ಹೊಸ ಆಯಾಮಕ್ಕಾಗಿ ಬಯಲಾಟಕ್ಕೆ ಪ್ರಜ್ಞಾವಂತರ ಅಗತ್ಯವಿದೆ: ಸೋಮೇಶ್ ಉಪ್ಪಾರ್
ಹೆಬ್ಬಾಳದಲ್ಲಿ ಅದ್ಧೂರಿ ಬಯಲಾಟ ಪ್ರದರ್ಶನ
ಗಂಗಾವತಿ: ನಗರ ಪ್ರದೇಶಗಳಲ್ಲಿ ಕಣ್ಮರೆಯಾಗುತ್ತಿರುವ ಬಯಲಾಟ ಕಲೆಯು ಗ್ರಾಮೀಣ ಭಾಗದಲ್ಲಿಯೂ ಅಳಿವಿನಂಚಿನಲ್ಲಿದೆ ಅನಕ್ಷರಸ್ಥರೇ ಹೆಚ್ಚಾಗಿ ಆಸಕ್ತಿ ಹೊಂದಿರುವ ಬಯಲಾಟ ಕ್ಷೇತ್ರಕ್ಕೆ ಪ್ರಜ್ಞಾವಂತರು ಆಗಮಿಸಿ ಹೊಸ ಆಯಾಮ ನೀಡುವ ಅಗತ್ಯವಿದೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಸಂಪನ್ಮೂಲ ವ್ಯಕ್ತಿ ಸೋಮೇಶ್ ಉಪ್ಪಾರ್ ಹೇಳಿದರು.
ಅವರು ಹೆಬ್ಬಾಳ ಗ್ರಾಮದಲ್ಲಿ ಶ್ರೀ ದೇವಿ ಜಾತ್ರಾ ಮಹೋತ್ಸವಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ನಿಜ ಶರಣ ಅಂಬಿಗರ ಚೌಡಯ್ಯ ಬಯಲಾಟ ಟ್ರಸ್ಟ್ ಸಹಯೋಗದೊಂದಿಗೆ ಪ್ರದರ್ಶನಗೊಂಡ ಶ್ರೀ ರೇಣುಕಾ ಜಮದಾಗ್ನಿ ಕಲ್ಯಾಣ ಬಯಲಾಟದಲ್ಲಿ ಭಾಗವಹಿಸಿ ಮಾತನಾಡಿದರು. ಬಯಲಾಟ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿ ಬಂದಿರುವ ದುರ್ಗಾದಾಸ್ ಅವರು ಅಕಾಡೆಮಿ ಚುಕ್ಕಾಣೆ ಹಿಡಿದಿದ್ದು, ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಸಾರ್ವಜನಿಕರಿಂದಲೂ ಸಹಕಾರ ಬೇಕಿದೆ, ಕಲಾವಿದರ ದಾಖಲೀಕರಣ ಆರಂಭಗೊಂಡಿದೆ ಕೊಪ್ಪಳ ಜಿಲ್ಲೆಯ ಕಲಾವಿದರು ತಮ್ಮ ದಾಖಲಾತಿಗಳನ್ನು ಸಿದ್ದಗೊಳಿಸಿ ನಮ್ಮನ್ನು ಸಂಪರ್ಕಿಸಿದರೆ ತಮ್ಮ ಗ್ರಾಮಗಳಿಗೆ ಭೇಟಿ ನೀಡಿ ದಾಖಲೀಕರಣ ಮಾಡಲಾಗುವುದು ವಿವರಿಸಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿಲ್ಲಿ ಕೊಂಡಯ್ಯ, ಕೊಪ್ಪಳ ಜಿಲ್ಲಾ ಕಲಾವಿದರ ವೇದಿಕೆ ಅಧ್ಯಕ್ಷ ಹಾಗು ಪತ್ರಕರ್ತ ನಾಗರಾಜ್ ಇಂಗಳಗಿ, ತಾಪಂ ಮಾಜಿ ಸದಸ್ಯ ಪಕೀರಯ್ಯ ನ್ಯಾಯವಾದಿ ಯಮನೂರಪ್ಪ ಇತರರಿದ್ದರು. ಬಯಲಾಟದಲ್ಲಿ ಯಮನೂರಪ್ಪ ವಕೀಲರು, ಭರಮಪ್ಪ ಭುನಳ್ಳಿ, ಮೌಲಪ್ಪ ಕನಕಗಿರಿ, ಗಂಗಪ್ಪ ಸಂತಂಗಿ, ಹನುಮಂತಪ್ಪ ಪತಂಗಿ, ಪ್ರದೀಪ್, ಸತೀಶ್ ನಾಗೇನಹಳ್ಳಿ, ದೇವೆಂದ್ರ ಪೂಜಾರ್, ತಿಮ್ಮಪ್ಪ ಸಿಂಗ್ರಿ, ಮಲ್ಲಿಕಾರ್ಜುನ ಬಿಸೆಟ್ಟಿ, ರಾಜು ಆಗೋಲಿ, ಚಾಮುಂಡಿ ಎಳ್ಳಾರ್ಥಿ, ಸುಜಾತ ವಿರುಪಾಪುರ, ಬ್ಲಾಕ್ ಸುಮ ಪ್ರಮುಖಪಾತ್ರ ನಿರ್ವಹಿಸಿದರು. ಜೆ.ಶಿವಲಿಂಗಯ್ಯಸ್ವಾಮಿ ನಾರಾಯಣಪುರ ಇವರ ನಿರ್ದೇಶಿಸಿದ್ದರು. ಎಮ್ಮಿಗನೂರು ಎಸ್. ಬಸಪ್ಪ ಇವರು ರಂಗಸಜ್ಜಿಕೆ ನಿರ್ವಹಿಸಿದರು ಬಯಲಾಟಕ್ಕೆ ಕಿಕ್ಕಿರಿದು ಜನಸ್ತೋಮ ನೆರೆದಿದ್ದು ವಿಶೇಷವಾಗಿತ್ತು.