ಕೆ.ಡಿ.ಎಸ್.ಎಸ್ ಹಾಗೂ ರಿಪಬ್ಲಿಕ್ ಪಾರ್ಟಿ ಆಫ್ ಕರ್ನಾಟಕ ನೂತನ ಪದಾಧಿಕಾರಿಗಳು ಅಯ್ಕೆ

Get real time updates directly on you device, subscribe now.


ಗಂಗಾವತಿ: ದಲಿತ ಸಂಘ? ಸಮಿತಿ ಭೀಮವಾದ (ಡಾ. ಅರ್ ಮೋಹನ್‌ರಾಜ್ ಬಣ) ಮತ್ತು ರಿಪಬ್ಲಿಕ್ ಪಾರ್ಟಿ ಆಫ್ ಕರ್ನಾಟಕ ಕನಕಗಿರಿ ತಾಲ್ಲೂಕಿನಲ್ಲಿ ನೂತನ ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು.
ಗಂಗಾವತಿ ನಗರದ ಕನ್ನಡ ಸಾಹಿತ್ಯ ಪರಿ?ತ್ ಭವನದಲ್ಲಿ ನೂತನ ಪದಾಧಿಕಾರಿಗಳನ್ನು ಅಯ್ಕೆ ಮಾಡುವ ಮೂಲಕ ದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ಹೋರಾಟ ಮಾಡಬೇಕು ಎಂದು ರಾಜ್ಯ ಸಂಚಾಲಕ ಹುಸೇನಪ್ಪ ಹಂಚಿನಾಳ ಹೇಳಿದರು. ಬಡವರ, ದಲಿತರ, ಹಿಂದುಳಿದ ವರ್ಗಗಳ ಹಾಗೂ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲು ಕೆಲಸ ಮಾಡಬೇಕು ಎಂದು ತಿಳಿಸಿದರು. ಎಲ್ಲಿ ಅನ್ಯಾಯ ಅಸಮಾನತೆ ಅಸ್ಪೃಶ್ಯತೆ ಇರುತ್ತದೆ ಅಲ್ಲಿ ನಮ್ಮ ಸಂಘ ಇರುತ್ತದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹನುಮಂತಪ್ಪ ಸೋಮನಾಳ ವಹಿಸಿದ್ದರು. ನಂತರ ಪಾಮಣ್ಣ ಅರಳಿಗನೂರು, ಚನ್ನಪ್ಪ ಕಂಪ್ಲಿ ಮಾತನಾಡಿದರು.
ದಲಿತ ಸಂಘ? ಸಮಿತಿ ಭೀಮವಾದದ ಗಂಗಾವತಿ ತಾಲೂಕ ಸಂಚಾಲಕನಾಗಿ ಭಾ? ಹಣವಾಳ, ಗಂಗಾವತಿ ತಾಲೂಕು ಮಹಿಳಾ ಘಟಕ ಸಂಚಾಲಕರನ್ನಾಗಿ ದೋಣಿ ದುರ್ಗಮ್ಮ ಹಣವಾಳ ಖಜಾಂಚಿಯಾಗಿ ಸುಂಕಮ್ಮ, ಸಂಘಟನಾ ಸಂಚಾಲಕರನ್ನಾಗಿ ರೇಣುಕಮ್ಮ, ದುರ್ಗಮ್ಮ ಹಿರೇಮನಿ, ಚಾಮುಂಡಿ ಜಿರಾಳ್, ಪಾರ್ವತಿ, ಈರಮ್ಮ ಆಯ್ಕೆಯಾದರು.
ರಿಪಬ್ಲಿಕನ್ ಪಾರ್ಟಿ ಆಫ್ ಕರ್ನಾಟಕ ಗಂಗಾವತಿ ತಾಲೂಕ ಅಧ್ಯಕ್ಷರನ್ನಾಗಿ ಸಬೀರ್ ಹುಸೇನ್, ಉಪಾಧ್ಯಕ್ಷರಾಗಿ ಈರಣ್ಣ, ಅಲ್ಲಂ ಸಾಬ್, ಪ್ರಧಾನ ಕಾರ್ಯದರ್ಶಿಗಳಾಗಿ ಬಿ.ಕೆ. ಇಬ್ರಾಹಿಂ, ಸಂಘಟನಾ ಸಂಚಾಲಕರನ್ನಾಗಿ ಪೃಥ್ವಿರಾಜ್ ಸಿಂಗ್, ಸಂಘಟನಾ ಕಾರ್ಯದರ್ಶಿಗಳಾಗಿ ಹನುಮಂತಪ್ಪ ಬಿಳಿಬಾವಿ ಹಾಗೂ ಸದಸ್ಯರಾಗಿ ಖಾದರ್ ಹಣವಾಳ ಇವರುಗಳನ್ನು ಆಯ್ಕೆ ಮಾಡಲಾಯಿತು.

Get real time updates directly on you device, subscribe now.

Comments are closed.

error: Content is protected !!