ಜನೆವರಿಯಲ್ಲಿ ಗದಗ ವಾಡಿ ರೈಲು ಕುಷ್ಟಗಿಗೆ : ಸಂಸದ ಸಂಗಣ್ಣ ಕರಡಿ ಭರವಸೆ
ಜನೆವರಿಯಲ್ಲಿ ಗದಗ ವಾಡಿ ರೈಲು ಕುಷ್ಟಗಿಗೆ ಬರುತ್ತೆ: ಸಂಸದ ಸಂಗಣ್ಣ ಕರಡಿ ಭರವಸ
ಕುಷ್ಟಗಿ 14: ಜನೆವರಿಯಲ್ಲಿ ಗದಗ ವಾಡಿ ರೈಲು ಕುಷ್ಟಗಿಗೆ ಒಡಾಡುತ್ತೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಬುಧವಾರ ಬೆಳಿಗ್ಗೆ ಇಲ್ಲಿನ ಸರ್ಕೂಟ್ ಹೌಸನಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 6073 ಸಾವಿರ ಕೋಟಿ ರೂಪಾಯಿ ಮೌಲ್ಯದ ಸುಮಾರು 251 ಕಿ.ಮೀ ನ ಗದಗ ದಿಂದ ವಾಡಿವರೆಗಿನ ಕಾಮಗಾರಿ.
2019 ನೇ ಸಾಲಿನಲ್ಲಿ ಈ ಕಾಮಗಾರಿ ಆರಂಭ ಮಾಡಲಾಗಿದೆ.
ವೇಗದಲ್ಲಿ ಕೇವಲ 4 ವರ್ಷಗಳಲ್ಲಿ ಅತ್ಯುತ್ತಮವಾಗಿ ಕಾಮಗಾರಿ ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರರು ಕೆಲಸದ ಪ್ರಗತಿಯನ್ನು ಸ್ಲಾಘೀಸಿದರು.
ಈಗಾಗಲೇ ತಳಕಲ್ ದಿಂದ ಸಂಗನಾಳ ವರೆಗೂ 35 ಕಿ.ಮೀ. ಸಂಗನಾಳ ದಿಂದ ಹನುಮಾಪೂರ ವರೆಗೂ ರೈಲ್ವೆ ಹಳಿ ಕಾಮಗಾರಿ ಮುಕ್ತಾಯವಾಗಿದೆ. ಹನುಮಾಪೂರ ದಿಂದ ಲಿಂಗನಬಂಡಿ ಮಾರ್ಗವಾಗಿ ಕುಷ್ಟಗಿ ವರೆಗೂ ಕಾಮಗಾರಿ ಪ್ರಗತಿ ಹಂತದಲ್ಲಿದೆ.
ಎರಡು, ಮೂರು ಸೇತುವೆ ಹಾಗೂ ಎರಡು ಕಡೆ ಜಮೀನು ಮಾಲಿಕರ ತೊಡುಕು ಇರುವುದರಿಂದ ಕಾಮಗಾರಿ ವಿಳಂಬವಾಗಿದೆ ಎಂದು ಕಾರ್ಯನಿರ್ವಾಹಕ ಅಭಿಯಂತರ ರವೀಂದ್ರ ಬಿರದಾರ ಸಂಸದರಿಗೆ ಮಾಹಿತಿ ನೀಡಿದರು.
ಇದಕ್ಕೆ ಉತ್ತರಿಸಿದ ಸಂಸದ ಸಂಗಣ್ಣ ಕರಡಿ ಶಾಸಕರ ಸಹಾಯದಿಂದ ಜಮೀನು ಮಾಲೀಕರೊಂದಿಗೆ ಚರ್ಚಿಸಿ ತ್ವರತಿಗತಿಯಲ್ಲಿ ಈ ಸಮಸ್ಯೆಗಳನ್ನು ಬಗೆಹರಿಸಿ ನಿಗಧಿತ ಸಮಯದಲ್ಲಿ ಕಾಮಗಾರಿ ಮುಕ್ತಾಯಗೊಳಿಸಬೇಕು ಎಂದು ತಾಕೀತು ಮಾಡಿದರು.
ಈಸಂದರ್ಭದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ್, ಪ್ರಭಾಕರ ಚಿಣಿ, ಶೋಸಕರ ಆಪ್ತ ಸಹಾಯಕ ಚಂದ್ರಕಾಂತ ವಡಿಗೇರಿ, ಕೆ.ಮಹೇಶ, ನಾಗರಾಜ ಮೇಲಿನಮನಿ, ಪ್ರಭು ಶಂಕರಗೌಡ ಪಾಟೀಲ್, ಉಮೇಶ ಯಾದವ್, ಸಂಗನಗೌಡ ಜೈನರ್, ರೈಲ್ವೆ ಇಲಾಖೆ ಅಧಿಕಾರಿಗಳಾದ ಅಶೋಕ ಮುದೇಗೌಡರ, ನಂದೀಶ್ ಉಪಸ್ಥಿತರಿದ್ದರು.
Comments are closed.