ಕೊಪ್ಪಳ ವಿವಿಗೆ ಪ್ರವೇಶಾತಿ: ದಾಖಲೆ ಪರಿಶೀಲನೆ ಪೂರ್ಣ

Get real time updates directly on you device, subscribe now.

2023-24ನೇ ಶೈಕ್ಷಣಿಕ ಸಾಲಿನ ಕೊಪ್ಪಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಗಳ ಪ್ರವೇಶಾತಿಗೆ ಸಂಬAಧಿಸಿದAತೆ ಡಿಸೆಂಬರ್ 21 ಮತ್ತು ಡಿಸೆಂಬರ್ 22 ರಂದು ಮೂಲದಾಖಲೆಗಳ ಪರಿಶೀಲನೆ ಪೂರ್ಣಗೊಂಡಿದೆ. ಆಯ್ಕೆಯಾದ ವಿದ್ಯಾರ್ಥಿಗಳ ಮೆರಿಟ್ ಪಟ್ಟಿಯನ್ನು ವಿಶ್ವವಿದ್ಯಾಲಯದ ಜಾಲತಾಣ (www.koppaluniversity.ac.in)ದಲ್ಲಿ ಪ್ರಕಟಿಸಲಾಗುವುದು. ಮೆರಿಟ್ ಆಧಾರಿತ ಆಯ್ಕೆಗೊಂಡ ವಿದ್ಯಾರ್ಥಿಗಳು 26ನೇ ಡಿಸೆಂಬರ್, 2023 ಮಂಗಳವಾರದAದು (ತಮಗೆ ನಿಗದಿಪಡಿಸಿದ ಸಮಯದೊಳಗಡೆ) ವಿಶ್ವವಿದ್ಯಾಲಯಕ್ಕೆ ಬಂದು ಪ್ರವೇಶ ಪಡೆಯಲು ಸೂಚಿಸಲಾಗಿದೆ. ಈ ಸ್ನಾತಕೋತ್ತರ ಪದವಿಗಳ ಪ್ರವೇಶಕ್ಕೆ ಸಂಬAಧಿಸಿದAತೆ ವಿಶ್ವವಿದ್ಯಾಲಯದ ನಿಯಮಾನುಸಾರ ಸೀಟು ಹಂಚಿಕೆ, ಪ್ರವೇಶ ಶುಲ್ಕಗಳ ವಿವರ ಮತ್ತು ಇದಕ್ಕೆ ಸಂಬAಧಿಸಿದ ಹೆಚ್ಚಿನ ಮಾಹಿತಿಗಳನ್ನು ವಿಶ್ವವಿದ್ಯಾಲಯದ ಜಾಲತಾಣ (www.koppaluniversity.ac.in)ದಲ್ಲಿ ನೋಡಬಹುದಾಗಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!