ವಿಜ್ಞಾನ ಕೇಂದ್ರದಲ್ಲಿ ಗಣಿತ ದಿನಾಚರಣೆ     

Get real time updates directly on you device, subscribe now.

               ಕೊಪ್ಪಳ: ನಗರದ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಆಚರಿಸಲಾಯಿತು. ಮೊದಲಿಗೆ ಭಾರತದ ಪ್ರಖ್ಯಾತ ಗಣಿತಜ್ಞರಾದ ಶ್ರೀನಿವಾಸ್ ರಾಮಾನುಜನ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ವಿಜ್ಞಾನ ಕೇಂದ್ರದ ಪ್ರಭಾರಿ ಮುಖ್ಯಸ್ಥರಾದ ಶರಣಪ್ಪ ಸುಂಕದ ರವರು ಶ್ರೀನಿವಾಸ್ ರಾಮಾನುಜನ್ ಜೀವನ ಚರಿತ್ರೆಯ ಬಗ್ಗೆ ಮಾಹಿತಿ ನೀಡಿದರು. ನೋಡಲ್ ಅಧಿಕಾರಿಗಳಾದ ಶ್ರೀ ಗವಿಸಿದ್ದಯ್ಯ ಬೆಣಕಲ್ ಮಠ ರವರು ಮಾತನಾಡಿ ಗಣಿತ ದಿನದ ಆಚರಣೆ ಮತ್ತು ಅದರ ಇತಿಹಾಸವನ್ನು ಕುರಿತು ಮಾತನಾಡಿದರು. ಕೊಪ್ಪಳ ತಾಲ್ಲೂಕಿನ ಗಣಿತ ಶಿಕ್ಷಕರ ವೇದಿಕೆ ಅಧ್ಯಕ್ಷರಾದ  ರಾಮಣ್ಣ ರವರು ಮಾತನಾಡಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಗಣಿತ ದಿನದ ಅಂಗವಾಗಿ ಬೆಂಗಳೂರಿನ ನೆಹರು ತಾರಾಲಯದ ವತಿಯಿಂದ ಹಮ್ಮಿಕೊಂಡ ಈ ತರಬೇತಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಬೆಂಗಳೂರಿನ ನೆಹರು ತಾರಾಲಯದ ವತಿಯಿಂದ ಪ್ರೌಢಶಾಲಾ ಶಿಕ್ಷಕರಿಗೆ ಆನ್‌ಲೈನ್ ಮೂಲಕ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರಲ್ಲಿ ಕೊಪ್ಪಳ ತಾಲ್ಲೂಕಿನ 30 ಕ್ಕೂ ಹೆಚ್ಚು ಪ್ರೌಢಶಾಲಾ ಗಣಿತ ಶಿಕ್ಷಕರು ಭಾಗವಹಿಸಿದ್ದರು. ಎಲ್ಲಾ ಶಿಕ್ಷಕರು ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ವಿಜ್ಞಾನದ ಮಾದರಿಗಳನ್ನು ವೀಕ್ಷಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೋಡಲ್ ಅಧಿಕಾರಿಗಳಾದ  ಗವಿಸಿದ್ದಯ್ಯ ಬೆಣಕಲ್ ಮಠ, ಉದ್ಘಾಟನೆಯನ್ನು   ಶರಣಪ್ಪ ಸುಂಕದ, ಮುಖ್ಯ ಅತಿಥಿಗಳಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ   ಸಿದ್ಧಲಿಂಗೇಶ ಹಮ್ಮಿಗಿ, ಕೊಪ್ಪಳ ತಾಲ್ಲೂಕು ಗಣಿತ ಶಿಕ್ಷಕರ ವೇದಿಕೆ ಅಧ್ಯಕ್ಷರಾದ   ರಾಮಣ್ಣ ಡಿ, ಕೊಪ್ಪಳ ಪ್ರೌಢಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಶ್ರೀಮತಿ ಜಯಶ್ರೀ ಅಂಗಡಿ, ವಿಜ್ಞಾನ ಕೇಂದ್ರದ ಕ್ಯೂರೇಟರ್ ರಾದ  ಮೈಲಾರಪ್ಪ, ಸಿಬ್ಬಂದಿಗಳಾದ   ಗೋಪಾಲ್ ರಾವ್, ಶ್ರೀ ಅನುಷಾರಡ್ಡಿ,  ಫಕೀರ್ ಸಾಬ್,   ಶಂಕ್ರಪ್ಪ, ಶ್ರೀಮತಿ ರೇಣುಕಾ ಸೇರಿದಂತೆ ಕೊಪ್ಪಳ ತಾಲ್ಲೂಕಿನ 30 ಕ್ಕೂ ಹೆಚ್ಚು ಗಣಿತ ಶಿಕ್ಷಕರು ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು..

Get real time updates directly on you device, subscribe now.

Comments are closed.

error: Content is protected !!