ಗಂಗಾವತಿ ನಗರದಲ್ಲಿ ಡಿಸೆಂಬರ್-೨೨ನೇ ಶುಕ್ರವಾರದಂದು ಹನುಮಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ

Get real time updates directly on you device, subscribe now.

ಗಂಗಾವತಿ: ನಗರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ೨೨ನೇ ಡಿಸೆಂಬರ್ ಶುಕ್ರವಾರದಂದು ತಾಲೂಕಿನ ಹನುಮಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಭಜರಂಗದಳ, ಉತ್ತರ ಪ್ರಾಂತದ ಕೊಪ್ಪಳ ಜಿಲ್ಲಾ ಸಂಯೋಜಕರಾದ ಕೆ.ಎಂ ದೊಡ್ಡಬಸಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದರು.
ಅಂದು ಬೆಳಿಗ್ಗೆ ೧೦:೦೦ ಗಂಟೆಗೆ ಎ.ಪಿ.ಎಂ.ಸಿ ಚನ್ನಬಸವಸ್ವಾಮಿ ದೇವಸ್ಥಾನ (೧ನೇ ಗೇಟ್) ದಿಂದ ಹನುಮಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಪ್ರಾರಂಭಗೊಂಡು, ಯಾತ್ರೆಯು ಸಿ.ಬಿ.ಎಸ್ ವೃತ್ತ, ಮಹಾವೀರ ವೃತ್ತ, ಗಾಂಧಿವೃತ್ತ, ಬಸವಣ್ಣ ಸರ್ಕಲ್, ಅಂಬೇಡ್ಕರ್ ವೃತ್ತ, ಕೊಟ್ಟೂರುಬಸವೇಶ್ವರ ದೇವಸ್ಥಾನದವರೆಗೆ ನಡೆದು ಮುಕ್ತಾಯಗೊಳ್ಳಲಿದೆ.
ಈ ಯಾತ್ರೆಯಲ್ಲಿ ಗಂಗಾವತಿ, ಕನಕಗಿರಿ, ಕಾರಟಗಿ ಹಾಗೂ ಎಲ್ಲಾ ಸುತ್ತಮುತ್ತಲಿನ ಹನುಮಮಾಲಾಧಾರಿಗಳು, ಗಣ್ಯಮಾನ್ಯರು, ಸಾರ್ವಜನಿಕರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿಶ್ವಹಿಂದೂ ಪರಿಷತ್ ಭಜರಂಗದಳ ಕೋರಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ವಿನಯ ಪಾಟೀಲ್, ತಾಲೂಕ ಸಂಯೋಜಕರಾದ ರಾಮಾಂಜನೇಯ, ವಿಬಗ ಸಂಯೋಜಕರಾದ ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!