.
ಗಂಗಾವತಿ: ಗಂಗಾವತಿ ಸರ್ಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕ ಶ್ರೀ ಅಕ್ಬರ್‌ಸಾಬ್ ಅವರು ಸ್ವಚ್ಛತೆ ಮತ್ತು ಆರೋಗ್ಯದ ಅರಿವು ಕಾರ್ಯಕ್ರಮದಲ್ಲಿ ಹದಿಹರೆಯದವರ ಸಮಸ್ಯೆಗಳ ಕುರಿತಾಗಿ ಮಾತನಾಡಿದರು.
ಅವರು ಜನೇವರಿ-೦೧ ರಂದು ಗಂಗಾವತಿ ತಾಲೂಕಿನ ಬಸವನದುರ್ಗ ಗ್ರಾಮದಲ್ಲಿ ನಡೆಯುತ್ತಿರುವ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್.ಎಸ್/ಎಸ್ ವಾರ್ಷಿಕ ವಿಶೇ? ಶಿಬಿರದಲ್ಲಿ ಸಂವಾದ ಮಾಡುತ್ತಾ, ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಎರಡನೇ ದೇಶ ಭಾರತ. ಅದು ೧೪೦ ಕೋಟಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಇದರಲ್ಲಿ ಬಹುಸಂಖ್ಯಾತರು ಹದಿಹರೆಯದವರು. ಒಟ್ಟಾರೆ ಜನಸಂಖ್ಯೆಯ ಶೇ ೨೨.೫ ರ? ಹದಿಹರೆಯದವರಿದ್ದಾರೆ. ಅವರೆಲ್ಲ ವಿಭಿನ್ನ ಪರಿಸರದಲ್ಲಿ ಬದುಕುತ್ತಿದ್ದಾರೆ. ಹಾಗಾಗಿ ಅವರ ಆರೋಗ್ಯದ ಅಗತ್ಯಗಳೂ ಕೂಡ ವಿಭಿನ್ನವಾಗಿವೆ. ಈ ಹದಿಹರೆಯದವರು ಉಕ್ಕುವ ಉತ್ಸಾಹ, ಸಾಧಿಸುವ ಸ್ಫೂರ್ತಿ ಮತ್ತು ಹೊಸ ಆಲೋಚನೆಗಳ ಒಟ್ಟು ಮೊತ್ತವೇ ಹದಿಹರೆಯದವರು. ಅವರು ದೇಶದ ಧನಾತ್ಮಕ ಶಕ್ತಿ. ಭವಿ?ದ ಉತ್ಪಾದಕತೆಯ ಜವಾಬ್ದಾರಿ ಅವರ ಹೆಗಲಿಗಿದೆ. ಆದರೆ ಅವರು ಆರೋಗ್ಯಕರ ರೀತಿಯಲ್ಲಿ ಬೆಳೆದಾಗ ಮಾತ್ರ ಇದು ಸಾಧ್ಯ. ಬೇರೆ ವಯೋಮಾನದವರಿಗೆ ಹೋಲಿಸಿದಾಗ ಈ ವಯೋಮಾನದವರಲ್ಲಿ ಸಾವಿನ ಸಂಖ್ಯೆ ಕಡಿಮೆಯಿದೆ. ಆದುದರಿಂದ ಈ ಗುಂಪನ್ನು ಆರೋಗ್ಯಕರ ಗುಂಪು ಎಂದೇ ಪರಿಗಣಿಸಲಾಗುತ್ತದೆ. ಕಿಶೋರಾವಸ್ಥೆಯ ಮೊದಲ ಭಾಗದಲ್ಲಿ ಮಕ್ಕಳು ಅನೇಕ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತವೆ. ಸಮಸ್ಯಾ ನಿವಾರಣಾ ಕೌಶಲ್ಯ, ಸಾಮಾಜಿಕ ಕೌಶಲ್ಯ ಮತ್ತು ಆತ್ಮ ವಿಶ್ವಾಸಗಳನ್ನು ಯುವಕರು ತಮ್ಮಲ್ಲಿ ಹೆಚ್ಚಿಸಿಕೊಳ್ಳುವ ಮೂಲಕ ಕಿಶೋರಾವಸ್ಥೆಯಲ್ಲಿ ತಲೆದೋರುವ ನಡವಳಿಕೆಯಲ್ಲಿನ ಏರುಪೇರು, ಆತಂಕ, ಖಿನ್ನತೆ ಮತ್ತು ತಿನ್ನುವ ಹವ್ಯಾಸದಲ್ಲಿನ ಏರುಪೇರು ಸೇರಿದಂತೆ ಇತರ ಅಪಾಯಕಾರಿ ನಡವಳಿಕೆಗಳಾದ ಲೈಂಗಿಕ ನಡವಳಿಕೆಗಳು, ಮಾದಕ ವಸ್ತುಗಳ ಬಳಕೆ ಮತ್ತು ಹಿಂಸಾತ್ಮಕ ನಡವಳಿಕೆಗಳನ್ನು ನಿರ್ವಹಿಸುವ ಕೌಶಲ ಕುರಿತಾಗಿ ನೀವು ಜಾಗೃತರಾಗಿರಬೇಕು, ತಿಳುವಳಿಕೆ ಹೊಂದಿರಬೇಕು. ಮಾನಸಿಕ ತೊಂದರೆಗಳನ್ನು ಶೀಘ್ರದಲ್ಲೇ ಗುರುತಿಸಿ ಆಪ್ತ ಸಮಾಲೋಚನೆ, ನಡವಳಿಕೆ ಚಿಕಿತ್ಸೆ ಮತ್ತು ಸೂಕ್ತ ಮನೋವೈದ್ಯಕೀಯ ಆಪ್ತ ಸಮಾಲೋಚನೆಗಳಿಂದ ಇಂತಹ ತೊಂದರೆಗಳಿಂದ ಶೀಘ್ರವೇ ಹೊರಬರಬೇಕು ಎಂದು ತಿಳಿಸಿದರು.
ಸದರಿ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಸೋಮಶೇಖರ್‌ಗೌಡ, ಬಸವನದುರ್ಗ ಗ್ರಾಮ ಪಂಚಾಯತಿ ಸದಸ್ಯರಾದ ರಾಜಶೇಖರ, ಮುಖ್ಯೋಪಾಧ್ಯಾಯರಾದ ಛತ್ರಪ್ಪ ತಂಬೂರಿ. ಮಂಜುನಾಥ ಸೇರಿದಂತೆ ಇನ್ನಿತರರು ಉಪಸ್ಥಿತದ್ದರು.
Comments are closed.