿವಯೋಗಿಗಳು, ಶರಣರು, ಜಗದ್ಗುರುಗಳ ಸಮಾಗಮಕ್ಕೆ ಸಾಕ್ಷಿಯಾಗಲಿರುವ ಧಾರ್ಮಿಕ ಕಾಂiiಕ್ರಮಗಳ ತಾಣವಾಗಿರುವ, ಶ್ರೀ ಗವಿಸಿದ್ಧೇಶ್ವರ ಮಠದ ಕರ್ತೃ ಗದ್ದುಗೆಯ ಬೆಟ್ಟದ ಮೇಲಿರುವ ಕೈಲಾಸ ಮಂಟಪದ ಸಿದ್ಧತೆಯ ಕಾರ್ಯಗಳು ಆರಂಭಗೊಂಡಿವೆ. ಮೂರು ದಿನಗಳ ಕಾಲ ನಡೆಯುವ ಧಾರ್ಮಿಕ ಗೋಷ್ಠಿಗಳು, ಭಕ್ತ ಹಿತಚಿಂತನಾ ಸಭೆಗಳ ಮೂಲಕ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರ ಜ್ಞಾನ, ಧಾರ್ಮಿಕ, ವಿಷಯಗಳ ಜೊತೆಗೆ ಸಂಗೀತದ ರಸದೌತಣವನ್ನು ಉಣಬಡಿಸುವ ವೇದಿಕೆ ಇದಾಗಿದೆ.


ಮಹಾರಥೋತ್ಸವದ ಮೈದಾನ, ಜಾತ್ರಾ ಆವರಣ ಸ್ವಚ್ಛತೆ ಕಾರ್ಯ
ಶ್ರೀ ಗವಿಸಿದ್ದೇಶ್ವರ ಜಾತ್ರಾಮಹೋತ್ಸವ ೨೦೨೪ರ ಪ್ರಯುಕ್ತ ಶ್ರೀಮಠದ ಆವರಣದಲ್ಲಿ ಜಾತ್ರೆಗೆ ಸಂಬಂಧಿಸಿದ ಸಿದ್ಧತೆಗಳು ಭರದಿಂದ ಸಾಗಿವೆ. ಶ್ರೀ ಮಠದ ಮಹಾರಥೋತ್ಸವದ ಮೈದಾನ, ಹಾಗೂ ಜಾತ್ರಾ ಆವರಣದ ಸ್ವಚ್ಛತೆ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗಾಗಿ ಮಹಾರಥೋತ್ಸವದ ಮೈದಾನ ಹಾಗೂ ಜಾತ್ರಾ ವಿಶಾಲವಾದ ಆವರಣ ವಿಶಾಲವಾದ ಮೈದಾನವನ್ನು ಸ್ವಚ್ಛಗೊಳಿಸಲಾಗುತ್ತಿದೆ.

Get real time updates directly on you device, subscribe now.

Comments are closed.

error: Content is protected !!