ಹನುಮಮಾಲಾ ವಿಸರ್ಜನೆ: ಶಾಂತಿ ಕಾಪಾಡಲು ಜಿಲ್ಲಾ ಉಸ್ತುವಾರಿ ಸಚಿವರ ಮನವಿ
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸೇರಿದಂತೆ ನಾನಾ ಇಲಾಖೆಗಳ ಸಹಯೋಗದಲ್ಲಿ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮವು ಈ ಬಾರಿ ವಿಶಿಷ್ಟವಾಗಿ ನಡೆಯುತ್ತಿದೆ. ಸ್ಥಳೀಯರು ಮತ್ತು ಬೇರೆ ಬೇರೆ ಭಾಗಗಳಿಂದ ಬರುವ ಶ್ರೀ ಆಂಜನೇಯ ಸ್ವಾಮಿ ಭಕ್ತರು ಹನುಮಮಾಲಾ ವಿಸರ್ಜನೆ ವೇಳೆಯಲ್ಲಿ ಶಾಂತಿ ಕಾಪಾಡಿ ನಾವು ಶಾಂತಿಪ್ರಿಯರು ಎನ್ನುವ ಸಂದೇಶ ರವಾನಿಸಬೇಕು. ಪುಣ್ಯಭೂಮಿ ಕೊಪ್ಪಳ ಜಿಲ್ಲೆಯ ಅಂಜನಾದ್ರಿಯ ಕೀರ್ತಿಯು ಜಗದಗಲ ಹಬ್ಬಲು ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಕೊಪ್ಪಳ ಜಿಲ್ಲೆಯ ಸಾರ್ವಜನಿಕರು ಸೇರಿದಂತೆ ಅಂಜನಾದ್ರಿಗೆ ಆಗಮಿಸುತ್ತಿರುವ ಎಲ್ಲ ಹನುಮ ಮಾಲಾಧಾರಿಗಳು ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Comments are closed.