ಕೋರೆಗಾವ್ ಸಿಕೆ ಮರಿಸ್ವಾಮಿ ನೇತೃತ್ವದಲ್ಲಿ ಪಂಜಿನ ಮೆರವಣೆಗೆ
ಗಂಗಾವತಿ : ದಲಿತ ಸಂಘರ್ಷ ಸಮಿತಿ (ಭೀಮವಾದ) ಕೊಪ್ಪಳ ಜಿಲ್ಲಾ ಘಟಕದಿಂದ ನಗರದ ಗಾಂಧಿವೃತ್ತದಲ್ಲಿ ಜಿಲ್ಲಾಧ್ಯಕ್ಷ ಸಿ,ಕೆ ಮರಿಸ್ವಾಮಿ ಬರಗೂರು ಅವರ ನೇತೃತ್ವದೊಂದಿಗೆ ದಲಿತ ಸಮುದಾಯಗಳ ಸ್ವಾಭಿಮಾನದ ಸಂಕೇತವಾದ ೨೦೬ನೇ ಭೀಮ ಕೋರೆಗಾವ್ ವಿಜಯೋತ್ಸವದ ಆಚರಣೆ ನಡೆಸಲಾಯಿತು.
ನಂತರ ಪಂಜಿನ ಮೆರವಣೆಗೆಯು ಗಂಗಾವತಿಯ ಗಾಂಧಿ ವೃತ್ತದಿಂದ, ಬಸವಣ್ಣ ಸರ್ಕಲ್ ಮಾರ್ಗವಾಗಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಯವರೆಗೆ ಬೃಹತ್ ಪಂಜಿನ ಮೆರವಣೆಗೆ ನಡೆಸಲಾಯಿತು. ನಂತರ ಸಿ ಕೆ ಮರಿಸ್ವಾಮಿ ಬರಗೂರು, ಮಾತನಾಡಿ, ದೇಶದಲ್ಲಿ ಯುದ್ಧಗಳು ನಡೆದಿರುವುದು ಹೆಣ್ಣಿಗಾಗಿ ಮಣ್ಣಿಗಾಗಿ ರಾಜ್ಯಕ್ಕಾಗಿ ಹಾಗೂ ತಮ್ಮ ರಾಜ್ಯವನ್ನು ವಿಸ್ತರಣೆ ಮಾಡುವುದಕ್ಕಾಗಿ, ರಾಜ್ಯದ ಪಟ್ಟದ ಮೇಲೆ ಕುಳಿತುಕೊಳ್ಳುವುದಕ್ಕಾಗಿ ಹಲವಾರು ಯುದ್ಧಗಳನ್ನು ನೋಡಿದ್ದೇವೆ, ಆದರೆ ಸ್ವಾಭಿಮಾನಕ್ಕಾಗಿ ಜನತೆ ಗೌರವಕ್ಕಾಗಿ ವ್ಯಕ್ತಿತ್ವಕ್ಕಾಗಿ ಹೆಣ್ಣು ಮಕ್ಕಳ ರಕ್ಷಣೆಗಾಗಿ, ನಡೆದ ಏಕೈಕ ಯುದ್ಧ ಅದು ಭೀಮ ಕೊರೆಯುವ ವಿಜಯೋತ್ಸವ ಎಂದರು. ಶತಶತಮಾನಗಳಿಂದ ದೇಶದ ಮೂಲ ನಿವಾಸಿಗಳಾದ ತೋಷಿತ , ದಲಿತ ಸಮುದಾಯಗಳನ್ನು ತುಳಿತಕ್ಕೆ ಒಳಗಾದವರನ್ನು ಒಟ್ಟಾರೆಯಾಗಿ ಕೆಲವೊಂದು ಕಟ್ಟುಪಾಡುಗಳಿಗೆ ಸಿಲುಕಿಸಿ, ಅನಿಷ್ಠ ಪದ್ದತಿಗಳನ್ನು ಜಾರಿ ಮಾಡಿ ದೂರ ಇಟಿದ್ದರು ಎಲ್ಲಾ ಅವಮಾನಗಳಿಗೆ ರೋಸಿ ಹೋಗಿ ೧೮೧೮ ಜನವರಿ ೧ ರಂದು ಬೆಳಗ್ಗೆ ೯ ಗಂಟೆಯಿಂದ ರಾತ್ರಿ ೯:೦೦ವರೆಗೆ ಯಾವುದೇ ವಿಶ್ರಂತಿ ಪಡೆಯದೆ ನೀರು ಕುಡಿಯದೆ, ಸತತವಾಗಿ ಕೇವಲ ೫೦೦ ಮಹರ್ ಸೈನಿಕರು, ಈ ವ್ಯವಸ್ಥೆಯನ್ನು ಜಾರಿ ಮಾಡಿದ ಎರಡನೇ ಬಾಜಿರಾಯನ ೨೮,೦೦೦ ಸೈನಿಕರನ್ನು, ೮೦೦೦ ಗಜದಳವನ್ನು, ಅಶ್ವದಳವನ್ನು , ಮಹರ್ ಸೈನಿಕರ ದಂಡನಾಯಕರಾದ ಸಿದ್ದನಾಕ ಅವರ ನೇತೃತ್ವದಲ್ಲಿ ಭೀಮಾ ನದಿಯ ತೀರದಲ್ಲಿ, ವ್ಯವಸ್ಥೆಯನ್ನು ಬದಲಾಯಿಸುವುದಕ್ಕಾಗಿ ಅವರೆಲ್ಲರನ್ನು ಮಹರ್ ಸೈನಿಕರು ಕತ್ತಿಯಿಂದ ಸದೆಬಡೆಯುತ್ತಾರೆ ಸಮುದಾಯಗಳ ತಾಕತ್ತು ಪ್ರದರ್ಶಿಸಿ ಧ್ವನಿ ಎತ್ತರಿಸಿದ್ದರು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಚಿಂತಕರಾದ ಡಾಕ್ಟರ್ ಸೋಮಕ್ಕ , ದಲಿತ ಸಂಘಟನೆ ಮುಖಂಡರಾದ ಹುಸೇನಪ್ಪಾ ಅಂಚಿನಾಳ ತಾಲೂಕಾಧ್ಯಕ್ಷರಾದ ಎಲ್ಲಪ್ಪ ಎಂ, ಅಲ್ಪಸಂಖ್ಯಾತ ವಿಭಾಗದ ತಾಲೂಕ ಅಧ್ಯಕ್ಷರಾದ ಅತ್ತು ಸಂಪಂಗಿ, ಉಪಾಧ್ಯಕ್ಷರಾದ ವೆಂಕಟೇಶ್ ಟಿ, ವೀರೇಶ್ ಜಂತಗಲ್, ಬಸವರಾಜ್ ಜಂತಕಲ್, ಮಲ್ಲಿಕಾರ್ಜುನ್ ಚಂತ್ಕಲ್, ಉಪಾಧ್ಯಕ್ಷ ಆರಿಫ್, ದಾವಲ್ , ಹುಲುಗಪ್ಪ ಕಕ್ಕರಗಳು ಡಿಶ್, ಅಬ್ಬುಜರ್, ಸಮೀರ್, ಯಮನೂರ, ಮಾಲಿಂಗ, ದೇವರಾಜ್, ನವೀನ್, ಭುವನೇಶ್ ಗಾಂಧಿನಗರ, ಬಂದೇನವಾಜ್, ಹೀಗೂ ಆಟೋ, ಬಾಬು ಆಟೋ, ಅಮೀರ್ ಕಾರ್ಪೊರೆಂಟರ್, ಫಿರೋಜ್, ಪಿಒಪಿ, ಪೈರಜ್ ಪಿಓಪಿ, ಪಾರಕ್ ಮೆಕಾನಿಕ್,ಅನಿಷ್ಠ, ಹಬ್ಬ ಸಾಲ್, ಡಿಜಿ ರಾಜ, ಮತ್ತು ಆಕಾಶ್ ಇದ್ದರು.
Comments are closed.